ಪೌರಕಾರ್ಮಿಕರ ಕ್ರೀಡಾಕೂಟಕ್ಕೆ ಚಾಲನೆ

8mnv01
ಮಾನ್ವಿ ಪಟ್ಟಣದ ಸರ್ಕಾರಿ ಬಾಷುಮಿಯಾ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ಪುರಸಭೆ ಪೌರಕಾರ್ಮಿಕರ ಕ್ರೀಡಾಕೂಟಕ್ಕೆ ಪುರಸಭೆ ಸದಸ್ಯ ಲಕ್ಷ್ಮೀದೇವಿ ನಾಯಕ ಚಾಲನೆ ನೀಡಿದರು. ಆರೋಗ್ಯ ನಿರೀಕ್ಷಕ ಮಹೇಶ, ಈರಣ್ಣ ಇದ್ದರು.
Published on

ಮಾನ್ವಿ: ವರ್ಷವಿಡಿ ಸ್ವಚ್ಛ ತೆಗೆ ಆದ್ಯತೆ ನೀಡುವ ಪೌರ ಕಾರ್ಮಿಕರು ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಚಾರ ಎಂದು ಪುರಸಭೆ ಸದಸ್ಯೆ ಲಕ್ಷ್ಮೀ ದೇವಿ ನಾಯಕ ಹೇಳಿದರು.

ಪಟ್ಟಣದ ಸರ್ಕಾರಿ ಬಾಷುಮಿಯಾ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಪುರಸಭೆ ಪೌರಕಾರ್ಮಿಕರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡಾಕೂಟಗಳಿಂದ ಪೌರಕಾರ್ಮಿಕರು ಮತ್ತು ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಲು ಕೂಡ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪುರುಷ ಪೌರಕಾರ್ಮಿಕರಿಗೆ ಗುಂಡು ಎಸೆತ, ಓಟದ ಸ್ಪರ್ಧೆ, ಕಬ್ಬಡ್ಡಿ, ವಾಲಿಬಾಲ್, ಗೋಣಿಚೀಲ ಓಟ, ಕ್ರಿಕೆಟ್, ಮಹಿಳಾ ಪೌರಕಾರ್ಮಿಕರಿಗೆ ಗುಂಡು ಎಸೆತ, ಓಟದ ಸ್ಪರ್ಧೆ, ವಾಲಿಬಾಲ್, ನಿಂಬೆ ಚಮಚ ಓಟ, ಸಂಗೀತ ಕುರ್ಚಿ ಇತರೆ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಆರೋಗ್ಯ ನಿರೀಕ್ಷಕ ಮಹೇಶ, ಪುರಸಭೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net