More

    ಭ್ರಷ್ಟಾಚಾರ ನಡೆದಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸಿಎಂ ಬಿಎಸ್​ವೈ ನೀಡಿದ ಉತ್ತರವೇನು?

    ಬೆಂಗಳೂರು: ಅನಗತ್ಯ ಟೀಕೆ ಟಿಪ್ಪಣಿ ಹೊರತುಪಡಿಸಿ, ಕೋವಿಡ್ ನಿಯಂತ್ರಣ ಮಾಡಲು ರಕ್ಷಣಾತ್ಮ ಸಲಹೆ ಕೊಡುವಂತೆ ವಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮನವಿ ಮಾಡಿದರು.

    ಇದನ್ನೂ ಓದಿ: ದೇಶದ 18 ಕೋಟಿ ಜನರಿಗೆ ಈಗಾಗ್ಲೇ ಕರೊನಾ ಬಂದು ಹೋಗಿದೆ: ಕರ್ನಾಟಕಕ್ಕೂ ಸಿಕ್ತು ಗುಡ್​ ನ್ಯೂಸ್​!

    ಇಂದು ಸಂಜೆ 5 ಗಂಟೆಗೆ ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿದ ಬಿಎಸ್​ವೈ, ಕರೊನಾ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಸ್ಪಷ್ಟನೆ ನೀಡಿದರು. 6500 ಬೆಡ್​​ಗಳನ್ನ ನಾವು ಪೂರ್ಣ ಖರೀದಿ ಮಾಡಿದ್ದೇವೆ. ಹಾಸಿಗೆಗಳನ್ನು ಪುನರ್ ಬಳಸಲ್ಲ. ಮಂಚಗಳನ್ನು ಮಾತ್ರ ಬಳಸುತ್ತೇವೆ. ನೀವು ಏನೇ ಮಾಹಿತಿ ಕೇಳಿದ್ರು 24 ಗಂಟೆ ಒಳಗೆ ಮಾಹಿತಿ ಕೊಡ್ತೀವಿ ಎಂದರು.

    ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಲೋಪ ಆಗಿಲ್ಲ. ನಿಮಗೆ ಯಾವುದೇ ಅನುಮಾನ ಇದ್ರೆ ಮಾಹಿತಿ ಕೊಡಲು ಸಿದ್ಧರಿದ್ದೇವೆ. ಒಂದು ರೂಪಾಯಿ ಕೂಡ ನಮ್ಮ ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿಲ್ಲ. ಈ ಸಂದರ್ಭದಲ್ಲಿ ಪಕ್ಷಭೇದ ಮರೆತು ಕೋವಿಡ್ ಎದುರಿಸೋಣ. ಕೋವಿಡ್ ತಡೆಯುವ ಪೂರಕವಾಗಿ ಕೆಲಸ ಮಾಡೋಣ. ಜನರಲ್ಲಿ ಗೊಂದಲ ಉಂಟುಮಾಡುವುದು ಬೇಡ ಎಂದು ಪ್ರತಿಪಕ್ಷಗಳಿಗೆ ಕಿವಿಮಾತು ಹೇಳಿದರು.

    ಇದನ್ನೂ ಓದಿ: ಸಾನಿಯಾ ಮಿರ್ಜಾ ಭೇಟಿಯಾಗಲು ಪತಿ ಶೋಯಿಬ್​ ಮಲಿಕ್​ ಪರದಾಟ…!

    ಮಾಧ್ಯಮ ಸಂಪೂರ್ಣ ಸಹಕಾರ ಕೊಡ್ತಿದ್ದಾರೆ. ಕ್ರಿಯಾಶೀಲ ಸಲಹೆಗಳನ್ನು ಕೊಟ್ಟಿದ್ದಾರೆ. ಪ್ರತಿಪಕ್ಷ ಮತ್ತು ಮಾಧ್ಯಮ ನಮಗೆ ಸಹಕಾರ ಕೊಟ್ರೆ ಇದನ್ನ ಎದುರಿಸಬಹುದು. ಸರ್ಕಾರದ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. ಯಾವುದೇ ವದಂತಿಗಳಿಗೆ ಅವಕಾಶ ಕೊಡದೇ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆಂಬುಲೆನ್ಸ್ ಸಮಸ್ಯೆ ಇಲ್ಲದ ರೀತಿಯಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದರು.

    ಕರುನಾಡು ಕಂಪ್ಲೀಟ್ ಫ್ರೀ, ರಾಜ್ಯದಲ್ಲಿ ಇನ್ಮುಂದೆ ಎಲ್ಲೂ ಕೂಡ ಲಾಕ್​ಡೌನ್​ ಇರಲ್ಲ: ಸಿಎಂ ಬಿಎಸ್​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts