More

    ಮೆರವಣಿಗೆಯೊಂದಿಗೆ ಕೃಷಿ ಮೇಳಕ್ಕೆ ಚಾಲನೆ; ಮೈಸೂರಿನಲ್ಲಿ ಮೂರು ದಿನಗಳ ಕಾಲ ಕೃಷಿ ಹಬ್ಬ

    ಮೈಸೂರು: ಬೆಳಗಿನ ಸೂರ್ಯಕಿರಣಗಳು ಹೊಳಪು ಪಡೆಯುವ ಹೊತ್ತಿಗೆ ನಗರದ ಮುಖ್ಯರಸ್ತೆಯಲ್ಲಿ ಡೊಳ್ಳು, ಹಲಗೆ ಸದ್ದು. ದೈನಂದಿನ ಕೆಲಸಗಳತ್ತ ಜನರ ಗಮನ ತನ್ನತ್ತ ಸೆಳೆದುಕೊಂಡಿತು.

    ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ಆಯೋಜಿಸಿರುವ ಕೃಷಿ ಮೇಳಕ್ಕೆ ಮೆರವಣಿಗೆಯೊಂದಿಗೆ ಶುಕ್ರವಾರ ಬೆಳಗ್ಗೆ ಚಾಲನೆ ಪಡೆಯಿತು.

    ನಗರದ ಸುಣ್ಣದಕೇರಿಯ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಆರಂಭವಾಯಿತು.

    ನಂದಿಕೋಲು, ಪೂಜಾಕುಣಿತ, ಡೊಳ್ಳು, ಹಲಗೆ ಮುಂತಾದ ಜಾನಪದ ಕಲಾತಂಡಗಳ ಜತೆಗೆ‌ ಅಲಂಕೃತ ‘ಹಳ್ಳಿಕಾರ ಬಸವ’ ಈ ಮೆರವಣಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಕಖಸ, ಪೂರ್ಣಕುಂಭದೊಂದಿಗೆ ಮಹಿಳೆಯರು, ಶ್ವೇತ ಸಮವಸ್ತ್ರಧರಿಸಿ ಹೆಗಲ ಮೇಲೆ ಹಸಿರಯ ಶಾಲು ಹೊದ್ದ ಸ್ವಯಂಸೇವಕರೊಂದಿಗೆ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆಯು ಮೂರು ದಿನಗಳ ಕಾಲ ಕೃಷಿ ಮೇಳ ನಡೆಯಲಿರುವ ಮಹಾರಾಜ ಕಾಲೇಜು ಮೈದಾನ ತಲುಪಿತು.
    ಮೆರವಣಿಗೆಯೊಂದಿಗೆ ಕೃಷಿ ಮೇಳಕ್ಕೆ ಚಾಲನೆ; ಮೈಸೂರಿನಲ್ಲಿ ಮೂರು ದಿನಗಳ ಕಾಲ ಕೃಷಿ ಹಬ್ಬ

    ಮೆರವಣಿಗೆಯಲ್ಲಿ ವಿಆರ್ ಎಲ್ ಸಮೂಹ ಸಂಸ್ಥೆಗಳ ಶಿವ ಸಂಕೇಶ್ವರ, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ದಿಗ್ವಿಜಯ ನ್ಯೂಸ್ ಸಂಪಾದಕ ಸಿದ್ದು‌ ಕಾಳೋಜಿ, ಮೈಸೂರು ಆವೃತ್ತಿ ಸ್ಥಾನಿಕ ಸಂಪಾದಕ ಸತ್ಯನಾರಾಯಣ, ಆಡಳಿತ ವಿಭಾಗದವರು, ಸ್ಥಳೀಯರು‌ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts