More

    ಕ್ರೈಸ್ಟ್ ವಿಶವ್ವಿದ್ಯಾಲಯ ಕುಲಪತಿಗೆ ರಕ್ಷಣಾ ಸಚಿವಾಲಯದಿಂದ ಕರ್ನಲ್ ಕಮಾಂಡೆಂಟ್ ಗೌರವ

    ಬೆಂಗಳೂರು: ಕ್ರೈಸ್ಟ್​ ವಿಶ್ವವಿದ್ಯಾಲಯದ ಕುಲಪತಿ ಡಾ. ಫಾ. ಅಬ್ರಹಾಂ ವೆಟ್ಟಿಯಂಕಲ್ ಮಣಿ ಅವರಿಗೆ ರಕ್ಷಣಾ ಸಚಿವಾಲಯ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್​ನಲ್ಲಿ ಕರ್ನಲ್ ಕಮಾಂಡೆಂಟ್ ಗೌರವ ಪದವಿ ನೀಡಿದೆ.

    ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಎವಿಎಸ್​ಎಂ, ವಿಎಸ್​ಎಂ, ದಿ ಡೈರೆಕ್ಟರ್ ಜನರಲ್ ಆಗಿರುವ ಲೆಫ್ಟಿನೆಂಟ್ ಜನರಲ್ ಗುರ್​ಬಿರ್ಪಾಲ್ ಸಿಂಗ್ ಪದವಿ ಪ್ರದಾನ ಮಾಡಿದರು.

    ಕ್ರೈಸ್ಟ್ ಯೂನಿವರ್ಸಿಟಿ ಎನ್​ಸಿಸಿಯು, ಎನ್​ಸಿಸಿಯಲ್ಲಿನ ತನ್ನ ಸಾಧನೆಗಳಿಗಾಗಿ ಕರ್ನಾಟಕ- ಗೋವಾ ಎನ್​ಸಿಸಿ ನಿರ್ದೇಶನಾಲಯದಿಂದ ಹೆಚ್ಚು ಗೌರವಾನ್ವಿತವಾಗಿದೆ. ಈ ಮನ್ನಣೆಯು ಎನ್​ಸಿಸಿಗೆ ತನ್ನ ಎನ್​ಸಿಸಿ ಕೆಡೆಟ್​ಗಳೊಂದಿಗೆ ಗಮನಾರ್ಹ ಸಂಖ್ಯೆಯಲ್ಲಿ ಸಶಸ್ತ್ರ ಮತ್ತು ಅರೆಸೈನಿಕ ಪಡೆಗಳನ್ನು ಸೇರುವ ಕೊಡುಗೆಗಳನ್ನು ನೀಡಿದೆ.

    ಕ್ಯಾಂಪಸ್​ಗಳಲ್ಲಿ ಎನ್​ಸಿಸಿ ತರಬೇತಿಗಾಗಿ ಒದಗಿಸಲಾದ ಮೂಲಸೌಕರ್ಯ ಮತ್ತು ಸೌಲಭ್ಯಗಳು ಹಾಗೂ ದೇಶದಲ್ಲಿ ಎನ್​ಸಿಸಿಯನ್ನು ಕೆಡಿಟ್ ಕೋರ್ಸ್ ಆಗಿ ಪರಿಚಯಿಸಿದ ಮೊದಲಿಗರಾಗಿದ್ದಾರೆ. ರಕ್ಷಣಾ ಸಚಿವಾಲಯವು 2022ರಲ್ಲಿ ಕರ್ನಾಟಕದ 3 ಮತ್ತು ದೇಶದ 11 ಕುಲಪತಿಗಳಿಗೆ ಮಾತ್ರ ಈ ಪ್ರಶಸ್ತಿ ನೀಡಿದೆ.

    ಕ್ರೈಸ್ಟ್ ವಿಶವ್ವಿದ್ಯಾಲಯ ಕುಲಪತಿಗೆ ರಕ್ಷಣಾ ಸಚಿವಾಲಯದಿಂದ ಕರ್ನಲ್ ಕಮಾಂಡೆಂಟ್ ಗೌರವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts