ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಪಾಸಿಟಿವ್ ಆದವರನ್ನು ಮನೆಯಲ್ಲಿ ಬಿಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.
ಹಳ್ಳಿಗಳಲ್ಲಿ ಕರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ, ಮೈಸೂರು, ಬೆಳಗಾವಿ ಜಿಲ್ಲೆಯ ಪಂಚಾಯತ್ ಸದಸ್ಯರು ಮತ್ತು ಪಿಡಿಒಗಳ ಜತೆ ಕರೊನಾ ನಿಯಂತ್ರಣದ ಬಗ್ಗೆ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಿಎಸ್ವೈ ಸಭೆ ನಡೆಸಿದರು.
ಗ್ರಾಮೀಣ ಪ್ರದೇಶದಲ್ಲಿ ಪಾಸಿಟಿವ್ ಆದವರನ್ನ ಮನೆಯಲ್ಲಿಯೇ ಬಿಡಬೇಡಿ. ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿ ಎಂದು ಬಿಎಸ್ವೈ ಸೂಚಿಸಿದರು. ಕರೊನಾ ಪರೀಕ್ಷೆಗಳನ್ನು ಜಾಸ್ತಿ ಮಾಡಿ. ಹೊರಗಡೆಯಿಂದ ಅಥವಾ ನಗರ ಪ್ರದೇಶಗಳಿಂದ ಬಂದವರನ್ನು ಪರೀಕ್ಷಿಸಿ ಎಂದು ಸಲಹೆ ನೀಡಿದರು.
ಹೊರಗಿಂದ ಬಂದವರಲ್ಲಿ ನೆಗೆಟಿವ್ ಬಂದರೆ ಊರು ಸೇರಿಸಿ, ಇಲ್ಲವೇ ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿ ಎಂದು ಸಿಎಂ ಸಭೆಯಲ್ಲಿ ಸೂಚನೆ ನೀಡಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಗೃಹ ಸಚಿವ ಬಸವರಾಜ್ ಬೊಮ್ಮಯಿ, ಸಚಿವ ಗೋವಿಂದ್ ಕಾರಜೋಳ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.
ಮೇಕೆದಾಟು ಯೋಜನೆ ವಿವಾದ ಸಂಬಂಧ ನಾಳೆ ಕಾನೂನು ತಜ್ಞರ ಮಹತ್ವದ ಸಭೆ: ಬಸವರಾಜ ಬೊಮ್ಮಾಯಿ
ಗೋಮಾತೆಯ ಅಪ್ಪುಗೆಯೇ ಚಿಕಿತ್ಸೆ: ತಾಸಿಗೆ 15 ಸಾವಿರ ರೂ. ಕೊಟ್ಟು ಹಸು ತಬ್ಬಿಕೊಳ್ಳುತ್ತಿರೋ ಅಮೆರಿಕನ್ನರು
ಹಣ್ಣು ಬೇಕಾ ಮಾವಿನಹಣ್ಣು…. ರೀಲ್ ಅಲ್ಲ ಇದು ರಿಯಲ್: ತೋಟದಲ್ಲಿ ಫುಲ್ ಬಿಜಿ ಈ ತುಮಕೂರು ಬೆಡಗಿ