More

    ಉಷ್ಣತೆ ಹೆಚ್ಚಳಕ್ಕೆ ಪರಿಸರದ ಮೇಲಾಗುತ್ತಿರುವ ದೌರ್ಜನ್ಯ ಕಾರಣ

    ಸಿದ್ದಾಪುರ: ಹವಾಮಾನ ವೈಪರೀತ್ಯದಿಂದ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ತಾಪಮಾನ ಹೆಚ್ಚಾಗುತ್ತಿದೆ. ಮಲೆನಾಡ ಪ್ರದೇಶದಲ್ಲಿಯೂ ಉಷ್ಣತೆ ಏರುಗತಿಯಲ್ಲಿ ಇದೆ. ಸಕಾಲದಲ್ಲಿ ಮಳೆಯಾಗದೆ ನೀರಿನ ಕೊರತೆ ಉಂಟಾಗುತ್ತಿದೆ. ಇದಕ್ಕೆ ಪರಿಸರದ ಮೇಲಾಗುತ್ತಿರುವ ದೌರ್ಜನ್ಯವೇ ಕಾರಣ ಎಂದು ಜಾನ್ಮನೆ ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ ಹೇಳಿದರು.


    ತಾಲೂಕಿನ ಹೂಡ್ಲಮನೆ ಸಹಿಪ್ರಾ ಶಾಲೆಯಲ್ಲಿ ವಿಘ್ನೇಶ್ವರ ಯುವ ಸಂಘ ಉಂಬಳಮನೆ- ಬಿದ್ರಮನೆ ಹಾಗೂ ವಸುಂಧುರಾ ಟ್ರಸ್ಟ್ ಉಂಬಳಮನೆ- ಬಿದ್ರಮನೆ, ಅರಣ್ಯ ಮಹಾವಿದ್ಯಾಲಯ ಶಿರಸಿ ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಶ್ರೀಗಂಧ ವೃಕ್ಷಾರೋಪಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


    ಶಿರಸಿ ಅರಣ್ಯಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವೆಂಕಟೇಶ ಎಲ್ ಮಾತನಾಡಿ, ವಿವಿಧ ಸಸ್ಯ, ಬೀಜ ಶೇಖರಣೆ, ಸಂಸ್ಕರಣೆ, ಸಸ್ಯ ಬೆಳೆಯುವ ಪದ್ಧತಿ, ಕ್ಷೇತ್ರ ವ್ಯವಸಾಯ, ಬೆಳವಣಿಗೆ ಮತ್ತು ಇಳುವರಿ, ಮರ ಬೆಳೆಸುವ ನಿಯಮ, ಮರಕಟಾವು ಹಾಗೂ ಆರ್ಥಿಕ ಲಾಭಗಳಿಕೆ ಕುರಿತು ಮಾಹಿತಿ ನೀಡಿದರು.


    ಯುವಕ ಸಂಘದ ಹಾಗೂ ಟ್ರಸ್ಟ್‌ನ ಅಧ್ಯಕ್ಷ ಬಾಲಚಂದ್ರ ಹೆಗಡೆ ಮಾತನಾಡಿದರು. ಶಿರಸಿ ಕೆವಿಕೆ ಸಂಶೋಧಕಿ ಶಬಿನಾ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಅಧ್ಯಕ್ಷೆ ರೇಖಾ ರವೀಂದ್ರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.


    ಮಹಾಬಲೇಶ್ವರ ಹೆಗಡೆ ಹೂಡ್ಲಮನೆ ಸ್ವಾಗತಿಸಿದರು.ಮುಖ್ಯಾಧ್ಯಾಪಕ ವಿ.ಟಿ. ಹೆಗಡೆ ವಂದಿಸಿದರು. ನಿಸರ್ಗ ಭಟ್ಟ ನಿರ್ವಹಿಸಿದರು.
    ಶಿಕ್ಷಕ ಜಿ.ಎಂ. ನಾಯ್ಕ, ಅತಿಥಿ ಶಿಕ್ಷಕಿ ಮಮತಾ, ಸ್ಥಳೀಯ ಹಾಲು ಸಂಘದ ಅಧ್ಯಕ್ಷ ಮಹೇಶ ಹೆಗಡೆ, ವಿಶ್ವನಾಥ ಹೆಗಡೆ, ವಿನಾಯಕ ಹೆಗಡೆ, ನಾಗರಾಜ ಹೆಗಡೆ ಸಹಕರಿಸಿದರು. ಇದೇ ವೇಳೆ 200 ಶ್ರೀಗಂಧದ ಹಾಗೂ ರಕ್ತಚಂದನ ಸಸಿಗಳನ್ನು ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts