More

    ಐಷಾರಾಮಿ ಕಾರು ಮಾರಾಟ ಪ್ರಕರಣ: ಸಿಐಡಿ ಪ್ರಥಮ ಹಂತದ ವಿಚಾರಣೆ ಪೂರ್ಣ

    ಮಂಗಳೂರು: ಐಷಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಪ್ರಥಮ ಹಂತದಲ್ಲಿ ಸಿಸಿಬಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಿದೆ.

    ಅಮಾನತುಗೊಂಡ ಹಿಂದಿನ ಸಿಸಿಬಿ ಎಸ್‌ಐ ಕಬ್ಬಳ್‌ರಾಜ್, ನಾರ್ಕೋಟಿಕ್ ವಿಭಾಗದ ಇನ್‌ಸ್ಪೆಕ್ಟರ್ ರಾಮಕೃಷ್ಣ ಹಾಗೂ ಸಿಸಿಬಿ ಸಿಬ್ಬಂದಿ ಅಶಿತ್ ಡಿಸೋಜ ಮತ್ತು ರಾಜಾ, ಹಿಂದಿನ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಸಹಿತ ಸಿಬ್ಬಂದಿಯ ವಿಚಾರಣೆ ನಡೆಸಲಾಗಿದೆ.
    ಹಣಕಾಸು ವರ್ಗಾವಣೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪ ವ್ಯಕ್ತವಾದವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಈ ವಿಚಾರಣೆ ಇನ್ನು ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸಿಐಡಿಗೆ 24ಕ್ಕೂ ಅಧಿಕ ದೂರು?: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ್ದಾರೆ ಎಂದು ಹೇಳಲಾದ ಹಣಕಾಸಿನ ವಹಿವಾಟು ಹಾಗೂ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ 24ಕ್ಕೂ ಅಧಿಕ ದೂರುಗಳು ಉನ್ನತ ಮಟ್ಟದ ಅಧಿಕಾರಿಗಳಿಗೆ ಸಲ್ಲಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ದೂರುಗಳ ಪೈಕಿ 8ರಷ್ಟು ಕಾರು ಮಾರಾಟ ಪ್ರಕರಣಗಳೇ ಇವೆ. ಉಳಿದದ್ದು ವಿವಿಧ ಬೆಟ್ಟಿಂಗ್, ಹವಾಲಾ ಮತ್ತಿತರ ಹಣಕಾಸು ವಹಿವಾಟುಗಳು ಸೇರಿವೆ. ಈ ಎಲ್ಲ ಪ್ರಕರಣಗಳ ಬಗ್ಗೆ ಸಿಐಡಿ ಡಿವೈಎಸ್ಪಿ ದರ್ಜೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts