More

    ಬೊಮ್ಮಾಯಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಆದ್ರೆ ಹಿಂದಿರುವವರು ಪರ್ಮಿಷನ್ ಕೊಡ್ಬೇಕಲ್ವಾ?: ಎಚ್​ಡಿಕೆ

    ಬೆಂಗಳೂರು: ಆರ್ಥಿಕ ಸಚಿವರಾಗಿ ಮೊದಲ ಬಜೆಟ್​ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿದ್ದಾರೆ. ಅವರು ಸುದೀರ್ಘ ಆಡಳಿತ ಅನುಭವ ಹೊಂದಿದ್ದಾರೆ. ತುಳಿತಕ್ಕೆ ಒಳಗಾದ ಬಡ ಕುಟುಂಬಗಳಿಗೆ ಏನು ಕಾರ್ಯಕ್ರಮ ಕೊಡುತ್ತಾರೆ ಅಂತಾ ಕಾಯ್ತಿದ್ದೀನಿ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೊಮ್ಮಾಯಿ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ನಿರೀಕ್ಷೆಯನ್ನು ಈಡೇರಿಸಲು ಹಿಂದೆ ಇರುವವರು ಪರ್ಮಿಷನ್ ಕೊಡ್ಬೇಕು ಅಲ್ವಾ? ಬೊಮ್ಮಾಯಿ ಅವರು ತಮ್ಮ ಬುಟ್ಟಿಯಲ್ಲಿ ಯಾವ ಯಾವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ನೋಡೋಣ ಎಂದು ಹೇಳಿದರು.

    ನೀಟ್ ಬಗ್ಗೆ ವಿರೋಧಿಸುವವರನ್ನು ದ್ರೋಹಿಗಳು ಎಂದ ಸಚಿವ ಅಶ್ವಥ್ ನಾರಾಯಣ್​ಗೆ ತಿರುಗೇಟು ನೀಡಿದ ಎಚ್​ಡಿಕೆ, ಶುಲ್ಕ ರಚನೆಯ ಬಗ್ಗೆ ಯಾವ ರೀತಿ ದಂಧೆ ಆಗುತ್ತಿದೆ ಎಂದು ನನಗೆ ಗೊತ್ತಿದೆ. ನೀಟ್​ನ ಪರಿಸ್ಥಿತಿ ಬಗ್ಗೆ ಚರ್ಚೆಯಾಗಲಿ, ನಾವು ತಯಾರಾಗಿದ್ದೇವೆ. ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚೆಯಾಗಲಿ ಎಂದರು. ಯೂಕ್ರೇನಿನಲ್ಲಿ ಮೃತ ವಿದ್ಯಾರ್ಥಿಯ ದೇಹ ತರುವ ಬಗ್ಗೆ ಬಿಜೆಪಿ ಶಾಸಕ ಲಘುವಾಗಿ ಮಾತನಾಡಿದ್ದಾರೆ. ಅಧಿಕಾರ ನೆತ್ತಿಗೇರಿದ್ದು, ಜನ ಇಳಿಸುತ್ತಾರೆ ಎಂದು ಹೇಳಿದರು.

    ಮೆಡಿಕಲ್ ಹಾಗು ಶಿಕ್ಷಣ ಸಂಸ್ಥೆಗಳ ಹಿಂದೆ ದೊಡ್ಡ ದೊಡ್ಡ ರಾಜಕಾರಣಿಗಳು ಹಾಗು ಮಕ್ಕಳು‌ ಇದ್ದಾರೆ. ನಾನು ಯಾವುದೇ ಒತ್ತಡಕ್ಕೆ ಮಣಿಯಲ್ಲ. ನಾನು ಅಧಿಕಾರಕ್ಕೆ ಬಂದರೆ ನೀಟ್ ರದ್ದುಪಡಿಸುತ್ತೇನೆ ಎಂದು ಹೇಳಿದರು.

    ಪಾದಯಾತ್ರೆ ಮುಗಿಸಿ ಬಂದಿದ್ದಾರೆ ಮಹಾ ನಾಯಕರು. ಪಾದಯಾತ್ರೆ ಅನುಭವ ತೆಗೆದುಕೊಂಡು ಬಂದಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಅಂತ ಬಂದಿದ್ದಾರೆ. ದೇಹದಿಂದ ಬೆವರು ಸುರಿಸಿ ಬಂದಿದ್ದಾರೆ ಅಲ್ವಾ..? ನೀರು ಉಳಿಸಿಕೊಳ್ಳಲು ದಾಖಲೆ ಸಮೇತ ಚರ್ಚೆ ಮಾಡ್ತಾರಾ ನೋಡೋಣ. 26 ಅಣೆಕಟ್ಟು ಕಟ್ಟಿದ್ದಾರಂತೆ. ಯಾರು ಕಟ್ಟಿಲ್ವಂತೆ ಎಂದು ವ್ಯಂಗ್ಯವಾಡಿದರು.

    ಮೇಕೆದಾಟು ಯೋಜನೆಗೆ ಬಿಜೆಪಿ, ಜೆಡಿಎಸ್​ನಿಂದ ವಿರೋಧ ಎಂದು ಕಾಂಗ್ರೆಸ್ ನಾಯಕರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್​​ಡಿಕೆ, ಕೇಂದ್ರ ಸರ್ಕಾರದ ಬಳಿ ಜೀವಂತವಾಗಿ ಉಳಿದಿರುವುದು ಕುಮಾರಸ್ವಾಮಿ ಕೊಟ್ಟಿರುವ ಡಿಪಿಆರ್ ಮಾತ್ರ. ಅವಕಾಶ ಸಿಕ್ಕಿದರೆ ದಾಖಲೆ ಬಿಡುಗಡೆ ಮಾಡ್ತಿನಿ ಎಂದರು. 19 ದಿನ ಬಜೆಟ್ ಅಧಿವೇಶನ ಇದೆ. ಸರ್ಕಾರ ಕೊಟ್ಟ ಪಾರದರ್ಶಕ ಆಡಳಿತ, ಭ್ರಷ್ಟ ಆಡಳಿತದ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    LIVE| ಬಜೆಟ್​ ಮಂಡನೆಗೆ ಕ್ಷಣಗಣನೆ… ತಜ್ಞರ ಚರ್ಚೆ-ವಿಶ್ಲೇಷಣೆ ಜತೆಗೆ ಕ್ಷಣ ಕ್ಷಣದ ಮಾಹಿತಿಯ ನೇರಪ್ರಸಾರ

    ಮಗ ಮತ್ತು ಮಗನ ಸ್ನೇಹಿತನೊಂದಿಗೆ ಸೇರಿ ಪ್ರಿಯಕರನನ್ನು ಕೊಲೆ ಮಾಡಿದ್ದ ಹಂತಕಿಯ ಬಂಧನ

    ಸಿಎಂ ಆಗಿ ಮೊದಲ ಬಜೆಟ್​ ಮಂಡನೆ: ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts