More

    ಬಳ್ಳಾರಿಯಲ್ಲಿ ಎಸ್​ಟಿ ಮೋರ್ಚಾ ಸಮಾವೇಶ ಉದ್ಘಾಟಿಸಿದ ಜೆ.ಪಿ. ನಡ್ಡಾ: ಗಣಿನಾಡಿನಲ್ಲಿ ಬಿಜೆಪಿ ನವಶಕ್ತಿ ದರ್ಶನ

    ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಆಯೋಜಿಸಿರುವ ಎಸ್​ಟಿ ನವ ಶಕ್ತಿ ಸಮಾವೇಶಕ್ಕೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾನುವಾರ ಚಾಲನೆ ನೀಡಿದರು. ಕಳೆದ ತಿಂಗಳು ಜನಸಂಕಲ್ಪ ಯಾತ್ರೆ ನಡೆಸಿದ ಬೆನ್ನಲ್ಲೇ ಮೋರ್ಚಾಗಳ ಸಮಾವೇಶಕ್ಕೆ ಬಿಜೆಪಿ ಕೈಹಾಕಿದ್ದು, ಈ ಮೂಲಕ ವಿಧಾನಸಭಾ ಚುನಾವಣಾ ಕಹಳೆ ಮೊಳಗಿಸಿದೆ.

    ಎಸ್​ಟಿ ಮೋರ್ಚಾ ಸಮಾವೇಶದಲ್ಲಿ ಲಕ್ಷಾಂತೆ ಜನ ಸೇರಿದ್ದು, ಬುಡಕಟ್ಟು ಜನಾಂಗದ ಕೇಂದ್ರ ಸಚಿವ ಅರ್ಜುನ ಮುಂಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಕೇಂದ್ರ ನಾಯಕರಾದ ಭಗವಂತ ಕೂಬ, ಶೋಭಾ ಕರಂದ್ಲಾಜೆ ಮತ್ತು ಎಸ್​ಟಿ ಸಮುದಾಯದ ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದಾರೆ.

    ರಾಜ್ಯ ವಿಧಾನಸಭೆಯಲ್ಲಿ 15 ಎಸ್​ಟಿ ಮೀಸಲು ಕ್ಷೇತ್ರಗಳಿವೆ. ಈ ಪೈಕಿ ರಾಯಚೂರು-4, ಬಳ್ಳಾರಿ/ವಿಜಯನಗರ-5, ಯಾದಗಿರಿ ಒಂದು ಸೇರಿ 13 ಕ್ಷೇತ್ರಗಳು ಕಲ್ಯಾಣ ಕರ್ನಾಟಕದಲ್ಲಿವೆ. ಚಿತ್ರದುರ್ಗ 3, ಮೈಸೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಒಂದೊಂದು ಎಸ್​ಟಿ ಮೀಸಲು ಕ್ಷೇತ್ರಗಳಿವೆ. ಸದ್ಯ 6 ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್​ 1 ಹಾಗೂ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಶಾಸಕರಿದ್ದಾರೆ. ರಾಜ್ಯ ಸರ್ಕಾರ ಎಸ್​ಟಿ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸಿದೆ. ಅದರ ಆಧಾರದ ಮೇಲೆ ಮೀಸಲು ಕ್ಷೇತ್ರಗಳ ಗೆಲುವಿಗೆ ಸಮಾವೇಶದ ಮೂಲಕ ರಣತಂತ್ರ ಹೆಣೆಯುತ್ತಿದೆ.

    ಈ ಭಾಗದಲ್ಲೇ ಏಕೆ?: ಕಲ್ಯಾಣ ಕರ್ನಾಟಕ ಭಾಗದಲ್ಲೇ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯಗಳ ಸಂಖ್ಯೆ ಗರಿಷ್ಠವಾಗಿದೆ. ಸಮಾವೇಶಕ್ಕೆ ವೇದಿಕೆಯಾಗಿರುವ ಬಳ್ಳಾರಿಯ ಒಟ್ಟು ಜನಸಂಖ್ಯೆಯಲ್ಲಿ ಶೇ.18.41, ರಾಯಚೂರು ಶೇ.19.03, ಯಾದಗಿರಿ ಶೇ.12.51, ಚಿತ್ರದುರ್ಗ ಶೇ.18.23, ಬೀದರ್​ ಶೇ.13.85, ಕೊಪ್ಪಳ ಶೇ.11.82 ಎಸ್​ಟಿ ಸಮುದಾಯವಿದೆ. 2011ರ ಈ ಹಿನ್ನೆಲೆಯಲ್ಲಿ ಎಸ್​ಟಿ ಸಮುದಾಯದ ಗರಿಷ್ಠ ಮತದಾರರನ್ನು ತಲುಪುವ ದೃಷ್ಟಿಯಿಂದ ಬಳ್ಳಾರಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ.

    ಶ್ರೀರಾಮುಲು ರಕ್ತ ಪವಿತ್ರ, ಮುಂದೊಂದು ದಿನ ಮುಖ್ಯಮಂತ್ರಿ ಆಗ್ತಾನೆ: ಸಿಎಂ ಬೊಮ್ಮಾಯಿ

    ಮಾಲೂರಿಗೆ ಬಂದ ಪಂಚರತ್ನ ರಥಯಾತ್ರೆ: ದಾರಿಯುದ್ದಕ್ಕೂ ಎಚ್​ಡಿಕೆ ಅದ್ದೂರಿ ಸ್ವಾಗತ, ಜೆಡಿಎಸ್​ ಶಕ್ತಿ ಪ್ರದರ್ಶನ

    ಮಂಗಳೂರಿನಲ್ಲಿ ಆಟೋ ಸ್ಫೋಟ: ಪ್ರಯಾಣಿಕನೇ ತನಿಖೆಯ ಮೂಲ ವ್ಯಕ್ತಿ! ಅನುಮಾನ ಹುಟ್ಟಿಸಿದೆ ಪಂಪ್‌ವೆಲ್​ಗೆ ಪ್ರಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts