More

    ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರಿಗೆ ಬಂಪರ್​ ಕೊಡುಗೆ: ಗೌರವಧನವನ್ನು 32 ಸಾವಿರ ರೂ.ಗೆ ಏರಿಕೆ

    ಬೆಂಗಳೂರು: ಸಿಎಂ ಆಗಿ ಚೊಚ್ಚಲ ಬಜೆಟ್​ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಿಯು ಅತಿಥಿ ಉಪನ್ಯಾಸಕರಿಗೆ ಬಂಪರ್​ ಕೊಡುಗೆಯನ್ನು ನೀಡಿದ್ದಾರೆ.

    ರಾಜ್ಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೋಧನಾ ಅವಧಿಯನ್ನು ಹೆಚ್ಚಿಸಿ ಮಾಸಿಕ ಗೌರವ ಧನವನ್ನು 11 ಸಾವಿರದಿಂದ 32 ಸಾವಿರಕ್ಕೆ ಏರಿಕೆ ಮಾಡುವ ಮೂಲಕ ಸಿಎಂ ಬೊಮ್ಮಾಯಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅಲ್ಲದೆ, ಹೊಸ ರೀತಿಯಲ್ಲಿ 7 ವಿಶ್ವ ವಿದ್ಯಾಲಯಗಳ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಳಗಾವಿ, ಬಳ್ಳಾರಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆಗೆ ಅನುದಾನ ಮೀಸಲಿಟ್ಟಿದ್ದಾರೆ. ಕೃಷಿ ವಲಯಕ್ಕೆ ಬಜೆಟ್​​ನಲ್ಲಿ 33,700 ಕೋಟಿ ರೂಪಾಯಿ ಅನುದಾನವನ್ನು ನೀಡಿದ್ದಾರೆ.

    ಮಹಿಳಾ ಸಬಲೀಕರಣ ಕ್ಷೇಮಾಭಿವೃದ್ಧಿಗೆ 43,188 ಕೋಟಿ, ಹೊಸ ಯೋಜನೆಯಾದ ರೈತ ಶಕ್ತಿ ಯೋಜನೆಗೆ 500 ಕೋಟಿ ರೂಪಾಯಿ, ಪ್ರವಾಹದಿಂದ ಹಾನಿಯಾದ ಕೆರೆಗಳ ಅಭಿವೃದ್ಧಿಗೆ 200 ಕೋಟಿ ರೂ., ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಗೆ 3,102 ಕೋಟಿ ರೂಪಾಯಿ ಹಾಗೂ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗೆ 56,710 ಕೋಟಿ ರೂಪಾಯಿಯನ್ನು ಬಜೆಟ್​ನಲ್ಲಿ ಸಿಎಂ ಬೊಮ್ಮಾಯಿ ಮೀಸಲಿರಿಸಿದ್ದಾರೆ.

    ಬಜೆಟ್​ನ ನೇರ ಪ್ರಸಾರಕ್ಕೆ ಇಲ್ಲಿ ಕ್ಲಿಕ್ಕಿಸಿ:

    LIVE| ಬಜೆಟ್​ ಮಂಡನೆ… ತಜ್ಞರ ಚರ್ಚೆ-ವಿಶ್ಲೇಷಣೆ ಜತೆಗೆ ಕ್ಷಣ ಕ್ಷಣದ ಮಾಹಿತಿಯ ನೇರಪ್ರಸಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts