More

    Lakhimpur Kheri Case: ಇನ್ನೂ ಮೂವರ ಬಂಧನ

    ಲಖನೌ: ಉತ್ತರಪ್ರದೇಶದ ಲಖೀಂಪುರ್​ ಖೇರಿಯಲ್ಲಿ ರೈತಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಎಂಟು ಜನರ ಸಾವಿನ ಪ್ರಕರಣದಲ್ಲಿ ಯುಪಿ ಪೊಲೀಸರು ಇದೀಗ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಈವರೆಗೆ ಬಂಧಿಸಲ್ಪಟ್ಟವರ ಸಂಖ್ಯೆ 13ಕ್ಕೆ ಏರಿದೆ.

    ಅ.3 ರಂದು ನಡೆದ ಈ ಘಟನೆಯಲ್ಲಿ ನಾಲ್ಕು ಜನ ರೈತರ ಮೇಲೆ ಕೇಂದ್ರದ ಕಿರಿಯ ಗೃಹ ಸಚಿವ ಅಜಯ್​ ಮಿಶ್ರಾರ ಮಗ ಆಶಿಶ್​ ಮಿಶ್ರ ಅವರು ಕಾರು ಹರಿಸಿದ್ದರು. ತದನಂತರ ನಡೆದ ಹಿಂಸಾಚಾರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಪತ್ರಕರ್ತರು ಮೃತಪಟ್ಟಿದ್ದರು ಎಂದು ಆರೋಪಿಸಲಾಗಿದೆ. ಆಶಿಶ್​ರನ್ನು ಅ.9 ರಂದು ಬಂಧಿಸಲಾಗಿತ್ತು.

    ಇದನ್ನೂ ಓದಿ: ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯ ದೇವರ ಫೋಟೋ ಹಿಂದಿತ್ತು ಮನಕಲಕುವ ದೃಶ್ಯ

    ಸಿಂಗಾಹಿ ಪಟ್ಟಣದ ಮೋಹಿತ್ ತ್ರಿವೇದಿ, ಟಿಕೋನಿಯಾ ಕೊತ್ವಾಲಿ ವ್ಯಾಪ್ತಿಯ ಬರ್ಸೋಲಾ ಕಲಾನ್‌ ನಿವಾಸಿ ರಂಕು ರಾಣಾ ಮತ್ತು ಚಿಮ್ಮ ತಾಂಡಾದ ಧರ್ಮೇಂದ್ರ ಎಂಬುವರು ಇಂದು(ಅ.23) ಬೆಳಿಗ್ಗೆ ಬಂಧಿಸಲ್ಪಟ್ಟ ಮೂವರು ಆರೋಪಿಗಳು. ಟಿಕೋನಿಯ ಪೊಲೀಸ್​ ಠಾಣೆಯಲ್ಲಿ ದಾಖಲಿಸಲಾಗಿರುವ ಎಫ್​ಐಆರ್​ ಆಧಾರದಲ್ಲಿ ಯುಪಿ ಸರ್ಕಾರ ನೇಮಿಸಿರುವ ಎಸ್​ಐಟಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

    ಪ್ರಕರಣದಲ್ಲಿ ಅದಾಗಲೇ ಬಂಧಿಸಲಾಗಿರುವ ಇತರ ಆರೋಪಿಗಳೆಂದರೆ ಬಿಜೆಪಿ ವಾರ್ಡ್ ಸದಸ್ಯ ಸುಮಿತ್ ಜೈಸ್ವಾಲ್, ಅಂಕಿತ್ ದಾಸ್, ಲತೀಫ್ ಅಲಿಯಾಸ್ ಕಾಳೆ, ಶೇಖರ್ ಭಾರತಿ, ಶಿಶು ಪಾಲ್, ಸತ್ಯ ಪ್ರಕಾಶ್ ತ್ರಿಪಾಠಿ ಅಲಿಯಾಸ್ ಸತ್ಯಂ, ನಂದನ್ ಸಿಂಗ್ ಬಿಶ್ಟ್, ಆಶಿಶ್ ಪಾಂಡೆ ಮತ್ತು ಲವ್ಕುಶ್ ರಾಣಾ. ಪೊಲೀಸ್​ ಕಸ್ಟಡಿಯಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.(ಏಜೆನ್ಸೀಸ್​)

    ಜಲಾಶಯದಲ್ಲಿ ಹರಿದುಹೋದ ರೈತ; 70 ಕಿಮೀ ದೂರದಲ್ಲಿ ಶವ ಪತ್ತೆ

    ಹೊರರಾಜ್ಯದಿಂದ ಬಂದು ವನ್ಯಪ್ರಾಣಿಯ ಚರ್ಮ ಮಾರುತ್ತಿದ್ದವರ ಬಂಧನ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts