More

    ಫುಟ್‌ಪಾತ್ ಒತ್ತುವರಿ ತೆರವು

    ನಂಜನಗೂಡು: ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್ ಒತ್ತುವರಿಯನ್ನು ನಗರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.

    ನೆಹರು ವೃತ್ತದಿಂದ ಶ್ರೀಕಂಠೇಶ್ವರ ದೇವಾಲಯದವರೆಗಿನ ಬಜಾರ್ ರಸ್ತೆ, ಅಂಗಡಿ ಬೀದಿಯಲ್ಲಿ ವ್ಯಾಪಾರಿಗಳು, ವರ್ತಕರು ಫುಟ್‌ಪಾತ್ ಅತಿಕ್ರಮಿಸಿಕೊಂಡಿದ್ದರು. ಇದರಿಂದ ಸಂಚಾರ ದಟ್ಟನೆಯಾಗಿ ಸಾರ್ವಜನಿಕರು ಓಡಾಡಲು ಕಿರಿಕಿರಿ ಉಂಟಾಗಿತ್ತು.

    ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು.

    ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ ಮಾತನಾಡಿ, ಬಜಾರ್ ರಸ್ತೆಯಲ್ಲಿ ಅಂಗಡಿ ಮಾಲೀಕರು, ಬೀದಿ ಬದಿ ವ್ಯಾಪಾರಸ್ಥರು ಪಾದಚಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಕೇಳಿಬಂದಿತ್ತು. ನಾವು ಕೂಡ ಮಾನವೀಯತೆಯಿಂದ ಒಂದು ತಿಂಗಳ ಗಡುವು ಕೊಟ್ಟು ತೆರವುಗೊಳಿಸುವಂತೆ ಮನವಿ ಮಾಡಿದ್ದೆವು. ಆದರೂ ತೆರವುಗೊಳಿಸದೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಹಾಗಾಗಿ, ಅತಿಕ್ರಮಿಸಿಕೊಂಡಿದ್ದ ಪಾದಚಾರಿ ರಸ್ತೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಶುಕ್ರವಾರ ಮತ್ತು ಶನಿವಾರವೂ ತೆರವು ಕಾರ್ಯಾಚರಣೆ ನಡೆಯಲಿದ್ದು, ರಾಷ್ಟ್ರಪತಿ ರಸ್ತೆ ಹಾಗೂ ಎಂಜಿಎಸ್ ರಸ್ತೆಯಲ್ಲೂ ಒತ್ತುವರಿ ತೆರವುಗೊಳಿಸಲಾಗುವುದು ಎಂದರು.

    ನಗರಸಭಾ ಅಧಿಕಾರಿಗಳಾದ ಮೈತ್ರಾವತಿ, ವೆಂಕಟೇಶ್, ರಮೇಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts