More

    ಇಲ್ಲಿ 4 ಅಥವಾ ಅದಕ್ಕೂ ಹೆಚ್ಚು ಮಕ್ಕಳಿದ್ದರೆ ಜಾಸ್ತಿ ಸೌಲಭ್ಯ; ಶಿಕ್ಷಣ-ಉದ್ಯೋಗಕ್ಕೂ ಸಿಗುತ್ತೆ ಆದ್ಯತೆ!

    ಕೇರಳ: ಉತ್ತರಪ್ರದೇಶ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಆರಂಭಿಸಿದ್ದಾರೆ. ಇನ್ನೂ ಕೆಲವು ರಾಜ್ಯಗಳಲ್ಲೂ ಜನಸಂಖ್ಯೆ ನಿಯಂತ್ರಣ ಅಗತ್ಯ, ಪ್ರತಿ ಕುಟುಂಬದಲ್ಲೂ ಮಕ್ಕಳು ಕಡಿಮೆ ಇರಬೇಕು ಎಂಬ ವಿಚಾರ ಮುನ್ನೆಲೆಗೆ ಬಂದಿದ್ದರೆ ಇಲ್ಲೊಂದು ಕಡೆ ಮನೆಯಲ್ಲಿ ಜಾಸ್ತಿ ಮಕ್ಕಳಿದ್ದರೆ ಜಾಸ್ತಿ ಸೌಲಭ್ಯ ಕೊಡುತ್ತೇವೆ ಎಂಬ ಆಫರ್ ಕೂಡ ಆರಂಭವಾಗಿದೆ.

    ಕೇರಳದ ಕೆಥೊಲಿಕ್ ಚರ್ಚ್​ ಇಂಥದ್ದೊಂದು ಯೋಜನೆ ಹಮ್ಮಿಕೊಂಡಿದೆ. ಕೇರಳದ ಪತನಂತಿಟ್ಟ ಎಂಬಲ್ಲಿ ಸೈರೊ-ಮಲಂಕರ ಕೆಥೊಲಿಕ್ ಚರ್ಚ್ ಇಲ್ಲಿನ ಕುಟುಂಬಗಳಿಗೆ ಹೊಸದೊಂದು ಆಫರ್ ಕೊಟ್ಟಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವ ಕುಟುಂಬಕ್ಕೆ ಹಲವಾರು ಸೌಲಭ್ಯಗಳನ್ನು ಕೊಡುವುದಾಗಿ ಘೋಷಿಸಿದೆ.

    ನಾಲ್ಕು ಅಥವಾ ಹೆಚ್ಚಿನ ಮಕ್ಕಳಿದ್ದರೆ ಅಂಥ ಕುಟುಂಬಕ್ಕೆ ಮಾಸಿಕ 2 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಅಗತ್ಯವಿದ್ದರೆ ನಾಲ್ಕನೇ ಮಗುವಿನ ಹೆರಿಗೆಗೆ ಆರ್ಥಿಕ ಸಹಾಯವನ್ನೂ ಕೊಡಲಾಗುತ್ತದೆ. ಅಲ್ಲದೆ ಕ್ರೈಸ್ತ ಸಮುದಾಯಕ್ಕೆ ಸೇರಿದ ಸಂಸ್ಥೆಗಳಲ್ಲಿ ಉದ್ಯೋಗ ಹಾಗೂ ಶಾಲಾ ದಾಖಲಾತಿಗಳಲ್ಲಿ ಅಂಥ ಕುಟುಂಬಕ್ಕೆ ಆದ್ಯತೆ ನೀಡಲಾಗುತ್ತದೆ. ಆ ಮಕ್ಕಳ ಆಧ್ಯಾತ್ಮಿಕ ಬೆಳವಣಿಗೆಗೆ ಸಮುದಾಯದ ಪಾದ್ರಿಗಳು ಮಾರ್ಗದರ್ಶನ ನೀಡುತ್ತಾರೆ. ಅಂಥ ಕುಟುಂಬದ ಜತೆ ಇಲ್ಲಿನ ಸಮುದಾಯ ಮುಖ್ಯಸ್ಥರು ವಾರ್ಷಿಕ ಗೆಟ್​ಟುಗೆದರ್​ನಲ್ಲಿ ಸಮಯ ಕಳೆಯುತ್ತಾರೆ.

    ಇದನ್ನೂ ಓದಿ: ಜೋರಾಗಿದೆ ಡೆಪ್ಯುಟೇಶನ್ ದಂಧೆ: ಲಾಕ್​ಡೌನ್​ನಲ್ಲೂ 220ಕ್ಕೂ ಹೆಚ್ಚು ಸಿಬ್ಬಂದಿ ಎತ್ತಂಗಡಿ; ಆರ್​ಟಿಒಗಳಲ್ಲೇ ಅತಿ ಹೆಚ್ಚು!

    ಪತನಂತಿಟ್ಟದಲ್ಲಿ ಸಮುದಾಯದ ಜನಸಂಖ್ಯೆ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಚರ್ಚ್​ ತಿಳಿಸಿದೆ. ರೈತರ ಸಂಖ್ಯೆಯಲ್ಲೂ ಇಳಿಕೆಯಾಗಿದ್ದು ಕೃಷಿ ಭೂಮಿ ಕಾಡಾಗಿ ಪರಿವರ್ತನೆ ಆಗಿದ್ದು, ಕಾಡುಪ್ರಾಣಿಗಳ ಆತಂಕ ಎದುರಾಗಿದೆ. ಇಲ್ಲಿನ ಶೇ. 20 ಮನೆಗಳು ಮುಚ್ಚಲ್ಪಟ್ಟಿವೆ ಎಂಬ ಕಾರಣಗಳನ್ನು ಈ ಕ್ರಮಕ್ಕೆ ನೀಡಲಾಗಿದೆ. (ಏಜೆನ್ಸೀಸ್​)

    ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts