More

    ಭಾರತದ ಕೋರ್ಟ್​ಗಳು ಶಿಥಿಲ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿವೆ: ಸಿಜೆಐ ಅಸಮಾಧಾನ

    ಔರಂಗಾಬಾದ್​​: ಭಾರತದಲ್ಲಿ ನ್ಯಾಯಾಂಗಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರಗಳು ಸಾಕಷ್ಟು ಆಸಕ್ತಿ ತೋರುತ್ತಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್​.ವಿ.ರಮಣ ಹೇಳಿದ್ದಾರೆ. ಕೇಂದ್ರ ಕಾನೂನು ಸಚಿವ ಕಿರೆಣ್​ ರಿಜಿಜು ಅವರ ಮುಂದೆಯೇ ಸಿಜೆಐ ಈ ಕಳಕಳಿ ವ್ಯಕ್ತಪಡಿಸಿದ್ದಾರೆ.

    ಇಂದು(ಅ.23) ಬಾಂಬೆ ಹೈಕೋರ್ಟ್​ನ ಔರಂಗಾಬಾದ್​ ಪೀಠದ ಅನೆಕ್ಸ್​ ಕಟ್ಟಡದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಸಿಜೆಐ ಅವರು, ನ್ಯಾಯಾಂಗಕ್ಕೆ ಉತ್ತಮ ಮೂಲಸೌಕರ್ಯ ಲಭ್ಯವಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಭಾರತದಲ್ಲಿ ನ್ಯಾಯಾಂಗಕ್ಕೆ ಮೂಲಸೌಕರ್ಯ ಒದಗಿಸುವುದು ಯಾವಾಗಲೂ ನಂತರದ ಚಿಂತನೆಯಾಗಿಬಿಟ್ಟಿದೆ. ಈ ಮನಸ್ಥಿತಿಯ ಕಾರಣದಿಂದಾಗಿ ಭಾರತದಲ್ಲಿ ನ್ಯಾಯಾಲಯಗಳು ಇನ್ನೂ ಶಿಥಿಲಗೊಂಡ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಕಷ್ಟ ಎದುರಿಸುತ್ತಿವೆ” ಎಂದು ಹೇಳಿದರು.

    ದೇಶದ ಶೇಕಡ 26 ರಷ್ಟು ನ್ಯಾಯಾಲಯಗಳಲ್ಲಿ ಮಹಿಳೆಯರಿಗಾಗಿ ಶೌಚಾಲಯಗಳಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ, “ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ಪ್ರಾಧಿಕಾರದ ಸ್ಥಾಪನೆಗೆ ನಾನು ಪ್ರಸ್ತಾವನೆ ಕಳುಹಿಸಿದ್ದೇನೆ. ಅದನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಚರ್ಚೆಗೆ ತರುವಂತೆ ಕಾನೂನು ಮತ್ತು ನ್ಯಾಯಾಂಗ ಸಚಿವರನ್ನು ಆಗ್ರಹಿಸುತ್ತೇನೆ” ಎಂದರು. (ಏಜೆನ್ಸೀಸ್)

    Lakhimpur Kheri Case: ಇನ್ನೂ ಮೂವರ ಬಂಧನ

    ವಿಮಾನ ನಿಲ್ದಾಣ ಅಧಿಕಾರಿಗಳ ಬಗ್ಗೆ ದೂರಿದ್ದ ನಟಿ ಸುಧಾ ಚಂದ್ರನ್​ ಕ್ಷಮೆ ಕೋರಿದ ಸಿಐಎಸ್​ಎಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts