More

    ಹಿಂದು ಮಹಿಳೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಮೌಲ್ವಿ ಬಂಧನ

    ಉತ್ತರ ಪ್ರದೇಶ: ಮೌಲ್ವಿ ಸರ್ಫರಾಜ್ ಹಿಂದು ಮಹಿಳೆಯೊಬ್ಬರನ್ನು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯ ಮಾಡಿರುವ ಪ್ರಕರಣ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.  45 ವರ್ಷದ ಮೀನು ಎಂಬ ಮಹಿಳೆಯನ್ನು ಹೆದರಿಸಿ ಮತಾಂತರ ಮಾಡಲು ಮುಂದಾದ ಧರ್ಮಗುರು ಮೌಲ್ವಿಯನ್ನು ಇದೀಗ ಬಂಧಿಸಲಾಗಿದೆ.

    ಮಹಿಳೆಯ ಮಗ ಅಕ್ಷಯ್ ಶ್ರೀವಾಸ್ತವ ನೀಡಿದ ದೂರಿನ ಮೇರೆಗೆ ಧರ್ಮಗುರುವನ್ನು ಬಂಧಿಸಲಾಗಿದೆ. ಅಕ್ಷಯ್, ತನ್ನ ತಾಯಿಯು ಕೆಲವು ವರ್ಷಗಳಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾಯಿಯ ಆರೋಗ್ಯದ ದೃಷ್ಠಿಯಿಂದ ಕೆಲವರ ಸಲಹೆಯನ್ನು ಪಡೆದು ಧರ್ಮಗುರು ಮೌಲ್ವಿಯನ್ನು ಭೇಟಿ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಮಹಿಳೆಯು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ಬಳಲುತ್ತಿರುವುದಕ್ಕೆ ದುಷ್ಟಶಕ್ತಿಗಳು ಕಾರಣವಾಗಿವೆ. ಆದ್ದರಿಂದ ದುಷ್ಟಶಕ್ತಿಗಳನ್ನು ಓಡಿಸಬೇಕೆಂದರೆ ಇಸ್ಲಾಂಗೆ ಮತಾಂತರಗೊಳ್ಳಬೇಕು ಎಂದು ಧರ್ಮಗುರು ಒತ್ತಾಯಿಸಿದ್ದಾರೆ ಎಂದು ದೂರಲಾಗಿದೆ. ತನ್ನ ತಾಯಿಯು ಮೌಲ್ವಿಯ ಒತ್ತಾಯಕ್ಕೆ ಹೆದರಿ ಮನೆಯಲ್ಲಿರುವ ಹಿಂದು ದೇವರುಗಳ ಚಿತ್ರಗಳು ಮತ್ತು ವಿಗ್ರಹಗಳನ್ನು ತೆಗೆದುಹಾಕಿದ್ದಾರೆ ಎಂದು ತಿಳಿಸಿರುವ ಅಕ್ಷಯ್​​​​, ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಾಗಿ ಮಕ್ಕಳು ಮತ್ತು ಕುಟುಂಬದ ಸದಸ್ಯರನ್ನು ತಾಯಿ ಒತ್ತಾಯಿಸಿದ್ದು, ಧರ್ಮಗುರುವಿನ ಒತ್ತಡಕ್ಕೆ ಹೆದರಿ ನಿರ್ಧಾರ ತೆಗೆದುಕೊಂಡಿರುವುದನ್ನು ಮನಗಂಡು ಕೊನೆಗೆ ದೂರು ನೀಡಿದ್ದಾರೆ. 

    ಧರ್ಮಗುರು ಮೌಲ್ವಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಕಳೆದ ಎಂಟು ವರ್ಷಗಳಿಂದ ಇದೇ ಪ್ರದೇಶದಲ್ಲಿ ಭೂತೋಚ್ಚಾಟನೆಯನ್ನು ಅಭ್ಯಾಸ ಮಾಡುತ್ತಿರುದಾಗಿ ಹಾಗೂ ದೆವ್ವ-ಭೂತಗಳ ಭಯದಿಂದ ಹೊರಬರಲು ಇಸ್ಲಾಂ ಧರ್ಮವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯ ಮಾಡಿರಿವುದಷ್ಟೇ! ಇನ್ನಾವುದೇ ರೀತಿಯ ದುರುದ್ದೇಶಗಳಿಲ್ಲ ಎಂದು ಮೌಲ್ವಿಯು ತನಿಖೆಯಲ್ಲಿ ತಿಳಿಸಿರುವುದಾಗಿ ಎಸಿಪಿ ನಂದಗ್ರಾಮ್ ರವಿಕುಮಾರ್ ಸಿಂಗ್ ಹೇಳಿದ್ದಾರೆ. 

    ಉತ್ತರ ಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ , ಡ್ರಗ್ಸ್ ಮತ್ತು ಮಾಂತ್ರಿಕ ಪರಿಹಾರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಧರ್ಮಗುರು ಮೌಲ್ವಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಗ್ ತಿಳಿಸಿದರು. 

    ಮೊದಲ ಬಾರಿಗೆ 13 ಅಪರೂಪದ ಕಾಯಿಲೆಗಳಿಗೆ ‘ಮೇಡ್ ಇನ್ ಇಂಡಿಯಾ’ ಔಷಧಿಗಳು; ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts