More

    ಸೂಕ್ಷ್ಮತೆ ಕಳೆದುಕೊಳ್ಳುತ್ತಿರುವ ಸಿನೆಮಾ

    ವಿಜಯವಾಣಿ ಸುದ್ದಿಜಾಲ ಹೊನ್ನಾವರ

    ಸಿನೆಮಾ ಒಂದು ಮಾಧ್ಯಮವಾಗಿ ಬೆಳೆದಿದೆ. ಆದರೆ, ಸಿನೆಮಾದಲ್ಲಿ ತಂತ್ರಜ್ಞಾನ ಬೆಳವಣಿಗೆಯಾಗುತ್ತಿದಂತೆ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಚಿತ್ರ ನಿರ್ದೇಶಕ ಎಂ.ಎಸ್. ಪ್ರಕಾಶ ಬಾಬು ಹೇಳಿದರು.

    ತಾಲೂಕಿನ ಕೆರೆಕೋಣದಲ್ಲಿ ಸಹಯಾನ ಕೇಂದ್ರ, ಸಮುದಾಯ ಕರ್ನಾಟಕ ಬೆಂಗಳೂರು, ಚಿಂತನ ಉತ್ತರ ಕನ್ನಡ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಸಿನೆಮಾ – ಹೊಸ ತಲೆಮಾರು’ ವಿಷಯ ಕುರಿತ 10ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ನಾವು ಕಥೆ ಹೇಳುವುದೇ ಸಿನೆಮಾದ ಆಶಯ ಅಂದುಕೊಂಡಿದ್ದೇವೆ. ಆದರೆ, ದೃಶ್ಯ ಅದಕ್ಕಿಂತ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಸಿನೆಮಾವನ್ನು ಮನರಂಜನೆಯ ಭಾಗವಾಗಿ ಮಾತ್ರ ನೋಡಲಾಗುತ್ತಿದೆಯೇ ಹೊರತು ಕಲಾ ಮಾಧ್ಯಮವಾಗಿ ನೋಡುತ್ತಿಲ್ಲ. ಇದು ವಿಪರ್ಯಾಸದ ಸಂಗತಿ. ಸಿನೆಮಾದಲ್ಲಿನ ಸೂಕ್ಷ್ಮತೆಯನ್ನು ಆಳವಾಗಿ ಅರಿಯುವ ಕಾರ್ಯವಾಗಬೇಕು ಎಂದರು.

    ಅಧ್ಯಾಪಕ ಪ್ರದೀಪ ಕೆಂಚನೂರು ಮಾತನಾಡಿ, ಪ್ರೇಕ್ಷಕ ಮತ್ತು ಮಾರುಕಟ್ಟೆ ಬಿಟ್ಟು ಸಿನೆಮಾ ಇಲ್ಲ. ಸಿನೆಮಾ ಏಕರೂಪಿಯಲ್ಲ. ಅದು ಬಹು ಅಭಿವ್ಯಕ್ತಿ, ಬಹು ಸಾದ್ಯತೆಯನ್ನು ಹೊಂದಿರುವ ಕ್ಷೇತ್ರವಾಗಿದೆ ಎಂದರು.

    ಪತ್ರಕರ್ತ ಅಮ್ಮೆಂಬಳ ಆನಂದ ಮಾತನಾಡಿ, ಜನರಲ್ಲಿ ಕಲೆ, ಸಾಹಿತ್ಯ ಅಭಿರುಚಿ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ಸೌಹಾರ್ದತೆ ತರಲು ಹೊಸ ತಲೆಮಾರನ್ನು ಸಿದ್ಧಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಾಹಿತಿ ಡಾ. ಆರ್.ವಿ. ಭಂಡಾರಿ ಕುರಿತು ಪ್ರಾಧ್ಯಾಪಕ ಎಂ.ಜಿ. ಹೆಗಡೆ ಮಾತನಾಡಿದರು. ಮಾನಸಾ ವಾಸರೆ ಸಿನೆಮಾ ಗೀತೆ ಹಾಡಿದರು. ಸಂಸ್ಕೃತಿ ಚಿಂತಕ ಕೆ. ಫಣಿರಾಜ ಅಧ್ಯಕ್ಷತೆ ವಹಿಸಿದ್ದರು. ಸಹಯಾನ ಕಾರ್ಯದರ್ಶಿ ವಿಠ್ಠಲ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ ಭಟ್ ಧನ್ಯವಾದ ಸಮರ್ಪಿಸಿದರು.

    ಗೋಷ್ಠಿ: ‘ಸಿನೆಮಾ-ಸೌಂದರ್ಯ ಮೀಮಾಂಸೆಯ ಅಭಿವ್ಯಕ್ತಿ’ ಕುರಿತು ಚಿತ್ರ ನಿರ್ದೇಶಕ ಅಭಯ ಸಿಂಹ, ‘ಸಿನಿಮಾ ನೋಡುವ, ವಿಮಶಿಸುವ ಬಗೆ’ ಕುರಿತು ಕತೆಗಾರ ಟಿ.ಕೆ. ದಯಾನಂದ, ‘ಹೆಣ್ಣಿನ ನೆಲೆಯಲ್ಲಿ ಸಿನೆಮಾ’ ಕುರಿತು ಚಿತ್ರನಟಿ, ನಿರ್ದೇಶಕಿ ಅನನ್ಯ ಕಾಸರವಳ್ಳಿ ವಿಷಯ ಮಂಡಿಸಿದರು.

    ಹೆಚ್ಚು ಜನರನ್ನು ತಲುಪುವ ಮಾಧ್ಯಮವಾಗಿ ಸಿನೆಮಾ ರಂಗ ಮಹತ್ವ ಪಡೆದಿದೆ. ಇಂದು ಈ ಕ್ಷೇತ್ರ ಹೆಚ್ಚು ಬಂಡವಾಳ ಬಯಸುತ್ತಿದೆ. ಒಳ್ಳೆಯ ಕಲೆಯಾಗಿ ಸಿನೆಮಾ ನಿರ್ವಿುಸುವ ಸಾಧ್ಯತೆಯೂ ಹೆಚ್ಚುತ್ತಿದೆ. ಆದರೆ, ಎಲ್ಲ ಸಿನೆಮಾಗಳು ಪ್ರೇಕ್ಷಕರನ್ನು ತಲುಪುತ್ತಿಲ್ಲ. ಪ್ರೇಕ್ಷಕರನ್ನು ಬೆಳೆಸಲು ಕೇರಳ ಮಾದರಿಯಲ್ಲಿ ಚಳವಳಿ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

    | ಕೆ. ಫಣಿರಾಜ ಸಂಸ್ಕೃತಿ ಚಿಂತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts