More

    ಶುದ್ಧ ಕುಡಿವ ನೀರು ಪೂರೈಕೆಗೆ ಆದ್ಯತೆ: ಹೊಳಲ್ಕೆರೆ ಶಾಸಕ ಚಂದ್ರಪ್ಪ ಭರವಸೆ

    ಹೊಳಲ್ಕೆರೆ/ಭರಮಸಾಗರ: ದೇಶದಲ್ಲಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸಿಗಲಿ ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

    ಹೊಳಲ್ಕೆರೆ ಕ್ಷೇತ್ರದ ಕೊಳಹಾಳು ಗ್ರಾಮದಲ್ಲಿ 1.18 ಕೋಟಿ ರೂ. ಹಾಗೂ ಹಂಪನೂರಿನಲ್ಲಿ 109 ಕೋಟಿ ರೂ. ವೆಚ್ಚದಲ್ಲಿ ಮನೆ ಮನೆಗೆ ಸಂಪರ್ಕ ಕಲ್ಪಿಸುವ ಕೊಳಾಯಿ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

    ತಾಲೂಕಿನಾದ್ಯಂತ ಪ್ರತಿ ಮನೆಗೆ ಶುದ್ಧಕುಡಿಯುವ ನೀರು ಪೂರೈಸುವುದಕ್ಕಾಗಿ 498 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಯಳಗೋಡು ಮುದ್ದಾಪುರಕ್ಕೆ ಹೊಸಪೇಟೆ ಡ್ಯಾಂ, ಭರಮಸಾಗರಕ್ಕೆ ಸೂಳೆಕೆರೆ ಹಾಗೂ ವಾಣಿವಿಲಾಸ ಸಾಗರದಿಂದ ನೀರು ಒದಗಿಸಲಾಗುತ್ತಿದೆ. ಗುಣಮಟ್ಟದ ರಸ್ತೆ, ಶಾಲಾ ಕಾಲೇಜು, ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

    ಯಾವುದೇ ರೀತಿಯ ರೋಗ, ರುಜಿನಗಳಿಗೆ ಜನ ತುತ್ತಾಗದಿರಲು ಶುದ್ಧ ಕುಡಿಯುವ ನೀರು ಬೇಕು. ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿರುವ ಮೋದಿ, ಕೋವಿಡ್ ಸಂದರ್ಭದಿಂದ ಇಲ್ಲಿಯವರೆಗೆ 80 ಕೋಟಿ ಜನರಿಗೆ ಅಕ್ಕಿಯನ್ನು ಉಚಿತ ಕೊಡುತ್ತಿದ್ದಾರೆ ಎಂದು ಹೇಳಿದರು.

    ಪಾಕಿಸ್ತಾನ, ಶ್ರೀಲಂಕಾದಲ್ಲಿ ಒಂದು ಕೆಜಿ ಅಕ್ಕಿಗೆ 400 ರೂ. ಬೆಲೆಯಿದ್ದು, ಅದನ್ನು ಖರೀದಿಸಲು ಸಾಲಿನಲ್ಲಿ ನಿಲ್ಲಬೇಕಾದ ಸಂದರ್ಭ ಇದೆ. ಆದರೆ, ನರೇಂದ್ರ ಮೋದಿ ಪ್ರಧಾನಿ ಆಗಿರುವ ಕಾರಣಕ್ಕೆ ದೇಶಕ್ಕೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಮ್ಮ, ನಿರಂಜನಮೂರ್ತಿ, ಮಂಜುನಾಥ್, ಕಲ್ಲೇಶ್, ರಾಜಣ್ಣ, ಶಿವಮೂರ್ತಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts