More

    ಅಂತರ್ಜಾಲ ದುರುಪಯೋಗ ಕುರಿತು ಸೈಬರ್ ಸೆಕ್ಯೂರಿಟಿ ಕಾರ್ಯಾಗಾರ

    ಬೆಂಗಳೂರು: ಅಂತರ್ಜಾಲ ವ್ಯವಸ್ಥೆಯು ದೇಶದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸೈಬರ್ ಅಪರಾಧಗಳಿಗಾಗಿ ಮಾಡುವ ಅಂತರ್ಜಾಲದ ದುರುಪಯೋಗವು ಅಭಿವೃದ್ಧಿಗೆ ಮಾರಕವಾಗಿದೆ ಎಂದು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಮ್ ಅಭಿಪ್ರಾಯಿಸಿದ್ದಾರೆ. ಇನ್‌ಫೆಂಟ್ರಿ ರಸ್ತೆಯಲ್ಲಿರುವ ಐಎಎಸ್ ಅಧಿಕಾರಿಗಳ ಸಂಘದ ಸಭಾಂಗಣದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ಪಬ್ಲಿಕ್ ಅಡ್ಮಿಮಿನಿಸ್ಟ್ರೇಷನ್ (ಐಐಪಿಎ) ಮತ್ತು ಸಿಐಡಿ ಇಲಾಖೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಸೈಬರ್ ಸೆಕ್ಯೂರಿಟಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

    ದೇಶದಲ್ಲಿ ಡಿಜಿಟಲ್ ಬಳಕೆ ಹೆಚ್ಚಾಗುತ್ತಿರುವುದರ ಜೊತೆಗೆ ಸೈಬರ್ ಕ್ರೈಮ್ ಪ್ರಮಾಣ ಕೂಡಾ ಏರಿಕೆಯಾಗುತ್ತಿರುವುದು ಆತಂಕಕಾರಿ ಸಂಗತಿ. ಅಂಕಿ ಅಂಶದ ಪ್ರಕಾರ, ದಾಖಲಾಗುವ ಒಟ್ಟು ಅಪರಾಧಗಳ ಸಂಖ್ಯೆಯ ಮೂರನೇ ಒಂದು ಭಾಗ ಪ್ರಕರಣಗಳು ಸೈಬರ್ ಅಪರಾಧಗಳಾಗಿವೆ. ದೇಶದ ಒಟ್ಟಾರೆ ಸೈಬರ್ ಪ್ರಕರಣದ ಶೇ.25ರಷ್ಟು ಕರ್ನಾಟಕದಿಂದ ದಾಖಲಾಗುತ್ತಿವೆ. ಇದನ್ನು ತಗ್ಗಿಸಲು ಸರ್ಕಾರ ಸೈಬರ್ ಸೇಫ್ಟಿ ಬಗ್ಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಬಗ್ಗೆ ಸಂಶೋಧನೆ ನಡೆಸಲು, ತರಬೇತಿ ನೀಡಲು ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ‘ಸೈಬರ್ ಸಮಿಟ್’ ಆಯೋಜಿಸಲಾಗುವುದು ಎಂದು ತಿಳಿಸಿದರು.

    ಕಾರ್ಯಕ್ರಮದ ಮೊದಲಿಗೆ ಐಐಪಿಎ ಚೇರ್ಮನ್, ನಿವೃತ್ತ ಐಎಎಸ್ ಅಧಿಕಾರಿ ಟಿ.ಎಂ. ವಿಜಯ ಭಾಸ್ಕರ್ ಸರ್ವರನ್ನು ಸ್ವಾಗತಿಸಿದರು. ನಿವೃತ್ತ ಐಎಎಸ್ ಅಧಿಕಾರಿ ರಾಮನಾಥನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಿಐಡಿ ಎಸ್‌ಪಿ ಡಾ.ಅನೂಪ್ ಶೆಟ್ಟಿ ಸರ್ವರನ್ನು ವಂದಿಸಿದರು. ಸಿಐಡಿ ಡಿಐಜಿ ಸಿ.ವಂಶಿಕೃಷ್ಣ, ಸಿಡಿಎಸಿಯ ಡಾ.ಎಸ್.ಡಿ. ಸುದರ್ಶನ, ಇನ್‌ೆಸಿಸ್ ಪ್ರೈವೆಸಿ ಆಫೀಸರ್ ಪಿ.ಶ್ರೀನಿವಾಸ್‌ರವರು ಸೈಬರ್ ಸೆಕ್ಯೂರಿಟಿ ಕುರಿತು ನಡೆದ ಗೋಷ್ಠಿಗಳಲ್ಲಿ ವಿಷಯ ಮಂಡಿಸಿದರು. ಇಲಾಖೆಯ ಪ್ರಮುಖರು, ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

    ಸೈಬರ್ ಕ್ರೈಮ್ ತಡೆಗಟ್ಟಲು ಜಾಗೃತಿ ಅಗತ್ಯ: ಸೈಬರ್ ಕ್ರೈಮ್ ಬಗ್ಗೆ ಕಾನೂನಿಲ್ಲಿ ಸೂಕ್ತ ವ್ಯಾಖ್ಯಾನವಿಲ್ಲ. ಸೈಬರ್ ಕ್ರೈಮ್ ನಿಗದಿತವಾಗಿ ಒಂದೇ ನಮೂನೆಯಲ್ಲಿ ನಡೆಯುವದಿಲ್ಲ. ಬದಲಾಗಿ ಪ್ರತಿದಿನವೂ ಹೊಸ ಹೊಸ ಮಾದರಿಯಲ್ಲಿ ನಡೆಯುವುದರಿಂದ ಜನಜಾಗೃತಿಯಿಂದ ಮಾತ್ರ ಸೈಬರ್ ಕ್ರೈಮ್ ತಡೆಗಟ್ಟಲು ಸಾಧ್ಯ ಎಂದು ಸಿಐಡಿ ಡಿಐಜಿ ವಂಶಿಕೃಷ್ಣ ಅಭಿಪ್ರಾಯಿಸಿದ್ದಾರೆ.

    ನೂತನ ಸೈಬರ್ ಅಪರಾಧ ಮತ್ತು ಅವುಗಳನ್ನು ತಡೆಗಟ್ಟಲು ಭಾರತದಲ್ಲಿರುವ ಕಾನೂನು ಎಂಬ ವಿಷಯದ ಕುರಿತು ಮಾತನಾಡಿದ ಅವರು, 2023ರ ಅಂಕಿಅಂಶದ ಪ್ರಕಾರ ಸೈಬರ್ ಅಪರಾಧಗಳಿಂದ 7480 ಕೋಟಿ ರೂಪಾಯಿ ನಷ್ಟವಾಗಿದೆ. ಇದರಲ್ಲಿ ಕೇವಲ ಶೇ.12ರಷ್ಟು ಮಾತ್ರ ರಿಕವರಿ ಆಗಿದೆ. ಈಗಿರುವ ಐಟಿ ಆ್ಯಕ್ಟ್‌ನ್ನು ‘ಡಿಜಿಟಲ್ ಇಂಡಿಯಾ ಆ್ಯಕ್ಟ್’ ಎಂಬ ಹೆಸರಿನಲ್ಲಿ ಮತ್ತಷ್ಟು ಬಿಗಿಗೊಳಿಸಲು ಚಿಂತನೆ ನಡೆಯುತ್ತಿದೆ. ವಂಚನೆಗೊಳಗಾದವರು 1930 ಸಂಖ್ಯೆಗೆ ಕರೆ ಮಾಡುವುದಷ್ಟೇ ಅಲ್ಲದೆ ದೂರು ನೀಡಿ ಎ್ಐಆರ್ ದಾಖಲಿಸಬೇಕು. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts