More

    10,12 ನೇತರಗತಿಗೆ ಇನ್ಮುಂದೆ ವರ್ಷಕ್ಕೆರಡು ಬಾರಿ ಸಿಬಿಎಸ್ ಸಿ ಬೋರ್ಡ್​ ಪರೀಕ್ಷೆ

    ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ 10 ಮತ್ತು 12ನೇ ತರಗತಿ ಕೇಂದ್ರ ಬೋರ್ಡ್ ಪರೀಕ್ಷೆ(ಸಿಬಿಎಸ್ ಸಿ )ಗಳು ವರ್ಷಕ್ಕೆ ಎರಡು ಬಾರಿ ನಡೆಸಲು ಕೇಂದ್ರ ಸರ್ಕಾರ ನಿರ್ದರಿಸಿದೆ. ಆದರೆ, ಎರಡು ಪರೀಕ್ಷೆ ಬರೆಯಬೇಕಾ? ಅಥವಾ ಒಂದೇ ಪರೀಕ್ಷೆಗೆ ಹಾಜರಾಗಬೇಕಾ ಎಂಬುದು ವಿದ್ಯಾರ್ಥಿಗಳ ಇಷ್ಟಕ್ಕೆ ಬಿಟ್ಟಿದ್ದು. ಇದು ಆಯ್ಕೆಯಷ್ಟೇ ಹೊರತು ನಿರ್ಬಂಧ ಅಲ್ಲ. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ದೂರಮಾಡಲು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

    ನೂತನ ಕರಿಕ್ಯುಲಮ್​ ಫ್ರೇಮ್​ ವರ್ಕ್​(ಎನ್​ಸಿಎಫ್​) ಸಾಧ್ಯಾಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, ಇಂಜಿನಿಯರಿಂಗ್​ ಪ್ರವೇಶ ಪರೀಕ್ಷೆ ಜೆಇಇ ಮಾದರಿಯಲ್ಲೇ ವರ್ಷಕ್ಕೆ 2 ಬಾರಿ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆ. ಇದರಿಂದ ಉತ್ತಮ ರೀತಿಯಲ್ಲಿ ಅಂಕಗಳಿಸಬಹುದು, ಆದರೆ ಈ ಅವಕಾಶವನ್ನು ಪೂರ್ತಿ ವಿದ್ಯಾರ್ಥಿಗಳ ಇಷ್ಟಕ್ಕೆ ಬಿಟ್ಟುಬಿಟ್ಟಿದ್ದೇವೆ. ಇದರಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿದರು.

    ಇದನ್ನೂ ಓದಿ: ಐಐಟಿ ಕಾನ್ಪುರ ವಿದ್ಯಾರ್ಥಿಗಳ ನಡುವೆ ಮಾರಾಮಾರಿ; ಚೇರಿನಲ್ಲಿ ಹೊಡೆದಾಟ!

    ಸಿಬಿಎಸ್ ಸಿ ಬೋರ್ಡ್​ನಿಂದ ವರ್ಷದಲ್ಲಿ ಒಂದೇ ಸಾರಿ ಪರೀಕ್ಷೆ ಇರುವುದರಿಂದ, ಈ ಅವಕಾಶ ಕೈತಪ್ಪಿದರೆ ಒಂದು ವರ್ಷ ಭವಿಷ್ಯ ಹಾಳಾಗಲಿದೆ . ಇದು ವಿದ್ಯಾರ್ಥಿಗಳಲ್ಲಿ ಭಯ, ಒತ್ತಡ ಹೆಚ್ಚಾಗುತ್ತದೆ. ಇದರಿಂದ ಪರೀಕ್ಷೆ ಸರಿಯಾಗಿ ಬರೆಯಲಾಗುತ್ತಿಲ್ಲ. 2ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ ಇಂತಹ ಭಯ ಅವರಲ್ಲಿ ಇರುವುದಿಲ್ಲ. ಪೂರ್ಣಪ್ರಮಾಣದಲ್ಲಿ ಪರೀಕ್ಷೆ ಬರೆದರೆ ಸಂತೃಪ್ತಿಯಾಗಿ ಸ್ಕೋರ್​ ಸಾಧಿಸುತ್ತಾರೆ. ಒಮ್ಮೆ ಒಳ್ಳೆಯ ಅಂಕ ಗಳಿಸಿದ ವಿದ್ಯಾರ್ಥಿ ಮತ್ತೊಮ್ಮೆ ಬರುವ ಪರೀಕ್ಷೆ ಬರೆಯಬೇಕಾ ಅಥವಾ ಬೇಡವಾ ಎಂಬುದು ಐಚ್ಛಿಕ ವಿಷಯವಾಗಿದೆ. ಇದರಲ್ಲಿ ಯಾವ ನಿರ್ಬಂಧವೂ ಇಲ್ಲ. ಈ ವಿಧಾನ 2024ರ ನಂತರ ಅನುಷ್ಠಾನಕ್ಕೆ ಬರುತ್ತದೆ ಎಂದು ಸಚಿವರು ಹೇಳಿದರು.

    ಡಮ್ಮಿ ಶಾಲೆಗಳ ಮೇಲೆ ಕ್ರಮ: ರಾಜಾಸ್ತಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದ ಬಗ್ಗೆ ಮಾತನಾಡಿದ ಪ್ರಧಾನ್, ಯಾವುದೇ ಪ್ರಾಣಹಾನಿಯಾಗಬಾರದು ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಶಾಲೆಗೆ ದಾಖಲಾದ ವಿದ್ಯಾರ್ಥಿಗಳು ಪರೀಕ್ಷೆಗೆಂದೇ ಟ್ಯೂಷನ್ ಮಾದರಿ ಕೇಂದ್ರಗಳಲ್ಲಿ ಓದುವುದು ಸರಿಯಲ್ಲ. ಇಂತಹ ಡಮ್ಮಿಶಾಲೆಗಳ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಕೋಟಾ ವಿದ್ಯಾರ್ಥಿಗಳ ಆತ್ಮಹತ್ಯೆಯು ಸೂಕ್ಷ್ಮ ವಿಷಯವಾಗಿದೆ, ಅವರನ್ನು ಒತ್ತಡದಿಂದ ಮುಕ್ತವಾಗಿಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪ್ರಧಾನ್ ಹೇಳಿದರು.

    ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಇಂದಿನ ಶಿಕ್ಷಣ ವ್ಯವಸ್ಥೆಯ ಬೇಡಿಕೆಗಳನ್ನು ಪೂರೈಸಲು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿಯನ್ನು ಪುನರ್​ ರಚಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

    ಕೋಪ ಯಾರಿಗೂ ತರವಲ್ಲ: ಮನೋಲ್ಲಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts