More

    ಭದ್ರತೆಗೆ ನಿಯೋಜಿಸಿದ್ದ ಸಿಐಎಸ್​ಎಫ್​ ಯೋಧ ಪಿಸ್ತೂಲ್​-ಗುಂಡುಗಳ ಸಮೇತ ನಾಪತ್ತೆ!

    ಮುಂಬೈ: ನ್ಯೂಕ್ಲಿಯರ್​ ಪವರ್​ ಸ್ಟೇಷನ್​ ಭದ್ರತೆಗೆ ನಿಯೋಜಿಸಲಾಗಿದ್ದ ಸೆಂಟ್ರಲ್​ ಇಂಡಸ್ಟ್ರಿಯಲ್​ ಸೆಕ್ಯುರಿಟಿ ಫೋರ್ಸ್​(ಸಿಐಎಸ್​ಎಫ್) ಯೋಧ ಪಿಸ್ತೂಲ್ ಹಾಗೂ ಗುಂಡುಗಳ ಸಮೇತ ನಾಪತ್ತೆಯಾಗಿದ್ದಾನೆ. ಗುರುವಾರ ಮಧ್ಯಾಹ್ನದಿಂದಲೇ ನಾಪತ್ತೆ ಆಗಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

    ಮನೋಜ್ ಯಾದವ್ ಎಂಬಾತನೇ ನಾಪತ್ತೆಯಾಗಿರುವ ಸಿಐಎಸ್​ಎಫ್​ ಯೋಧ. ​ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ತಾರಾಪುರ ನ್ಯೂಕ್ಲಿಯರ್ ಪವರ್ ಸ್ಟೇಷನ್​​ನಲ್ಲಿ ಈತನನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಈತ ಸಿಐಎಸ್​ಎಫ್​ ಕ್ವಾರ್ಟರ್ಸ್​ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಕರ್ತವ್ಯಕ್ಕೆ ಹಾಜರಾಗದ್ದ ಹಿನ್ನೆಲೆಯಲ್ಲಿ ಗಮನಿಸಿದಾಗ ನಾಪತ್ತೆ ಆಗಿರುವುದು ತಿಳಿದುಬಂದಿದೆ.

    ಈತನೊಂದಿಗೆ ಪಿಸ್ತೂಲ್ ಮತ್ತು 30 ಜೀವಂತ ಗುಂಡುಗಳು ಕೂಡ ಕಾಣೆಯಾಗಿದ್ದು, ನಾಪತ್ತೆಯಾಗಿರುವ ಸೈನಿಕನ ಪತ್ತೆಗಾಗಿ ಸಿಐಎಸ್​ಎಫ್​ ಹಾಗೂ ಮಹಾರಾಷ್ಟ್ರ ಪೊಲೀಸ್ ಎರಡೂ ಕಡೆಯಿಂದಲೂ ವಿವಿಧ ತಂಡಗಳನ್ನು ರಚಿಸಿ ಹುಡುಕಾಟ ನಡೆಸಲಾಗುತ್ತಿದೆ. ಸಿಐಎಸ್​ಎಫ್ ತಾರಾಪುರ-ಬೊಯ್ಸರ್​ನಲ್ಲಿರುವ​ ಭಾಭಾ ಅಟಾಮಿಕ್ ರಿಸರ್ಚ್​ ಸೆಂಟರ್​ ಮತ್ತು ತಾರಾಪುರ ನ್ಯೂಕ್ಲಿಯರ್​ ಪವರ್​ ಸ್ಟೇಷನ್​ಗೆ ಭದ್ರತೆ ಒದಗಿಸುತ್ತಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಇಲ್ಲಿ ಹೆಚ್ಚಿನ ಭದ್ರತೆಯನ್ನು ನೀಡಲಾಗಿರುತ್ತದೆ.

    ಭದ್ರತೆಗೆ ನಿಯೋಜಿಸಲಾಗಿರುವ ಯೋಧರು ಪಾಳಿಗೆ ಒಂದು ಗಂಟೆ ಮೊದಲು ಆಯುಧವನ್ನು ಪಡೆದುಕೊಳ್ಳುತ್ತಾರೆ. ಆದರೆ 9 ಗಂಟೆಯ ರಾತ್ರಿಪಾಳಿಗೆ ನಿಯೋಜನೆ ಆಗಿದ್ದ ಯಾದವ್, ರಾತ್ರಿ 8 ಗಂಟೆಗೆ ಆಯುಧಗಳನ್ನು ಪಡೆಯುವ ಬದಲು ಮಧ್ಯಾಹ್ನವೇ ಪಡೆದಿದ್ದು ಕುತೂಹಲ ಮೂಡಿಸಿದೆ. ಈ ವಿಷಯದಲ್ಲಿ ಎಸ್​​ಒಪಿ ಪಾಲಿಸದ್ದರಿಂದ ಆಯುಧ ಹಂಚಿಕೆ ಸಿಬ್ಬಂದಿ ವಿರುದ್ಧ ಆಂತರಿಕ ತನಿಖೆ ನಡೆಯಲಿದೆ ಎನ್ನಲಾಗಿದೆ.

    21 ಪ್ರಯಾಣಿಕರಿದ್ದ ಬಸ್​ ಪಲ್ಟಿ, ಬಸ್​ ಚಕ್ರದಡಿಗೆ ಸಿಲುಕಿಕೊಂಡ ಬೈಕ್​..

    ಬೆಂಗಳೂರು-ಮೈಸೂರು ಮಾರ್ಗದಲ್ಲಿ ಮತ್ತೆ ಪ್ರವಾಹ ಸಾಧ್ಯತೆ; ಇನ್ನು 4 ದಿನ ಭಾರಿ ಮಳೆ ಮುನ್ಸೂಚನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts