More

    ಕ್ರಿಶ್ಚಿಯನ್​ ಬಾಲಕಿ ಅಪಹರಿಸಿದ ಪಾಕ್​ ವ್ಯಕ್ತಿ: ಮದ್ವೆಯಾದ ಬಾಲಕಿ ಎರಡೇ ದಿನದಲ್ಲಿ ಯುವತಿಯಾದಳು!

    ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ 13 ವರ್ಷದ ಕ್ರಿಶ್ಚಿಯನ್​ ಬಾಲಕಿಯನ್ನು ಅಪಹರಿಸಿ, 44 ವರ್ಷದ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವ ಆರೋಪ ಕೇಳಿಬಂದಿದೆ.

    ಅರ್ಜೂ ರಾಜಾ ಎಂಬಾಕೆಯನ್ನು ಕರಾಚಿಯಲ್ಲಿರುವ ಅಕೆಯ ನಿವಾಸದಿಂದ ಅ. 13ರಂದು ಅಪಹರಿಸಲಾಗಿತ್ತು. ಇದಾದ ಎರಡು ದಿನದ ಬಳಿಕ ಆಕೆಗೆ 18 ವರ್ಷ ತುಂಬಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾಳೆಂದು ಹೇಳಿ ಆಕೆಯ ಗಂಡ ಮದುವೆ ಪ್ರಮಾಣ ಪತ್ರವನ್ನು ಪ್ರಸ್ತುತಪಡಿಸಿದ್ದಾನೆ ಎಂದು ಹೇಳಲಾಗಿದೆ.

    ಈ ಒಂದು ಪ್ರಕರಣ ಕರಾಚಿ ಮತ್ತು ಲಾಹೋರ್​ನಲ್ಲಿ ಭಾರಿ ಪ್ರತಿಭಟನೆಗಳಿಗೆ ಕಾರಣವಾಗಿದೆ. ಆದರೆ, ಸ್ವಇಚ್ಛೆಯಿಂದ ಹುಡುಗಿ ಇಸ್ಲಾಂಗೆ ಮತಾಂತರವಾಗಿದ್ದಾಳೆ ಎಂಬ ಪತಿಯ ಹೇಳಿಕೆಯನ್ನು ಪಾಕಿಸ್ತಾನಿ ನ್ಯಾಯಾಲಯ ಎತ್ತಿಹಿಡಿದಿದೆ. ಆದರೆ, ವಿಚಾರಣೆ ವೇಳೆ ಅರ್ಜೂ ಆಕೆಯ ತಾಯಿಯ ಬಳಿ ಓಡಿ ಹೋಗಲು ಯತ್ನಿಸಿದಳು. ಆದರೆ, ಆಕೆಯ ಪತಿ ಗಟ್ಟಿಯಾಗಿ ಆಕೆಯ ಕೈಯನ್ನು ಹಿಡಿದಿದ್ದರಿಂದ ಸಾಧ್ಯವಾಗಲಿಲ್ಲ ಎಂಬ ಆರೋಪವನ್ನು ಮಾಡಲಾಗಿದೆ.

    ಅರ್ಜೂ ತಂದೆ ರಾಜಾ ಪ್ರಕಾರ ಮಗಳನ್ನು ಕರಾಚಿಯ ರೈಲ್ವೇ ಕಾಲನಿಯಲ್ಲಿರುವ ನಿವಾಸದಿಂದ ಅಪಹರಿಸಲಾಗಿದೆ. ನಾವೆಲ್ಲರೂ ಕೆಲಸಕ್ಕೆ ಹೋದ ಮೇಲೆ ಕಿಡ್ನ್ಯಾಪ್​ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಶೇ.82 ಟವರ್ ಅಕ್ರಮ: ರಾಜ್ಯದಲ್ಲಿವೆ ಅನುಮತಿ ರಹಿತ 3,805 ಮೊಬೈಲ್ ಸ್ತಂಭ!

    ಇದಾದ ಎರಡು ದಿನಗಳ ಬಳಿಕ ಪಾಕ್​ ಪೊಲೀಸರು ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿದಾಗ ಮಗಳನ್ನು ಅಪಹರಿಸಿದವ ಆಗಲೇ ಮದುವೆಯಾಗಿ ಪ್ರಮಾಣ ಪತ್ರ ಹೊಂದಿದ್ದಾನೆಂದು ಹೇಳಿದ್ದಾರೆ. ಅಲ್ಲದೆ, ಆಗಾಗ ಹುಡುಗಿಗೆ ಬೆದರಿಕೆ ಹಾಕಿ ಒಮ್ಮತದಿಂದಲೇ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವುದಾಗಿ ಹೇಳಿಕೆ ಕೊಡುವಂತೆ ಒತ್ತಾಯಿಸಲಾಗಿದೆ ಎಂದು ಪಾಲಕರು ಹಾಗೂ ಕ್ರಿಶ್ಚಿಯನ್​ ಸಂಘಟಕರು ದೂರಿದ್ದಾರೆ.

    ಪಾಕ್​ ಕ್ರಿಶ್ಚಿಯನ್ನರಿಗೆ ಇದೊಂದು ಸೂಕ್ಷ್ಮ ವಿಷಯವಾಗಿದ್ದರೂ ಅಲ್ಲಿನ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮುಂದೆ ಮೂಕರಂತೆ ವರ್ತಿಸುವ ಸ್ಥಿತಿ ಎದುರಾಗಿದೆ. ಇನ್ನು ಪಾಕ್​ ಕೋರ್ಟ್​ ವಿರುದ್ಧವೂ ಅಸಮಾಧಾನ ವ್ಯಕ್ತವಾಗಿದೆ. ಪಾಕಿಸ್ತಾನ ಪೊಲೀಸರು ಮತ್ತು ನ್ಯಾಯಾಲಯವೇ ತಮ್ಮ ಕಾನೂನನ್ನು ಗೌರವಿಸುವುದಿಲ್ಲ. ಮತಾಂತರ ಹಾಗೂ ಬಲವಂತದ ಮದುವೆ ವಿಚಾರಗಳು ಬಂದಾಗ ನಿರ್ಲಕ್ಷ್ಯ ಧೋರಣೆ ತೆಳೆಯುತ್ತವೆ ಎಂದು ಆರೋಪಿಸಿದ್ದಾರೆ.

    ಇದೀಗ ಅರ್ಜೂ ಹೆಸರನ್ನು ಅರ್ಜೂ ಫಾತಿಮಾ ಎಂದು ಬದಲಾಯಿಸಲಾಗಿದೆ ಎಂಬ ಆರೋಪವೂ ಇದೆ. ಆದರೆ, ಸ್ವಇಚ್ಛೆಯಿಂದಲೇ ಮತಾಂತರ ಆಗಿರುವುದಾಗಿ ಹೇಳಿ ಜಡ್ಜ್​​ ಪ್ರಕರಣವನ್ನು ತಳ್ಳಿ ಹಾಕಿದ್ದಾರೆ. ಹೀಗಾಗಿ ಈ ಒಂದು ಪ್ರಕರಣ ಪಾಕಿಸ್ತಾನದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

    VIDEO| ಉಚಿತ ಶಾಪಿಂಗ್​ ಮಾಡಲು ಬಾಲಕನಿಗೆ ಐದೇ ಸೆಕೆಂಡ್​: ಆತನ ಆಯ್ಕೆಗೆ ಶಹಭಾಷ್​ ಎಂದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts