More

    ಆರ್​ಎಸ್​ಎಸ್​ ನಾಯಕರ ಜತೆ ಸಿಎಂ-ಸಚಿವರ ಸಭೆ ಮುಕ್ತಾಯ; ಇಲ್ಲಿದೆ ಮಾತುಕತೆಯ ಮಾಹಿತಿ..

    ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ನಾಯಕರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ಸಭೆ ನಡೆಸಿದ್ದು, ಬಹಳಷ್ಟು ಪ್ರಮುಖ ವಿಚಾರಗಳ ಚರ್ಚೆ ನಡೆದಿದೆ. ಕೆಲವೇ ಸಮಯದ ಹಿಂದೆ ಸಭೆ ಮುಕ್ತಾಯವಾಗಿದ್ದು, ಮಹತ್ವದ ಸಂಗತಿಗಳು ಹೊರಬಿದ್ದಿವೆ.

    ಚಾಮರಾಜಪೇಟೆಯಲ್ಲಿರುವ ಕೇಶವಶಿಲ್ಪದಲ್ಲಿ ಸಿಎಂ ಬೊಮ್ಮಾಯಿ ಹಾಗೂ ಸಚಿವರಾದ ಆರ್​. ಅಶೋಕ, ಅಶ್ವತ್ಥನಾರಾಯಣ, ಡಾ.ಕೆ.ಸುಧಾರಕ್ ಮತ್ತು ಮುನಿರತ್ನ ಮುಂತಾದವರು ಆರ್​​ಎಸ್​ಎಸ್​ ನಾಯಕ ಜತೆ ಸಭೆ ನಡೆಸಿದ್ದಾರೆ. ಅಲ್ಲದೆ ಸಭೆ ಬಳಿಕ ಸಚಿವರು ತೆರಳಿದ ನಂತರವೂ ಸಿಎಂ ಆರ್​ಎಸ್​ಎಸ್​ ನಾಯಕರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.

    ಪಕ್ಷ ಸಂಘಟನೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ವಿಶೇಷ ಒತ್ತು ನೀಡುವಂತೆ ಈ ಸಭೆಯಲ್ಲಿ ಸೂಚನೆ ಹೊರಹೊಮ್ಮಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ನಿರೀಕ್ಷೆಯಂತೆ ಸಂಘಟನೆ ಆಗದಿರುವ ಬಗ್ಗೆ ಸಮಾಲೋಚನೆ ಕೂಡ ನಡೆದಿದೆ. ಪಕ್ಷ ಹಾಗೂ ಸರ್ಕಾರದ ಬಗ್ಗೆ ನೆಗೆಟಿವ್ ಇಮೇಜ್ ಉಂಟಾಗದಂತೆ ಕೆಲಸ ಮಾಡುವಂತೆಯೂ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ವೋಟರ್ ಗೇಟ್ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಆರ್​​ಎಸ್​ಎಸ್​ ನಾಯಕರು, ಪ್ರತಿಪಕ್ಷಗಳ ಆರೋಪಗಳಿಂದ ಸಾರ್ವಜನಿಕ ವಲಯದಲ್ಲಿ ಸರ್ಕಾರ ಹಾಗೂ ಪಕ್ಷದ ಇಮೇಜ್ ಹಾಳಾಗುತ್ತಿದೆ. ಆ ಹಾನಿ ಆಗದಂತೆ ನಿಯಂತ್ರಿಸುವಂತೆಯೂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

    ಅಂಬಿ ಇಲ್ಲದ ನಾಲ್ಕು ವರುಷ; ಪತಿಯ ನೆನೆದು ಸುಮಲತಾ ಹೇಳಿದ್ದು ಹೀಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts