More

    ಸ್ವಚ್ಛೋತ್ಸವ – ನಿತ್ಯೋತ್ಸವ ಮಾಸಾಚರಣೆ

    ಕನಕಪುರ: ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಮತ್ತು ಸ್ವಚ್ಛಭಾರತ ಪರಿಕಲ್ಪನೆಗಳು ಪ್ರಪಂಚದ ಎಲ್ಲ ದೇಶಗಳಿಗೆ ಇಂದಿಗೂ ಮಾದರಿಯಾಗಿವೆ. ಆ ಮಾದರಿಯಲ್ಲಿಯೇ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛೋತ್ಸವ – ನಿತ್ಯೋತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ರಾಮನಗರ ಜಿಲ್ಲೆಯ ಸಾತನೂರಿನಲ್ಲಿ ತರಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ತಿಳಿಸಿದರು.

    ತಾಲೂಕಿನ ಸಾತನೂರು ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛಭಾರತ್ ಮಿಷನ್ ಯೋಜನೆ, ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆ ಉದ್ಘಾಟನೆ ಹಾಗು ಘನತ್ಯಾಜ್ಯ ವಿಲೇವಾರಿ ಘಟಕದ ಏಕರೂಪದ ಬ್ರಾ್ಯಂಡಿಂಗ್ ಅನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಥಮಬಾರಿಗೆ ಈ ಯೋಜನೆ ಆರಂಭಿಸಲಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕವು ವೈಜ್ಞಾನಿಕವಾಗಿ ಸ್ಥಾಪನೆಯಾಗುತ್ತಿರುವುದರಿಂದ ಉತ್ತಮ ಪರಿಸರ ಹಾಗೂ ಆರೋಗ್ಯಕ್ಕಾಗಿ ಈ ಘಟಕಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.

    ಪ್ರತಿನಿತ್ಯ ಕಾಯಕ:  ಸ್ವಚ್ಛ ಭಾರತ್ ನಿರ್ವಣದ ಕನಸು ನನಸಾಗಬೇಕಾದರೆ ಗ್ರಾಮೀಣ ಪ್ರದೇಶವನ್ನು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿಯೇ ಈ ಯೋಜನೆ ಬಂದಿರುವುದರಿಂದ ಸ್ವಚ್ಛೋತ್ಸವವು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಬೇಕಾದರೆ, ಪ್ರತಿನಿತ್ಯ ಈ ಕಾಯಕವನ್ನು ಉತ್ಸವದ ರೀತಿಯಲ್ಲಿ ಮಾಡಬೇಕು. ಸಾರ್ವಜನಿಕರ ಮನದಲ್ಲಿ ಉಳಿಯುವಂತಾಗಲು ಗಾಂಧೀಜಯಂತಿಯ ದಿನದಂದು ಲೋಕಾರ್ಪಣೆ ಮಾಡಲಾಗಿದೆ. ಪ್ರತಿಯೊಬ್ಬರೂ ಕಸ ವಿಲೇವಾರಿಯಲ್ಲಿ ಜವಾಬ್ದಾರಿ ತೋರುವಂತೆ ಮನವಿ ಮಾಡಿದರು.

    ತಾಪಂ ಇಒ ಶಿವರಾಂ ಮಾತನಾಡಿ, ಸುತ್ತಲಿನ ಪರಿಸರ ಹಸನಾಗಿದ್ದರೆ, ಜನರ ಆರೋಗ್ಯ ಹಾಗೂ ಗ್ರಾಮಗಳ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಕಸ ವಿಲೇವಾರಿ ಘಟಕ ಸ್ಥಾಪನೆಯಿಂದ ಯಾವುದೇ ಜನ ಮತ್ತು ರೈತರಿಗೆ ತೊಂದರೆಯಾಗುವುದಿಲ್ಲ. ಇಲ್ಲಿ ಸಂಗ್ರಹವಾಗುವ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಉಳಿದ ತ್ಯಾಜ್ಯಗಳನ್ನು ಮರುಬಳಕೆ ಮಾಡಲು ಪರಿವರ್ತನೆ ಮಾಡಲಾಗುವುದು. ಜತೆಗೆ ಇಲ್ಲಿ ಮಾಡುವ ಯಾವುದೇ ಕಸವೂ ಸಂಗ್ರಹವಾಗಿಡದೇ ಮಾರಾಟ ಮತ್ತು ವಿಲೇವಾರಿ ರೂಪದಲ್ಲಿ ಹೊರಹೋಗುವುದರಿಂದ ಪರಿಸರ ಮತ್ತು ಜನರ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಸ್ವಚ್ಛತೆಗಾಗಿ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

    ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ಮಾತನಾಡಿದರು. ಜಿಲ್ಲಾ ಸಮಾಲೋಚಕರಿಂದ ಪ್ರತಿಜ್ಞಾವಿಧಿ ನಂತರ ಪಂಚಾಯತಿ ಸಿಬ್ಬಂದಿಗೆ ಸಮವಸ್ತ್ರ ವಿತರಿಸಲಾಯಿತು. ಜಿಲ್ಲಾ ಸಮಾಲೋಚಕರಾದ ಇರೋಬಾರೆಡ್ಡಿ, ಸೀನಪ್ಪ, ಚಂದ್ರಪ್ರಭಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts