More

    ಮೋದಿ ಕಾರ್ಯಕ್ರಮಕ್ಕೆ ಪೊಲೀಸರ ಅಸಹಕಾರ: ಆಯೋಗಕ್ಕೆ ದೂರು ನೀಡಲು ಮುಂದಾದ ಬಿಜೆಪಿ

    ಶಿರಸಿ: ಭಾನುವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಪ್ರವೇಶಕ್ಕೆ ಪೊಲೀಸ್ ಇಲಾಖೆ ಅನಗತ್ಯ ಕಿರುಕುಳ ನೀಡಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕಾರ್ಯಕ್ರಮ ಯಶಸ್ವಿ ಆಗಬಾರದು ಎಂಬ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಈ ಸೂಚನೆ ನೀಡಿದಂತಿದ್ದು, ಈ ಕುರಿತಂತೆ ನಾವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್ .ಎಸ್. ಹೆಗಡೆ ಹೇಳಿದರು.
    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ವಿಐಪಿ ಗೇಟ್‌ನಲ್ಲಿ ಪಾಸ್ ಹೊಂದಿದವರಿಗೆ ಉದ್ದೇಶಪೂರ್ವಕವಾಗಿ ಪ್ರವೇಶ ನಿರಾಕರಿಸಿ ವಾಪಸ್ ಕಳಿಸಲಾಗಿದೆ. ಇದರಿಂದಾಗಿ ಸುಮಾರು 5 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗದೇ ವಾಪಸ್ ತೆರಳಿದ್ದಾರೆ. ಎಡಿಶನಲ್ ಎಸ್. ಪಿ. ಜಯಕುಮಾರ ಅಸಹಕಾರ ತೋರಿದ್ದು, ಪ್ರಧಾನಿಯವರ ಕಾರ್ಯಕ್ರಮಕ್ಕೂ ಈ ರೀತಿ ಮಾಡಿರುವುದು ಅಚ್ಚರಿ ಮೂಡಿಸಿದೆ. ಬ್ಯಾಗ್ ಗಳ ಸ್ಕಾö್ಯನರ್ ತರಬೇಕು ಎಂದು ನಾವು ಆಗ್ರಹಿಸಿದ್ದರೂ ಅವರು ತರದೇ ಇದ್ದುದರಿಂದ ಬ್ಯಾಗ್ ಹೊಂದಿದ್ದವರಿಗೆ ಸಮಸ್ಯೆ ಉಂಟಾಗಿತ್ತು ಎಂದರು.
    ಕೇಂದ್ರ ಸರ್ಕಾರದ ಫಲಾನುಭವಿಗಳಿಂದಲೇ ಪ್ರಧಾನ ಮಂತ್ರಿಯವರಿಗೆ ವಿಶೇಷ ಉಡುಗೊರೆ ನೀಡಲು ನಾವು ನಿರ್ಧರಿಸಿದ್ದೆವು. ಆದರೆ, ಅವರಿಗೆ ಪ್ರಧಾನಿ ಭೇಟಿಯ ಪಾಸ್ ಪೊಲೀಸ್ ಇಲಾಖೆ ಕಾರ್ಯಕ್ರಮ ಮುಕ್ತಾಯದ ಕೆಲ ಕ್ಷಣಗಳಿರುವಾಗ ನೀಡಿದೆ. ಇದೊಂದು ಅಚ್ಚರಿಯ ಸಂಗತಿ ಎಂದ ಅವರು, ಜಿಲ್ಲೆಯ ದೂರದ ಊರಿನಿಂದ ಫಲಾನುಭವಿಗಳನ್ನು ಕರೆಸಲಾಗಿತ್ತಾದರೂ ಅವರಿಗೆ ಪ್ರಧಾನಿ ಭೇಟಿ ಮಾಡಿಸಲಾಗಿರುವುದು ನಮಗೆ ನೋವು ತಂದಿದೆ ಎಂದರು.
    ಪ್ರಶ್ನೆಗೆ ಉತ್ತರಿಸಿದ ಎನ್. ಎಸ್. ಹೆಗಡೆ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ನಾವು ಕಾರ್ಯಕ್ರಮಕ್ಕೆ ಕರೆದಿಲ್ಲ. ಅವರು ನಮ್ಮ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಈ ಹಿಂದೆ ಅವರನ್ನು ಅನೇಕ ಕಾರ್ಯಕ್ರಮಗಳಿಗೆ ಕರೆದರೂ ಭಾಗಿಯಾಗದೇ ಇದ್ದುದರಿಂದ ಅವರೇ ದೂರವಾಗಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಅವರಿಗೆ ನಾನೇ ದೂರವಾಣಿ ಸಂಪರ್ಕಿಸಿದ್ದೇನೆ. ಅವರು ಭಾಗಿಯಾಗಿಲ್ಲವಾದರೂ ಪಕ್ಷ ಸಂಘಟನೆ, ಪಕ್ಷಕ್ಕೆ ವಿರುದ್ಧವಾಗಿ ಅವರಾಗಲಿ, ಬೆಂಬಲಿಗರಾಗಲೀ ಎಂದೂ ನಡೆದುಕೊಂಡಿಲ್ಲ ಎಂದರು. ವಕ್ತಾರ ಸದಾನಂದ ಭಟ್ ನಿಡಗೋಡ, ಪ್ರಮುಖರಾದ ಡ್ಯಾನಿ ಡಿಸೋಜಾ, ವೆಂಕಟೇಶ ನಾಯ್ಕ, ನಾಗರಾಜ ನಾಯ್ಕ ಇತರರಿದ್ದರು.

    https://www.vijayavani.net/pm-modi-slams-congress-in-the-statehttps://www.vijayavani.net/pm-modi-slams-congress-in-the-state

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts