More

    ಪುರಭವನ ನಿರ್ವಹಣೆಗೆ ಗುತ್ತಿಗೆ: ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

    ಗಂಗಾವತಿ: ಸಭೆ, ಸಮಾರಂಭಗಳಿಗೆ ಪುರಭವನ ಅನಕೂಲವಾಗಲಿದ್ದು, ನಗರಸಭೆ ನಿರ್ವಹಣೆಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ನಗರದ 3ನೇವಾರ್ಡ್ ಜಯನಗರದ ಮಳೆ ಮಲ್ಲೇಶ್ವರ ದೇವಾಲಯದ ಬಳಿ ಲೋಕೋಪಯೋಗಿ ಇಲಾಖೆ 2.41 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಪುರಭವನ ಉದ್ಘಾಟಿಸಿ ಗುರುವಾರ ಮಾತನಾಡಿದರು.

    2018-19ನೇ ಸಾಲಿನಲ್ಲಿ ಪುರಭವನ ಮಂಜೂರಾಗಿದ್ದು, ಕೆಕೆಆರ್‌ಡಿಬಿ ಅನುದಾನದಡಿ ನಿರ್ಮಿಸಲಾಗಿದೆ. ಸಿಬ್ಬಂದಿ ಕೊರತೆಯಿಂದ ನಿರ್ವಹಣೆಗೆ ಸಮಸ್ಯೆಯಾಗುತ್ತಿದ್ದು, ಕಿಡಿಗೇಡಿಗಳಿಂದ ಹಾನಿಯಾಗುತ್ತಿದೆ. ನಿರ್ವಹಣೆಗೆ ಗುತ್ತಿಗೆ ನೀಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಅಲ್ಲದೆ ಒಳಾಂಗಣ ಕ್ರೀಡಾಂಗಣ ಮತ್ತು ಈಜುಕೊಳಗಳನ್ನು ಗುತ್ತಿಗೆ ನೀಡಲು ಯೋಚಿಸಲಾಗಿದೆ. ಹಳೇ ಪ್ರವಾಸಿ ಮಂದಿರದಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ಪುರಭವನ ಹಸ್ತಾಂತರ ವಿಚಾರವಾಗಿ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮತ್ತು ಲೋಕೋಪಯೋಗಿ ಇಲಾಖೆ ಎಇಇ ಸುದೇಶಕುಮಾರ ನಡುವೆ ವಾಗ್ವಾದ ನಡೆಯಿತು. ನಗರಸಭೆಗೆ ಹಸ್ತಾಂತರವಾಗಿಲ್ಲ ಎಂದು ಪೌರಾಯುಕ್ತ ತಿಳಿಸಿದರೆ, 2021ರಲ್ಲಿ ನಗರಸಭೆಗೆ ನೀಡಿದ್ದ ದಾಖಲೆಗಳಿವೆ ಎಂದು ಎಇಇ ಹೇಳುವ ಮೂಲಕ ವಾಗ್ವಾದಕ್ಕೆ ತೆರೆ ಎಳೆದರು.

    ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಠಿ, ಲೋಕೋಯೋಗಿ ಇಲಾಖೆ ಇಇ ರಾಜಶೇಖರ್ ಕಡಿವಾಳ್, ಎಇ ನಾಗರಾಜ್, ನಗರಸಭೆ ಸದಸ್ಯರಾದ ಸಿಂಗನಾಳ ಉಮೇಶ, ಚೌಡ್ಕಿ ರಮೇಶ, ವಾಸುದೇವ ನವಲಿ, ಶರಭೋಜಿರಾವ್ ಗಾಯಕ್ವಾಡ್, ಪರಶುರಾಮ್ ಮಡ್ಡೇರ್, ಸಿ.ವೆಂಕಟರಮಣ, ನವೀನ್ ಮಾಲಿಪಾಟೀಲ್, ಮಾಜಿ ಸದಸ್ಯ ಜೋಗದ ಹನುಮಂತಪ್ಪ ನಾಯಕ, ಅಕ್ರಮ ಸಕ್ರಮ ಸಮಿತಿ ಸದಸ್ಯ ಸಿದ್ದಲಿಂಗಯ್ಯಸ್ವಾಮಿ ಗಡ್ಡಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts