More

    ಜು.30ರಂದು ಮೈಸೂರಿನಲ್ಲಿ ವಿಜಯವಾಣಿ, ದಿಗ್ವಿಜಯ ಸಹಯೋಗದಲ್ಲಿ ‘ಸಂಗೀತ ಸಂಜೆ’ ಕಾರ್ಯಕ್ರಮ

    ಬೆಂಗಳೂರು: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಭಾನುವಾರ (ಜು.30ರಂದು) ಮೈಸೂರಿನಲ್ಲಿರುವ ದತ್ತ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ‘ನಾದ ಮಂಟಪ’ದಲ್ಲಿ ಸಂಜೆ 5 ಗಂಟೆಗೆ ‘ಸಂಗೀತ ಸಂಜೆ’ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪಂ.ಜಯತೀರ್ಥ ಮೇವುಂಡಿ ಹಾಗೂ ಖ್ಯಾತ ಸಂಗೀತ ದಿಗ್ಗಜರ ಸಮಾಗಮ ನಡೆಯಲಿದೆ.

    ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ ಹುಬ್ಬಳ್ಳಿಯ ಪಂ.ಜಯತೀರ್ಥ ಮೇವುಂಡಿ, ಕರ್ನಾಟಿಕ್ ಕೊಳಲು ವಾದಕರಾದ ಚೆನ್ನೈನ ಶ್ರೀ ಶಶಾಂಕ್ ಸುಬ್ರಹ್ಮಣ್ಯಂ, ಸಿತಾರ್ ವಾದಕರಾದ ಮಂಗಳೂರಿನ ಅಂಕುಶ್ ನಾಯಕ್ , ಮೃದಂಗ ವಾದಕರಾದ ಚೆನ್ನೈನ ವಿದ್ವಾನ್ ಪತ್ರಿ ಸತೀಶ್ ಕುಮಾರ್, ತಬಲಾ ವಾದಕರಾದ ಮುಂಬೈನ ಶ್ರೀ ಯಶ್ವಂತ್ ವೈಷ್ಣವ್ ಹಾಗೂ ಬೆಂಗಳೂರಿನ ಪಂ. ರಾಜೇಂದ್ರ ನಾಕೋಡ್ ಮತ್ತು ಹಾರ್ಮೋನಿಯಂ ವಾದಕರಾದ ಮಂಗಳೂರಿನ ಶ್ರೀ ನರೇಂದ್ರ ನಾಯಕ್ ಎಲ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.

    ಉಚಿತ ಪ್ರವೇಶವಿರಲಿದ್ದು, ಹೆಚ್ಚಿನ ಮಾಹಿತಿಗಾಗಿ ಸದಾಶಿವ-8884432355, ದೀಪಕ್-8884432308 ಮೊಬೈಲ್ ನಂಬರ್​​​​​ಗೆ ಸಂಪರ್ಕಿಸಬಹುದು.

    ಪಂಡಿತ್ ಜಯತೀರ್ಥ ಮೇವುಂಡಿ
    ಪಂಡಿತ್ ಜಯತೀರ್ಥ ಮೇವುಂಡಿ ಕಿರಾನ ಘರಾನ (ಹಾಡುವ ಶೈಲಿ)ದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕ. ದೇಶದ ಅತ್ಯಂತ ಪ್ರಸಿದ್ಧ ಯುವ ಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಜಯತೀರ್ಥ ಮೇವುಂಡಿ ಅವರು ಹಿಂದೂಸ್ತಾನಿ ಕ್ಲಾಸಿಕಲ್, ಸಂತವಾಣಿ ಮತ್ತು ದಾಸವಾಣಿ ಸ್ಟ್ರೀಮ್‌ಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಸಂಗೀತ ಕ್ಷೇತ್ರದಲ್ಲಿ ಯಂಗ್ ಮೆಸ್ಟ್ರೋ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

    ಶ್ರೀ ಶಶಾಂಕ್ ಸುಬ್ರಹ್ಮಣ್ಯಂ
    ಶಶಾಂಕ್ ಸುಬ್ರಮಣ್ಯಂ ಅವರು ಭಾರತದ ಕೊಳಲು ವಾದಕರು ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಹೊಂದಿದ್ದಾರೆ. ಸರ್ಕಾರ ಫ್ರಾನ್ಸ್‌ನ ಪ್ರತಿಷ್ಠಿತ ನೈಟ್‌ಹುಡ್ / ಚೆವಲಿಯರ್ ಡೆ ಎಲ್’ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟ್ರೆಸ್ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಗೀತ ನಾಟಕ ಅಕಾಡೆಮಿಯ ಹಿರಿಯ ಪ್ರಶಸ್ತಿಯನ್ನು ಸರ್ಕಾರದಿಂದ ಪಡೆದ ಅತ್ಯಂತ ಕಿರಿಯ ಪುರಸ್ಕೃತರಾಗಿದ್ದಾರೆ.

    ಅಂಕುಶ್ ನಾಯಕ್
    ಮಂಗಳೂರಿನವರಾದ ಅಂಕುಶ್ ನಾಯಕ್, 9ನೇ ವಯಸ್ಸಿನಲ್ಲಿ ಸಿತಾರ್ ವಾದಕ ಉಸ್ತಾದ್ ರಫೀಕ್​ಖಾನ್ ಅವರಿಂದ ಸಿತಾರ್ ಹಾಗೂ ಘಟಂ ಮಾಂತ್ರಿಕ ವಿದ್ವಾನ್ ತಿರುಚ್ಚಿ ಕೆ.ಆರ್. ಕುಮಾರ್ ಅವರಿಂದ ಕರ್ನಾಟಕ ತಾಳ ಪದ್ಧತಿ ಕಲಿತಿದ್ದಾರೆ. 2009ರಲ್ಲಿ ಆಲ್ ಇಂಡಿಯಾ ರೇಡಿಯೋ ನ್ಯಾಷನಲ್ ಮ್ಯೂಸಿಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ರವಿ ಕೊಪ್ಪಿಕರ್ ಪ್ರಶಸ್ತಿ, ಅವಿನಾಶ್ ಹೆಬ್ಬಾರ್ ಪ್ರಶಸ್ತಿ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

    ಪತ್ರಿ ಸತೀಶ್ ಕುಮಾರ್
    ಭಾರತದ ಬಹು ಬೇಡಿಕೆಯ ಮೃದಂಗ ಕಲಾವಿದ, ಪತ್ರಿ ಸತೀಶ್ ಕುಮಾರ್ ಅವರು ಸಂಗೀತಗಾರರ ಕುಟುಂಬದಲ್ಲಿ ಜನಿಸಿದರು. ಪ್ರಖ್ಯಾತ ಪಿಟೀಲು ವಾದಕರಾದ ಅವರ ತಾಯಿ ಪದ್ಮಾವತಿ ಅವರಿಂದ ತಾಳವಾದ್ಯದ ಕಲೆ ಪ್ರಾರಂಭಿಸಿದರು. ಗುರುಗಳಾದ ಶ್ರೀ ರಾಮಚಂದ್ರಮೂರ್ತಿ, ವಿ.ಎ.ಸ್ವಾಮಿ ಮತ್ತು ವಿ. ನರಸಿಂಹನ್ ಅವರಿಂದ ತರಬೇತಿ ಪಡೆದ ಸತೀಶ್ ಕುಮಾರ್ ಅವರು ತಮ್ಮದೇ ಆದ ಶೈಲಿಯಲ್ಲಿ ಮೃದಂಗ ನುಡಿಸುವುದನ್ನು ಮುಂದುವರೆಸಿದ್ದಾರೆ.

    ಯಶವಂತ್ ವೈಷ್ಣವ್
    ಯಶವಂತ್ ವೈಷ್ಣವ್ ಅವರು ಶ್ರೀ ರಾಜೇಂದ್ರ ವೈಷ್ಣವ್ ಮತ್ತು ಶ್ರೀಮತಿ ಭಗವತಿ ವೈಷ್ಣವ್ ದಂಪತಿಗಳಿಗೆ ಜನಿಸಿದರು. ಆರಂಭಿಕ ಕಲಿಕೆಯು ಅವರ ತಂದೆ ಶ್ರೀ ರಾಜೇಂದ್ರ ವೈಷ್ಣವ್ ಅವರಿಂದ 3 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು, ನಂತರ ಡಾ. ಹೇಮಂತ್ ಸಚ್‌ದೇವ ಅವರಲ್ಲಿ ತರಬೇತಿ ಪಡೆದರು. ಹೆಚ್ಚಿನ ಅಧ್ಯಯನಕ್ಕಾಗಿ, ಅವರು ತಬಲಾ ಕಲಾವಿದ ಪಂಡಿತ್ ಮುಕುಂದ್ ಭಾಲೆ ಅವರಿಂದ ಶಿಕ್ಷಣ ಪಡೆದರು. 2016 ರಲ್ಲಿ ಇವರಿಗೆ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿ ಮತ್ತು ‘ಬಾಲ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

    ರಾಜೇಂದ್ರ ನಾಕೋಡ್
    ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರ ಕುಟುಂಬದಿಂದ ಬಂದವರಾಗಿದ್ದು, ತಂದೆ, ಪಂಡಿತ್ ಅರ್ಜುನ್ಸಾ ನಾಕೋಡ್ ಪ್ರಸಿದ್ಧ ಗಾಯಕರು. ತಂದೆಯಿಂದ ತರಬೇತಿ ಆರಂಭಿಸಿ, ಬಳಿಕ ಸಹೋದರರಾದ ಪಂಡಿತ್ ರಘುನಾಥ್ ನಾಕೋಡ್ ಮತ್ತು ವಿಶ್ವನಾಥ್ ನಾಕೋಡ್ ಅವರ ಬಳಿ ತಬಲಾ ವಾದಕ ಕಲಿತರು. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿರುವ ಇವರು, ಪ್ರಸಿದ್ಧ ಸಂಗೀತಗಾರರ ದಿ. ಬಸವರಾಜ ರಾಜಗುರು, ಬೇಗಂ ಪರ್ವೀನ್ ಸುಲ್ತಾನಾ ಮತ್ತು ಪಂಡಿತ್ ವಿಶ್ವ ಮೋಹನ್ ಭಟ್ ಜೊತೆ ಪ್ರದರ್ಶನ ನೀಡಿದ್ದಾರೆ.

    ನರೇಂದ್ರ ನಾಯಕ್ ಎಲ್
    ಶ್ರೀ ನರೇಂದ್ರ ನಾಯಕ್ ಅವರು ಮೂಲತಃ ಮಂಗಳೂರಿನವರು. ಉಸ್ತಾದ್ ರಫೀಕ್ ಖಾನ್ ಅವರ ಮಾರ್ಗದರ್ಶನದಲ್ಲಿ ಹಾರ್ಮೋನಿಯಂನಲ್ಲಿ ನಿಯಮಿತ ಅಭ್ಯಾಸವು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಲು ಅವರಿಗೆ ಸಹಾಯ ಮಾಡಿತು. ನರೇಂದ್ರ ನಾಯಕ್ ಅವರು ರೆಡಿಯೋ ಮತ್ತು ದೂರದರ್ಶನದಲ್ಲಿ ಎ ಗ್ರೇಡ್ ಕಲಾವಿದರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts