More

    2.35 ಕೋಟಿ ರೂ. ವೆಚ್ಚದಲ್ಲಿ ಹೊಸ ರೂಪ ತಾಳಿದ ಚಿತ್ರದುರ್ಗ ನಗರಸಭೆ

    ಕೆ.ಎಸ್.ಪ್ರಣವ್‌ಕುಮಾರ್ ಚಿತ್ರದುರ್ಗ
    ಚಿತ್ರದುರ್ಗ ನಗರಸಭೆಗೆ 2.35 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ನೀಡಿದ್ದು, ಸಾರ್ವಜನಿಕರ ಸಮಸ್ಯೆ ಕುರಿತು ಚರ್ಚೆ, ಸಾಮಾನ್ಯ ಸೇರಿ ವಿವಿಧ ರೀತಿ ಸಭೆ ಆಯೋಜಿಸಲು ವಿಶಾಲ ಸಭಾಂಗಣ, ಜತೆಗೆ ಲಿಫ್ಟ್ ನಿರ್ಮಿಸಲಾಗಿದೆ.

    ನಗರ ಪೊಲೀಸ್ ಠಾಣೆ ಮುಂಭಾಗ ಎಂಟತ್ತು ವರ್ಷಗಳ ಹಿಂದೆ ನಿರ್ಮಾಣವಾದ ನಗರಸಭೆಯ ಕಟ್ಟಡದಲ್ಲಿ ಸಾಮಾನ್ಯ, ತ್ರೈಮಾಸಿಕ ಸಭೆ ನಡೆಸಿ, ನಗರ ವ್ಯಾಪ್ತಿಯ ವಾರ್ಡ್‌ಗಳಲ್ಲಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಸಭಾಂಗಣ ಇರಲಿಲ್ಲ. ಪರಿಣಾಮ ಜಿಲ್ಲಾಧಿಕಾರಿ, ಜಿಪಂ ಸಿಇಒ ಅನುಮತಿ ಪಡೆದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಲಾಗುತ್ತಿತ್ತು.

    ದಶಕಗಳ ಹಿಂದೆ ಮದಕರಿನಾಯಕ ವೃತ್ತ ಸಮೀಪದ ನಗರಸಭೆ ಹಳೆಯ ಕಟ್ಟಡದಲ್ಲಿ ವಿಶಾಲವಾದ ಸಂಭಾಗಣ ಇತ್ತು. ಅಲ್ಲಿ ಸಭೆ ನಡೆಸಲು ಯಾವ ಸಮಸ್ಯೆಯೂ ಇರಲಿಲ್ಲ. ಆದರೆ, ಆ ಕಟ್ಟಡವನ್ನು ವಾಲ್ಮೀಕಿ ಭವನ ನಿರ್ಮಿಸಲು ಹಸ್ತಾಂತರಿಸಿ, ಪೊಲೀಸ್ ಠಾಣೆ ಎದುರು ಹೊಸ ಕಟ್ಟಡ ನಿರ್ಮಿಸಿಕೊಂಡು ಸ್ಥಳಾಂತರವಾದ ಮೇಲೆ ಸಮಸ್ಯೆ ತಲೆದೂರಿತು. ಸ್ವಂತ ಕಟ್ಟಡದಲ್ಲೇ ನಿರ್ಮಾಣವಾಗಬೇಕು ಎಂಬ ಕೂಗು ಸದಸ್ಯರಿಂದ ನಿರಂತರವಾಗಿ ಕೇಳಿಬರುತ್ತಿತ್ತು.

    ಎರಡು ವರ್ಷದ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚಿಸಿ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಒಂದೂವರೆ ವರ್ಷದ ಹಿಂದೆ ಕಟ್ಟಡಕ್ಕೆ ಆಧುನೀಕತೆ ಮೆರುಗು ನೀಡುವ ಕಾಮಗಾರಿ, ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

    ಈ ಮೊದಲು ನೆಲ ಮತ್ತು ಮೊದಲ ಮಹಡಿಯಲ್ಲಿ ಕಚೇರಿ ನಿರ್ಮಾಣವಾಗಿತ್ತು. 6,300 ಅಡಿ ವಿಸ್ತೀರ್ಣ ಹೊಂದಿದ್ದು, ಎರಡನೇ ಮಹಡಿಯಲ್ಲಿ ನಿರ್ಮಾಣ ಆಗಿರುವ ಸಭಾಂಗಣ ವಿಶಾಲವಾಗಿದೆ. ಸದಸ್ಯರಿಗೆ ವಿಶ್ರಾಂತಿ ಕೊಠಡಿ, ಊಟದ ಕೋಣೆ ಕೂಡ ನಿರ್ಮಿಸಲಾಗಿದೆ.
    ತಿಪ್ಪಮ್ಮ ವೆಂಕಟೇಶ್ ಅಧ್ಯಕ್ಷೆ
    ನಗರಸಭೆ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts