More

    ಮಂಗಳೂರಿನ ಬಾಂಬ್ ಸ್ಫೋಟಕ್ಕೂ PFIಗೂ ನಂಟು? ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು?

    ಬಳ್ಳಾರಿ: ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣ ಭಯೋತ್ಪಾದಕ ಕೃತ್ಯ ಇರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಜಾಲವನ್ನು ಸರ್ಕಾರ ಆದಷ್ಟು ಬೇಗ ಭೇದಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    “ನಿನ್ನೆ ಸಂಜೆ ಮಂಗಳೂರಿನಲ್ಲಿ ಆಟೋದಲ್ಲಿ ಪ್ರೆಶರ್ ಕುಕ್ಕರ್ ನಲ್ಲಿ ಬಾಂಬ್ ಸ್ಪೋಟವಾಗಿದೆ. ಈ ಸಂದರ್ಭದಲ್ಲಿ ಆಟೋದ ಚಾಲಕ ಹಾಗೂ ಒಬ್ಬ ಪ್ರಯಾಣಿಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನಡೆಸುತ್ತಿದ್ದಾರೆ. ಘಟನೆಗೆ ಎಲ್ ಇ ಡಿ ಇರುವಂತಹ ಸಲಕರಣೆಯ ಬಳಕೆಯಾಗಿದ್ದು, ವ್ಯಕ್ತಿಯ ಪರಿಶೋಧನೆ ವೇಳೆ, ಆತನ ಬಳಿಯಿದ್ದ ಆಧಾರ ಕಾರ್ಡ್ ನಕಲಿ ಎಂದು ಗೊತ್ತಾಗಿದೆ. ಆತನ ಕೆಲವು ನೈಜ ವಿವರಗಳು ಲಭಿಸಿರುವುದರಿಂದ, ಇದೊಂದು ಭಯೋತ್ಪಾದನಾ ಘಟನೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

    “ಈಗಾಗಲೇ ರಾಷ್ಟ್ರೀಯ ತನಿಖಾ ದಳ ಸ್ಥಳಕ್ಕೆ ತೆರಳಿದ್ದು, ಕರ್ನಾಟಕ ಪೊಲೀಸರೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿಯು ಆಸ್ಪತ್ರೆಯಲ್ಲಿದ್ದು, ನಂತರ ಆತನಿಂದ ಮಾಹಿತಿ ಪಡೆಯಲಾಗುವುದು. ಆ ವ್ಯಕ್ತಿಯು ಕೊಯಂಬತ್ತೂರು ಸೇರಿದಂತೆ ಹತ್ತು ಹಲವಾರು ಸ್ಥಳಗಳಲ್ಲಿ ಓಡಾಡಿದ್ದಾನೆ. ಆ ವ್ಯಕ್ತಿಗೆ ಭಯೋತ್ಪಾದನೆಯ ಸಂಪರ್ಕವಿದ್ದು, ಇದು ಒಂದು ಭಯೋತ್ಪಾದಕ ಘಟನೆ ಇರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪಿಎಫ್ಐ ಗೂ, ಈ ಘಟನೆಗೂ ಸಂಬಂಧ ಇರುವ ಬಗ್ಗೆ ಮಾಹಿತಿಯೂ ತನಿಖೆಯ ನಂತರ ತಿಳಿಯಲಿದೆ” ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts