More

    ಕೋಳಿಕೆರೆ ಹೂಳುತ್ತುವ ಕಾಮಗಾರಿ; ರಾಜಕೀಯ ನಾಯಕರ ಮಧ್ಯೆ ಜಟಾಪಟಿ

    ಧಾರವಾಡ: ನಗರದ ವಾರ್ಡ್ ನಂಬರ್ ೮ರ ವ್ಯಾಪ್ತಿಯಲ್ಲಿರುವ ಕೋಳಿಕೆರೆ ಹೂಳೆತ್ತುವ ಕಾಮಗಾರಿ ರಾಜಕೀಯ ತಿರುವು ಪಡೆದಿದೆ. ಪಾಲಿಕೆಯಿಂದ ಟೆಂಡರ್ ಆಗುವ ಮೊದಲೇ ಕಾಮಗಾರಿ ನಡೆಸಲಾಗುತ್ತಿದೆ. ಅಲ್ಲದೆ, ಈ ಕಾಮಗಾರಿ ವಿಚಾರದಲ್ಲಿ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಭಾಗವಹಿಸುತ್ತಿರುವುದು ಏಕೆ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ.
    ಕೋಳಿಕೆರೆ ನಗರ ವ್ಯಾಪ್ತಿಯಲ್ಲಿದ್ದರೂ ಧಾರವಾಡ- ೭೧ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಕೆಲ ದಿನಗಳಿಂದ ಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ರೈತರು ಜಮೀನುಗಳಿಗೆ ಫಲವತ್ತಾದ ಮಣ್ಣು ಹೇರಿಕೊಂಡು ಹೋಗಲು ಅನುಕೂಲ ಮಾಡಲಾಗಿದೆ. ಆದರೆ, ಹೂಳು ರಸ್ತೆಗುಂಟ ಬಿದ್ದು ಗಲೀಜಾಗುತ್ತಿದೆ. ಅಲ್ಲದೆ, ದುರ್ವಾಸನೆ ಬೀರುತ್ತಿದೆ ಎಂದು ಸ್ಥಳೀಯರು ಭಾನುವಾರ ರಸ್ತೆ ತಡೆ ನಡೆಸಿದ್ದರು.
    ಅಲ್ಲಿಗೆ ತೆರಳಿದ್ದ ಸ್ಥಳೀಯ ಪಾಲಿಕೆ ಸದಸ್ಯ ಶಂಕರ ಶಳಕೆ ಗುತ್ತಿಗೆದಾರನೊಬ್ಬನನ್ನು ವಿಚಾರಿಸಿದ್ದಾರೆ. ಟೆಂಡರ್‌ಗೂ ಮೊದಲೇ ಕಾಮಗಾರಿ ಮಾಡಲು ಬರುವುದಿಲ್ಲ, ಕೂಡಲೇ ಕೆಲಸ ಬಂದ್ ಮಾಡುವಂತೆ ಹೇಳಿದ್ದಾರೆ. ಇದಾದ ಕೆಲ ಹೊತ್ತಿನ ನಂತರ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಅವರು ಕರೆ ಮಾಡಿ ಅವಾಜ್ ಹಾಕಿದ್ದಾರೆ ಎಂದು ಶಳಕೆ ಆರೋಪಿಸಿದ್ದಾರೆ. ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಈ ಹಿಂದೆಯೇ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಅನುದಾನ ಕೋರಿದ್ದೆ. ಟೆಂಡರ್ ಆಗುವ ಮೊದಲೇ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಧೂಳು, ದುರ್ವಾಸನೆ ಹೆಚ್ಚಾಗಿದೆ. ಇದನ್ನು ವಿಚಾರಿಸಿದ ಬೆನ್ನಲ್ಲೇ ಶಿವಲೀಲಾ ಅವರು ಕರೆ ಮಾಡಿ ನಿನಗೇನು ಸಂಬAಧ? ಎಂದಿದ್ದಾರೆ. ಅಽಕಾರಿಗಳೂ ಅವರ ಕೈಗೊಂಬೆಯAತೆ ಕೆಲಸ ಮಾಡುತ್ತಿದ್ದಾರೆ ಎಂದು ಶಳಕೆ ಪ್ರತಿಕ್ರಿಯಿಸಿದ್ದಾರೆ.
    ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಅಮೃತ ದೇಸಾಯಿ, ಕ್ಷೇತ್ರದ ಕಾಮಗಾರಿಗಳ ಕುರಿತು ಚುನಾಯಿತ ಪ್ರತಿನಿಽ ಮಾತನಾಡಲಿ. ಆದರೆ ಶಾಸಕರ ಪತ್ನಿ ಅಽಕಾರ ಚಲಾಯಿಸುತ್ತಿರುವುದು ಸರಿಯಲ್ಲ. ಪಾಲಿಕೆ ಸದಸ್ಯನಿಗೆ ಕರೆ ಮಾಡಿ ಏಕವಚನದಲ್ಲಿ ನಿಂದಿಸಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಹೋರಾಟ ಮಾಡಲಾಗುವುದು ಎಂದಿದ್ದಾರೆ.

    ರೈತರ ಹಿತದೃಷ್ಟಿಯಿಂದ ಹೂಳೆತ್ತುವ ಕಾಮಗಾರಿ
    ಸಾರ್ವಜನಿಕರು ಹಾಗೂ ರೈತರ ಹಿತದೃಷ್ಟಿಯಿಂದ ಕೋಳಿಕೆರೆಯ ಹೂಳೆತ್ತುವ ಕಾರ್ಯ ಮಾಡಲಾಗುತ್ತಿದೆ. ರೈತರು ತಮ್ಮ ಹೊಲಗಳಿಗೆ ಕೆರೆಯ ಫಲವತ್ತಾದ ಮಣ್ಣನ್ನು ಒಯ್ಯುತ್ತಿದ್ದಾರೆ ಎಂದು ವೈಶುದೀಪ ಫೌಂಡೇಷನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ತಿಳಿಸಿದ್ದಾರೆ. ಕೋಳಿಕೆರೆಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಸ್ವ ಇಚ್ಛೆ¬ಂದ ಹೂಳೆತ್ತುವ ಕಾರ್ಯ ಕೈಗೊಂಡಿದ್ದು, ಕೆಲವರಿಗೆ ಇರುಸು ಮುರುಸಾಗಿರುವುದು ವಿಪಯÁðಸ. ಚುನಾವಣೆ ಸಂಧರ್ಭದಲ್ಲಿ ಮÁತ್ರ ರಾಜಕಾರಣ ಮÁಡಬೇಕು. ಅಭಿವೃದ್ಧಿ ವಿಷಯ ಪಕ್ಷಾತೀತ ಹಾಗೂ ಜಾತ್ಯತೀತ ಆಗಿರಬೇಕು. ಆದರೆ, ಅಭಿವೃದ್ಧಿ ಸಹಿಸದ ಕೆಲವರು ಆರೋಪ ಮÁಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ದುಷ್ಟ ಶಕ್ತಿಗಳಿಗೆ ಹೆದರುವುದಿಲ್ಲ ಎಂದು ಶಿವಲೀಲಾ ಕುಲಕರ್ಣಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts