More

    ಮತಾಂತರಕ್ಕೆ ತಾಂಡಾ ಜನರಿಗೆ ಬಲವಂತ !

    ಸೊರಬ: ಕ್ರೖೆಸ್ತ ಮಿಷನರಿಗಳು ಬಂಜಾರ ತಾಂಡಾಗಳ ಜನರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ಬಂಜಾರ ಸಮಾಜ ಪಟ್ಟಣದ ಖಾಸಗಿ ಬಸ್​ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಗುರುವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ ಮಾತನಾಡಿ, ಕ್ರೖೆಸ್ತ ಮಿಷನರಿಗಳು ಹಿಂದಿನಿಂದಲೂ ಸಣ್ಣ ಸಮುದಾಯಗಳನ್ನು ಗುರಿಯಾಗಿಸಿಟ್ಟುಕೊಂಡು ಮತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಶ್ರಮಿಕ ವರ್ಗವನ್ನು ಮತಾಂತರ ಮಾಡುವ ಕ್ರೖೆಸ್ತ ಮಿಷನರಿಗಳು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೇಶದ ಪ್ರತೀಕವಾಗಿರುವ ಬಂಜಾರ ಸಮುದಾಯದ ಉಡುಗೆ, ತೊಡುಗೆಯನ್ನು ಕಡೆಗಣಿಸಿ ಭಕ್ತಿ ಹಾಗೂ ಸಂಪ್ರದಾಯ ಮುರಿಯುವ ದೃಷ್ಟಿಯಿಂದಲೇ ಹಳ್ಳಿಗಾಡಿನಲ್ಲಿರುವ ಮುಗ್ಧ ಜನರ ಮನಸ್ಸಿನ ಮೇಲೆ ಕ್ರೖೆಸ್ತ ಧಾರ್ವಿುಕ ಭಾವನೆಗಳನ್ನು ತುಂಬಿ ಅವರ ಬದುಕನ್ನು ಅಸ್ಥಿರಗೊಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಸಮಾಜದ ಮುಖಂಡ ಡಾ. ಇಂದ್ರನಾಯ್್ಕ ಮಾತನಾಡಿ, ಪಾದ್ರಿಗಳು ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರು ಹಾಗೂ ಮಕ್ಕಳ ಮೇಲೆ ಕ್ರೖೆಸ್ತ ಧರ್ಮದ ವಿಚಾರಧಾರೆಗಳನ್ನು ಬಿತ್ತಿ ಶಿಕ್ಷಣ ನೀಡುವ ನೆಪದಲ್ಲಿ ಬಲವಂತವಾಗಿ ಮತಾಂತರ ಮಾಡುವ ಜತೆಗೆ ತಾಂಡಾಗಳಲ್ಲಿ ಬಂಜಾರ ಸಮುದಾಯದ ಯುವಕರಿಗೆ ಹಣದ ಆಮಿಷ ತೋರಿಸಿ ಕ್ರೖೆಸ್ತ ಧರ್ಮಕ್ಕೆ ಮತಾಂತರಿಸುವ ನಿಟ್ಟಿನಲ್ಲಿ ಪ್ರಚೋದಿಸಲಾಗುತ್ತಿದೆ ಎಂದು ದೂರಿದರು.

    ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಸವಿತಾ ಶಿವಕುಮಾರ್, ಸಾಲೂರು ಮಠಾಧಿಶ ಸೇವಾಭಗತ್, ಬಂಜಾರ ಜಿಲ್ಲಾಧ್ಯಕ್ಷ ಕುಮಾರ ನಾಯ್್ಕ ಮೂಕಪ್ಪ ನಾಯ್್ಕ ಕೊಟ್ರಪ್ಪ, ಗಿರೀಶ್, ಉಮೇಶ ನಾಯಕ್, ಈರಾ ನಾಯಕ್, ಡಾಕ್ಯಾ ನಾಯ್್ಕ ಇತರರಿದ್ದರು.

    ಹಾಡಹಗಲೇ ಅಪರಿಚಿತರ ಮನೆಗೆ ನುಗ್ಗಿದ್ದ ಹರೆಯದ ಯುವಕರು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದರು!

    ಭೀಮಾತೀರದ ಮಹಾದೇವನ ಕೊಲ್ಲಲು ಬಂದದ್ದು 20 ಜನರ ಗ್ಯಾಂಗ್​! ಬೆಚ್ಚಿಬೀಳಿಸುತ್ತೆ ಗುಂಡಿನ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts