More

    ಸರ್ಕಾರಿ ನೌಕರರ ಬೇಡಿಕೆ ಚೆಂಡು ಮತ್ತೆ ಸಿಎಂ ಅಂಗಳಕ್ಕೆ

    ಬೆಂಗಳೂರು: ವೇತನ ಮತ್ತು ಭತ್ಯೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರ ಹಾಗೂ ಹೊಸ ಪಿಂಚಣಿ ಯೋಜನೆ ರದ್ದು, ಹಳೇ ಪಿಂಚಣಿ ಯೋಜನೆ ಜಾರಿಗೆ ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದು, ಬೇಡಿಕೆಯ ಚೆಂಡು ಮತ್ತೆ ಮುಖ್ಯಮಂತ್ರಿ ಅಂಗಳಕ್ಕೆ ಬಂದಿದೆ‌.

    ಸಿಎಂ ಅವರ ಆರ್ ಟಿ ನಗರದ ಖಾಸಗಿ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಬುಧವಾರ ಬೆಳಗ್ಗೆ ಭೇಟಿ ಮಾಡಿ ಎರಡನೇ ಸುತ್ತಿನ ಮಾತುಕತೆ ನಡೆಸಿದರು.

    ಸಂಘದ ಒಮ್ಮತದ ನಿರ್ಣಯವನ್ನು ಸಿಎಂ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳ ಜತೆ ಚರ್ಚಿಸುವೆ ಎರಡು ತಾಸು ಸಮಯ ಕೊಡಿ ಎಂದು ಕೇಳಿದ್ದಾರೆ. ಸರ್ಕಾರದ ನಿಲುವಿನ ನಮ್ಮ ಮುಂದಿನ ನಡೆ ಅವಲಂಬಿಸಿದೆ ಎಂದು ಷಡಾಕ್ಷರಿ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

    ಇದನ್ನೂ ಓದಿ: ರಾಜ್ಯದ ಜನತೆಗೆ ರೈಲ್ವೇಯಿಂದ ಸಿಹಿಸುದ್ದಿ: ಇಲ್ಲೆಲ್ಲ ನಿಲ್ಲಲಿವೆ ಈ ರೈಲುಗಳು!

    ಕಳೆದ ಮೂರು ದಿನಗಳಿಂದ ಚರ್ಚೆ ನಡೆಯುತ್ತಿದೆ. ಸರ್ಕಾರದಲ್ಲೂ ಚರ್ಚೆ ನಡೆಯುತ್ತಿದೆ. ನಿನ್ನೆ ರಾತ್ರಿ 11ಗಂಟೆವರೆಗೂ ಸಿಎಂ ಜೊತೆ ಮೀಟಿಂಗ್ ಮಾಡಿದೆವು. ಈಗ ಎರಡನೇ ಸುತ್ತಿನ ಚರ್ಚೆ ಆಗಿದೆ. ಇನ್ನೂ ಒಂದು ಹಂತದ ಚರ್ಚೆ ಬಾಕಿ ಇದೆ. ಇದೆಲ್ಲ ಒಂದು ಹಂತಕ್ಕೆ ಬರುತ್ತದೆ ಅಂತ ಭಾವಿಸಿದ್ದೇನೆ. ಸಿಎಂ ಅಧಿಕಾರಿಗಳ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ನಂತರ ಅವರು ಏನು ಹೇಳ್ತಾರೆ ಅಂತ ನೋಡಬೇಕು. ಅಧಿಕಾರಿಗಳ ಚರ್ಚೆ ನಂತರ ಸಿಎಂ ಏನು ನಿರ್ಧಾರ ಕೈಗೊಳ್ತಾರೆ ಎಂಬುದನ್ನು ನೋಡಿ ನಾನು ಪ್ರತಿಕ್ರಿಯೆ ನೀಡುತ್ತೇನೆ. ಸದ್ಯ 10 ಗಂಟೆಯಿಂದ ಈಗಾಗಲೇ ಮುಷ್ಕರ ನಡೆಯುತ್ತಿದೆ. ನಾವು ಎರಡು ಪ್ರಮುಖ ವಿಚಾರಗಳಿಗೆ ಆದೇಶ ಕೇಳಿದ್ದೇವೆ. ಮಧ್ಯಂತರ ಪರಿಹಾರದ ಬಗ್ಗೆ ಮನವಿ ಮಾಡಿದ್ದೀವಿ. ಸಕರಾತ್ಮಕ ವಿಚಾರ ಹೇಳಿದ್ರೆ ಮುಷ್ಕರ ನಿಲ್ಲುತ್ತದೆ. ಇಲ್ಲವಾದ್ರೆ ಮುಷ್ಕರ ಮುಂದುವರಿಯುತ್ತದೆ. ಇನ್ನೂ ಎರಡು ತಾಸಿನಲ್ಲಿ ಏನು ನಿರ್ಧಾರ ತೆಗೆದುಕೊಳ್ತಾರೆ ಅನ್ನೋದು ಗೊತ್ತಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿಕೆ ನೀಡಿದರು.

    ಮುಷ್ಕರಕ್ಕೆ ಮುಂದಾಗಿರುವ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಖಡಕ್​ ಎಚ್ಚರಿಕೆ

    ಮುಕೇಶ್​ ಅಂಬಾನಿ ಕುಟುಂಬಕ್ಕೆ Z+ ಭದ್ರತೆ ಒದಗಿಸಲು ಸುಪ್ರೀಂಕೋರ್ಟ್​ ಆದೇಶ

    ಎಲಾನ್​ ಮಸ್ಕ್ ಮತ್ತೆ ನಂ.1 ಶ್ರೀಮಂತ: ಗೌತಮ್ ಅದಾನಿಗೆ ಎಷ್ಟೇ ಸ್ಥಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts