More

    ಜನರಿಗಾಗಿ ಜೈಲಿಗೆ ಹೋಗಲೂ ಸಿದ್ಧ; ಕನಸು ಬಿಚ್ಚಿಟ್ಟ ಬೊಮ್ಮಾಯಿ

    ಹಾವೇರಿ: ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ. ನಿಮ್ಮ ಆಶೀರ್ವಾದಕ್ಕೆ ಎಂದೂ ಚ್ಯುತಿ ಬರುವ ಕೆಲಸ ಮಾಡಿಲ್ಲ. ಶಿಗ್ಗಾಂವಿ- ಸವಣೂರ ಕ್ಷೇತ್ರವನ್ನು ದೇಶದಲ್ಲೇ ನಂಬರ್ ಒನ್ ಕ್ಷೇತ್ರವನ್ನಾಗಿ ಮಾಡಲು ನಿರ್ಧರಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಕನಸು ಬಿಚ್ಚಿಟ್ಟರು.
    ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ, ಹಲವು ಕಾಮಗಾರಿಗಳನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
    ನಾನು ಶಾಸಕನಾಗುವ ಮುಂಚೆ ಕ್ಷೇತ್ರದಲ್ಲಿ ಒಂದೂ ಸ್ಮಮ್ ಘೋಷಣೆಯಾಗಿರಲಿಲ್ಲ. ಈಗ 32 ಸ್ಲಮ್ಗಳ 4,042 ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಜಮೀನಲ್ಲಿದ್ದ 10 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಶಿಗ್ಗಾಂವಿಯಲ್ಲಿ ಹಲವಾರು ಇಲಾಖೆಗಳಿಗೆ ಕಚೇರಿಯೇ ಇರಲಿಲ್ಲ. ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ಈಗ ಶಿಗ್ಗಾಂವಿ ನಗರದ ಕೇಂದ್ರ ಸ್ಥಾನದಲ್ಲಿ ಎಲ್ಲ ಕಚೇರಿಗಳನ್ನು ನಿರ್ಮಿಸಲಾಗಿದೆ ಎಂದರು.
    ಹೂವಿನ ಹಾರದ ಮಾದರಿಯಲ್ಲಿ ಶಿಗ್ಗಾಂವಿ- ಸವಣೂರ ಏತ ನೀರಾವರಿ ನನ್ನ ಕನಸಿತ್ತು ಅದನ್ನು ಜಾರಿಗೊಳಿಸಿದ್ದೇನೆ. ಎಲ್ಲಿ ಬರಗಾಲ ಬಂದರೂ ಇಲ್ಲಿ ಬರಗಾಲ ಬರಲ್ಲ. ವರದಾ ನದಿಯಲ್ಲಿ ನೀರು ಹರಿಯುತ್ತಿತ್ತು. ತವರಮೆಳ್ಳಳ್ಳಿ ಸುತ್ತಮುತ್ತ ನೀರಿಲ್ಲದೇ ಜನ ಬಳಲುತ್ತಿದ್ದರು. ಈ ಯೋಜನೆಗೆ ಕಾನೂನು ತೊಡಕಿತ್ತು. ಅದನ್ನು ಗೆದ್ದು ಕ್ಷೇತ್ರಕ್ಕೆ ನೀರು ತಂದಿದ್ದೇನೆ ಎಂದರು.
    ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕ ನೆಹರು ಓಲೇಕಾರ, ವಾಕರಸಾ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜ ಕೇಲಗಾರ, ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಡಿ.ಎಸ್.ಮಾಳಗಿ, ಶಿವರಾಜ ಸಜ್ಜನರ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಉಪಾಧ್ಯಕ್ಷೆ ಶೇಖವ್ವ ಬಂಡಿವಡ್ಡರ, ಜಿಲ್ಲಾಧಿಕಾರಿ ರಘುನಂದನಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ತಿಪ್ಪಣ್ಣ ಸಾತಣ್ಣವರ, ಮಲ್ಲೇಶಪ್ಪ ಹರಿಜನ, ಅರ್ಜುನ ಹಂಚಿನಮನಿ, ಶ್ರೀಕಾಂತ ದುಂಡಿಗೌಡ್ರ, ಕಿರಣ ಅವರಾದಿ, ಸುಭಾಷ ಚೌಹಾಣ, ಎಸ್.ಕೆ.ಅಕ್ಕಿ, ಪ್ರಶಾಂತ ಬಡ್ಡಿ, ಮಂಜುನಾಥ ಬ್ಯಾಹಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts