More

    ಮುಂದಿನ ವರ್ಷದ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ಈ ಸಲದ ಬೇಸಿಗೆ ರಜೆ ಮೇ 28ಕ್ಕೆ ಕೊನೆ, 29ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭ

    ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಂದಿನ ವರ್ಷದ ಶೈಕ್ಷಣಿಕ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಇದರಂತೆ, ಈ ಸಲದ ಬೇಸಿಗೆ ರಜೆ ಮೇ 28ಕ್ಕೆ ಕೊನೆಗೊಂಡು, ಮೇ 29ರಿಂದ ಹೊಸ ಶೈಕ್ಷಣಿಕ ವರ್ಷ ಶುರುವಾಗಲಿದೆ.

    ಶಾಲಾ ದಿನಗಳ ವಿವರ ಪ್ರಕಟಿಸಿರುವ ಇಲಾಖೆ, ಮೊದಲನೇ ಅವಧಿ ಮೇ 29ರಿಂದ ಅಕ್ಟೋಬರ್ 2ರ ತನಕವೂ, ಎರಡನೇ ಅವಧಿಯು ಅಕ್ಟೋಬರ್ 26ರಿಂದ ಏಪ್ರಿಲ್ 14ರ ತನಕವೂ ಇರಲಿದೆ ಎಂದು ಸ್ಪಷ್ಟಪಡಿಸಿದೆ. ಇವುಗಳ ನಡುವೆ, ರಜಾ ಅವಧಿಯನ್ನೂ ಉಲ್ಲೇಖಿಸಿದ್ದು, ಮಧ್ಯಂತರ ಅವಧಿಯ ರಜೆ ಅಕ್ಟೋಬರ್ 3ರಿಂದ 25 ಮತ್ತು ಬೇಸಿಗೆ ರಜೆ 2021ರ ಏಪ್ರಿಲ್ 15ರಿಂದ ಮೇ 29ರ ತನಕ ಇರಲಿದೆ ಎಂದಿದೆ.

    ಬೋಧನಾ ದಿನಗಳು ಎಷ್ಟಿರಬೇಕು ಎಂದು ನಮೂದಿಸಿರುವ ಇಲಾಖೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ 321 ದಿನಗಳಿದ್ದು, ಈ ಪೈಕಿ 77 ರಜಾ ದಿನಗಳಿರುತ್ತವೆ. ಉಳಿದಂತೆ ನಾಲ್ಕು ವಿವೇಚನಾ ರಜೆಗೂ ಅವಕಾಶವಿಟ್ಟು, 240 ಬೋಧನಾ ದಿನಗಳು ಇರಬೇಕು ಎಂದು ಹೇಳಿದೆ. ಪ್ರಾಥಮಿಕ ಶಾಲಾ ಶಿಕ್ಷಣದ ಸಮುದಾಯದತ್ತ ಶಾಲಾ ಕಾರ್ಯಕ್ರಮ ಏಪ್ರಿಲ್ 13ಕ್ಕೆ, ಪ್ರೌಢ ಶಾಲೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮ ಏಪ್ರಿಲ್​ 14ರಂದು ಆಚರಿಸಬೇಕು. ಇದರ ಜತೆಗೆ ಕೆಲವು ದಿನಾಚರಣೆಗಳ ನಿಬಂಧನೆಗಳನ್ನೂ ನೆನಪಿನೋಲೆಯಲ್ಲಿ ಉಲ್ಲೇಖಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts