More

    ಒಲಂಪಿಕ್ಸ್​ನಲ್ಲಿ ಗೆದ್ದರೆ ರಾಜ್ಯದಿಂದ ನಗದು ಬಹುಮಾನ; ಚಿನ್ನ ಗೆಲ್ಲುವವರಿಗೆ ₹5 ಕೋಟಿ, ಬೆಳ್ಳಿಗೆ ₹3 ಕೋಟಿ, ಕಂಚಿಗೆ ₹2 ಕೋಟಿ

    ಬೆಂಗಳೂರು: ಜುಲೈ 23ರಿಂದ ಜಪಾನ್​ನ ಟೋಕಿಯೋದಲ್ಲಿ ಒಲಂಪಿಕ್ಸ್​ ನಡೆಯಲಿದೆ. ಅದರಲ್ಲಿ ಕರ್ನಾಟಕದ ಕೆಲ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ರಾಜ್ಯದಿಂದ ಒಲಂಪಿಕ್ಸ್​ನಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಗಳು ಗೆದ್ದರೆ ಅವರಿಗೆ ನಗದು ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

    ಒಲಂಪಿಕ್ಸ್​ನಲ್ಲಿ ಭಾಗವಹಿಸುತ್ತಿರುವ ಸ್ಪರ್ಧಾಳುಗಳಿಗೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರೋತ್ಸಾಹ ಧನ ನೀಡಿದ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ. ಒಲಂಪಿಕ್ಸ್​ನಲ್ಲಿ ಗೆದ್ದವರಿಗೆ ನಗದು ಬಹುಮಾನ ನೀಡಲಾಗುವುದು. ಚಿನ್ನದ ಪದಕ ಗೆದ್ದವರಿಗೆ 5 ಕೋಟಿ ರೂಪಾಯಿ, ಬೆಳ್ಳಿ ಪದಕ ಗೆದ್ದವರಿಗೆ 3 ಕೋಟಿ ರೂಪಾಯಿ ಮತ್ತು ಕಂಚಿನ ಪದಕ ಗೆದ್ದವರಿಗೆ 2 ಕೋಟಿ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಒಲಂಪಿಕ್ಸ್​ನಲ್ಲಿ ಭಾಗವಹಿಸುತ್ತಿರುವವರಿಗೆ ರಾಜ್ಯ ಸರ್ಕಾರದಿಂದ ನಗದು ಪ್ರೋತ್ಸಾಹ ನೀಡಲಾಗಿದೆ. ಐವರು ಕ್ರೀಡಾಪಟುಗಳಿಗೆ ತಲಾ ಹತ್ತು ಲಕ್ಷ ನಗದು ಪ್ರೋತ್ಸಾಹ ಧನ ನೀಡಲಾಗಿದೆ. ಈಕ್ವೆಸ್ಟ್ರಿಯನ್ ಕ್ರೀಡಾಪಟು ಪೌವಾದ್ ಮಿರ್ಜಾ, ಹಾಕಿ ಆಟಗಾರ ಎಸ್ ವಿ ಸುನೀಲ್, ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ, ಈಜುಪಟು ಶ್ರೀಹರಿ ನಟರಾಜ್, ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್​ರಿಗೆ ಸರ್ಕಾರದಿಂದ ನಗದು ಪ್ರೋತ್ಸಾಹ ಧನ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವ ನಾರಾಯಣ ಗೌಡ, ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದೇಗೌಡ ಭಾಗಿಯಾಗಿದ್ದರು.

    ದರ್ಶನ್ 55ನೇ ಸಿನಿಮಾ ಘೋಷಣೆ; ಮತ್ತೆ ಒಂದಾಯ್ತು ಯಜಮಾನ ತಂಡ

    ರಸ್ತೆ ಬಳಿ ಚಾಕಲೇಟ್ ರಾಶಿ: ಕ್ವಿಂಟಾಲ್​ಗಟ್ಟಲೆ ಚಾಕಲೇಟ್​ನ್ನು ಎಸೆದು ಹೋದ ಡೀಲರ್!

    ಆಸ್ಟ್ರೇಲಿಯಾದ ಮಾಸ್ಟರ್​ ಚೆಫ್ ಸ್ಪರ್ಧೆಯಲ್ಲಿ ಭಾರತ ಮೂಲದವನ ಜಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts