More

    ಹತ್ರಾಸ್​ ಪ್ರಕರಣ ಸಿಬಿಐ ತನಿಖೆಗೆ: ಸಿಎಂ ಯೋಗಿ ಶಿಫಾರಸು

    ನವದೆಹಲಿ: ದೇಶದ ಗಮನ ಸೆಳೆದಿರುವ ಹತ್ರಾಸ್​ ಅತ್ಯಾಚಾರ ಪ್ರಕರಣ ಭಾರಿ ಸದ್ದು ಮಾಡುತ್ತಿರುವ ಬೆನ್ನಿಗೆ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮಹತ್ವದ ಹೆಜ್ಜೆಯೊಂದನ್ನು ಇರಿಸಿದ್ದಾರೆ.

    ಪ್ರಕರಣದ ವಿರುದ್ಧ ವಿರೋಧ ಪಕ್ಷಗಳು ಕಿಡಿಕಾರುತ್ತಿರುವ ನಡುವೆ ಅವರು ಹತ್ರಾಸ್ ಗ್ಯಾಂಗ್​ರೇಪ್​ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸಿಎಂ ಯೋಗಿ ಆದಿತ್ಯನಾಥ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

    ಇದನ್ನೂ ಓದಿ: ಚಾಹಲ್-ಪಡಿಕಲ್ ಸಾಹಸ, ಲಯ ಕಂಡ ಕೊಹ್ಲಿ, ಆರ್‌ಸಿಬಿಗೆ 3ನೇ ಗೆಲುವು

    ಈ ನಡುವೆ ವಿರೋಧದ ನಡುವೆಯೂ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಹತ್ರಾಸ್​ಗೆ ತೆರಳಿ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಜಗತ್ತಿನ ಯಾವ ಶಕ್ತಿಯೂ ಸಂತ್ರಸ್ತೆಯ ಕುಟುಂಬದ ದನಿಯನ್ನು ಹತ್ತಿಕ್ಕಲಾಗದು ಎಂದು ರಾಹುಲ್​ ಹೇಳಿದ್ದಾರೆ. ಮತ್ತೊಂದೆಡೆ, ಎಲ್ಲ ರಾಜಕೀಯಕ್ಕಾಗಿ, ನ್ಯಾಯಕ್ಕಾಗಿ ಅಲ್ಲ ಎಂಬುದಾಗಿ ರಾಹುಲ್​ ಭೇಟಿಯನ್ನು ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. (ಏಜೆನ್ಸೀಸ್​)

    ಟ್ರಂಪ್‌ಗೆ ಆಗಿರುವ ಸ್ಥಿತಿ ನೋಡಿಯಾದರೂ ಮಾಸ್ಕ್ ಹಾಕಿಕೊಳ್ಳಿ: ಬಿಡೆನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts