More

    ‘ಚೆನ್ನಾಗಿದ್ದೀರಾ ತಾಯಿ.. ಆರೋಗ್ಯದ ಕಡೆಗೆ ಲಕ್ಷ್ಯ ಕೊಡಿ.. ಮತ್ತೇನು ಸಹಾಯ ಮಾಡ್ಲಿ?’

    ‘ಸಮಸ್ಯೆ-ಸವಾಲುಗಳು ಒಂದು ವರ್ಷ; ಪರಿಹಾರದ ಸ್ಪರ್ಶ’ ಜನಸ್ನೇಹಿ ಆಡಳಿತದ ಒಂದು ವರ್ಷದ ಸಾಧನೆಯ ಸಮಾರಂಭದಲ್ಲಿ ಸಿಎಂ ಹೀಗೆ ಫಲಾನುಭವಿಗಳ ಜತೆ ನಡೆಸಿದ ನೇರ ಸಂವಾದ ‘ಭಾವ’ತೀರಕ್ಕೆ ಕರೆದೊಯ್ಯಿತು.

    ವಿಜಯಪುರ ಜಿಲ್ಲೆಯ ಪದ್ಮಶ್ರೀ ವಣಕುದರಿ ಮಾತನಾಡಿ, ‘ನಾನು 8 ತಿಂಗಳ ಗರ್ಭಿಣಿ, ಕರೊನಾ ಸೋಂಕು ದೃಢಪಟ್ಟಾಗ ಮನೆಯಲ್ಲೇ ಪ್ರತ್ಯೇಕವಾಗಿರಲು ಜಿಲ್ಲಾಡಳಿತ ಅವಕಾಶ ನೀಡಿತು. ನಿರಂತರ ಆರೋಗ್ಯ ತಪಾಸಣೆ ಮಾಹಿತಿ, ಔಷಧ ನೆರವಿನ ಜತೆ ಕೌನ್ಸೆಲಿಂಗ್ ಮೂಲಕ ಆತ್ಮಸ್ಥೈರ್ಯ ತುಂಬಿತು’ ಎಂದು ಅನುಭವ ಹಂಚಿಕೊಂಡರು. ‘ಆರೋಗ್ಯವಾಗಿದ್ದೀಯಾ ತಾಯಿ, ಮತ್ತೇನು ಸಹಾಯ ಮಾಡ್ಲಿ’ ಎಂದು ಸಿಎಂ ವಿಚಾರಿಸಿದಾಗ, ಇದೇ ರೀತಿ ರಾಜ್ಯದ ಎಲ್ಲ ಗರ್ಭಿಣಿಯರಿಗೆ ನೆರವು ನೀಡಿ ಎಂದು ಕೋರಿದರು. ನೆರೆಯಿಂದಾಗಿ ಮನೆ ಕಳೆದುಕೊಂಡಿದ್ದಾಗ ಸರ್ಕಾರದ 5 ಲಕ್ಷ ರೂ. ಪರಿಹಾರ ನಮ್ಮ ಪಾಲಿಗೆ ದೊಡ್ಡ ನಿಧಿಯಾಯಿತು. ಯಡಿಯೂರಪ್ಪ ಅವರಿಗೆ ಒಳ್ಳೆಯದಾಗಲಿ ಎಂದು ಶಿವಮೊಗ್ಗ ಮಂಜುಳಾ ಗದ್ಗದಿತರಾದರು. ಪ್ರವಾಹ ಕಾಲದಲ್ಲಿ ತಾತ್ಕಾಲಿಕ ವಸತಿ-ಊಟ ನೀಡಿದ್ದನ್ನು ನಂಜನಗೂಡು ತಾಲೂಕಿನ ಬಸವಣ್ಣ ಸ್ಮರಿಸಿದರು. ಈರುಳ್ಳಿ ಬೆಲೆ ಕುಸಿತದಿಂದಾದ ನಷ್ಟದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ನಿವೇದಿಸಿದ ಅಹವಾಲಿಗೆ ಯಡಿಯೂರಪ್ಪ ಓಗೊಟ್ಟು, ನಿಜವಾದ ರೈತ ನಾಯಕರು ಎಂಬುದನ್ನು ಸಾಬೀತುಪಡಿಸಿದರು ಎಂದು ಹಿರಿಯೂರು ತಾಲೂಕಿನ ರೈತ ಮಹಿಳೆ ವಸಂತಕುಮಾರಿ ಉದ್ಗರಿಸಿದರು. ಸೋಂಕಿನಿಂದ ಚೇತರಿಸಿಕೊಂಡ ತುಮಕೂರು ಜಿಲ್ಲಾಸ್ಪತ್ರೆ ಶುಶ್ರೂಷಕಿ ಕಲಾವತಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಸಿದ್ಧ ಎಂದರು. ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಸಿಎಂ, ನಿಮ್ಮಂಥ ವಾರಿಯರ್ಸ್ ಸಾವಿರಾರು ಜನರಿಗೆ ಧೈರ್ಯ ತುಂಬಬಲ್ಲರು ಎಂದರು. ಇದನ್ನೂ ಓದಿ: ರಾಮಮಂದಿರ ಭೂಮಿ ಪೂಜೆಗೆ, ಮಣ್ಣು ಹಿಡಿದು 800 ಕಿ.ಮೀ.ಕಾಲ್ನಡಿಗೆಯಲ್ಲಿ ಹೊರಟ ರಾಮ ಭಕ್ತ ಮುಸ್ಲಿಂ ವ್ಯಕ್ತಿ

    ಮತ್ತೆ ಪರಿಹಾರಕ್ಕೆ ಮೊರೆ: ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ ಆರ್ಥಿಕ ನೆರವು ನೀಡಿದ್ದರಿಂದ ಮಡಿವಾಳ ಸಮುದಾಯದ ಕುಟುಂಬಗಳಿಗೆ ನೆಮ್ಮದಿ ದೊರೆತಿದೆ ಎಂದ ಹಾಸನದ ಪುಷ್ಪಾ ಮಡಿವಾಳ, ಕರೊನಾ ಇಲ್ಲಿಗೆ ನಿಲ್ಲುವ ಲಕ್ಷಣಗಳಿಲ್ಲದ್ದರಿಂದ ಪ್ರತಿ ಕುಟುಂಬಕ್ಕೆ ಮತ್ತೊಂದು ಕಂತಿನಲ್ಲಿ 10,000 ರೂ. ಪರಿಹಾರ ನೀಡಬೇಕೆಂದು ಮೊರೆ ಇಟ್ಟರು. ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಕಷ್ಟಕ್ಕೆ ಸ್ಪಂದಿಸಿರುವೆ, ಇನ್ಮುಂದೆ ಕರೊನಾ ಜತೆಗೆ ಬಾಳುವುದಕ್ಕೆ ಕಲಿಯಬೇಕು ಎಂದು ಸಿಎಂ ಆತ್ಮವಿಶ್ವಾಸ ತುಂಬಿ, ಮತ್ತೊಂದು ಕಂತಿನ ಪರಿಹಾರ ಸದ್ಯಕ್ಕೆ ಅಸಾಧ್ಯ ಎಂದರು. ರಾಣೆಬೆನ್ನೂರಿನ ಜ್ಯೋತಿ, ನೆರೆ ಪರಿಹಾರದಲ್ಲಿ ಬಿದ್ದ ಮನೆ ಕಟ್ಟಿಕೊಟ್ಟಿದ್ದು, ಕುಷ್ಟಗಿ ತಾಲೂಕಿನ ರೈತ ಶಿವನಗೌಡ ಎನ್​ಆರ್​ಇಜಿ ಆಸರೆಯಾಗಿದ್ದನ್ನು ಹೇಳಿದರು. ಶಿಡ್ಲಘಟ್ಟದ ನೇಕಾರ ಬಿ.ಎಲ್.ರವಿಚಂದ್ರ, ಕಷ್ಟ ಕಾಲದಲ್ಲಿ ಸರ್ಕಾರ ಸಮುದಾಯದ ಕೈಹಿಡಿದ ಪರಿಯನ್ನು ಕೊಂಡಾಡಿದರು. ನೇರ ಸಂವಾದದಲ್ಲಿ ಆಯ್ದ 10 ಜಿಲ್ಲೆಗಳ ಫಲಾನುಭವಿಗಳು ಪಾಲ್ಗೊಂಡಿದ್ದರು.

    ಕರೊನಾ ಪಿಡುಗು ರಾಜ್ಯದ ಅಭಿವೃದ್ಧಿಗೆ ಕಂಟಕವಾಯಿತೆಂಬ ನೋವು ಕಾಡುತ್ತಿದೆ: ಸಿಎಂ ಬಿಎಸ್​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts