More

    ಮಾರ್ಗದರ್ಶಿ ಚಿಟ್​ ಫಂಡ್​ ಹಗರಣ; ತನಿಖೆಗೆ ಹಾಜರಾಗುವಂತೆ ರಾಮೋಜಿ ರಾವ್​ಗೆ ಸಮನ್ಸ್​ ಜಾರಿ

    ಅಮರಾವತಿ: ಮಾರ್ಗದರ್ಶಿ ಚಿಟ್​ ಫಂಡ್​ನಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಅಧ್ಯಕ್ಷ ಚೆರುಕುರಿ ರಾಮೋಜಿ ರಾವ್​ ಮತ್ತು ಅವರ ಸೊಸೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಆಂಧ್ರ ಪ್ರದೇಶ ಅಪರಾಧ ತನಿಖಾ ಸಂಸ್ಥೆ(CID) ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದೆ.

    ವಂಚನೆ, ಠೇವಣಿ ಹಣವನ್ನ ಮ್ಯೂಚುವಲ್​ ಫಂಡ್​ಗಳಿಗೆ ಹೂಡಿಕೆ ಮಾಡಿರುವುದು, ಭಾರತೀಯ ರಿಸರ್ವ್​​ ಬ್ಯಾಂಕ್(RBI)​ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿರುವ ಆರೋಪಗಳ ಮೇಲೆ ತನಿಖೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ.

    ಮಾರ್ಗದರ್ಶಿ ಚಿಟ್​ ಫಂಡ್​ ಹಗರಣ; ತನಿಖೆಗೆ ಹಾಜರಾಗುವಂತೆ ರಾಮೋಜಿ ರಾವ್​ಗೆ ಸಮನ್ಸ್​ ಜಾರಿ

    ಇದನ್ನೂ ಓದಿ: ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ನೀಡಿದ್ದ ಗಡುವು ವಿಸ್ತರಣೆ

    ಐಪಿಸಿ ಸೆಕ್ಷನ್​ 409, 420, 120-B, 477(A), 34, ಆಂಧ್ರ ಪ್ರದೇಶ ಠೇವಣಿದಾರರ ಹಣಕಾಸು ಹಿತರಕ್ಷಣಾ ಕಾಯ್ದೆ 1999 ಸೆಕ್ಷನ್​ 5ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಗೆ ಹಾಜರಾಗಿ ಸಹಕಾರ ನೀಡುವಂತೆ ನೋಟಿಸ್​ನಲ್ಲಿ CID ಅಧಿಕಾರಿಗಳು ಸೂಚಿಸಿದ್ದಾರೆ.

    ವಿಚಾರಣೆಗೆ CID ಆಧಿಕಾರಿಗಳು ನಾಲ್ಕು ದಿನಗಳ ಆಯ್ಕೆಯನ್ನು ನೀಡಿದ್ದು ಮಾರ್ಚ್​ 30-31, ಎಪ್ರಿಲ್​ 3 ಅಥವಾ 6ನೇ ತಾರೀಖಿನಂದು ಹಾಜರಾಗುವಂತೆ ರಾಮೋಜಿ ರಾವ್​​, ಶೈಲಜಾ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts