More

    ಕರೊನಾ ಭೀತಿಯಿಂದ ಪಾರಾದ ಗೇಲ್, ನೆಗೆಟಿವ್ ವರದಿಯಿಂದ ಕಿಂಗ್ಸ್ ಇಲೆವೆನ್ ತಂಡ ನಿರಾಳ

    ಕಿಂಗ್‌ಸ್ಟನ್/ನವದೆಹಲಿ: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕರೊನಾ ವೈರಸ್ ಭೀತಿಯಿಂದ ಪಾರಾಗಿದ್ದಾರೆ. ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್‌ಗೆ ಕರೊನಾ ಸೋಂಕು ದೃಢಪಟ್ಟ ಬಳಿಕ, ಅವರೊಂದಿಗೆ ಪಾರ್ಟಿ ಮಾಡಿದ್ದ ಗೇಲ್‌ಗೂ ಆತಂಕ ಶುರುವಾಗಿತ್ತು. ಆದರೆ ಗೇಲ್ ಅವರ ಕರೊನಾ ಪರೀಕ್ಷೆಯಲ್ಲಿ ಈಗ ನೆಗೆಟಿವ್ ವರದಿ ಬಂದಿದೆ. ಇದರಿಂದಾಗಿ ಐಪಿಎಲ್ ಟೂರ್ನಿಗೆ ಅವರ ಲಭ್ಯತೆಯೂ ಖಚಿತವಾಗಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿರಾಳವಾಗಿದೆ.

    ಶನಿವಾರ ಬೋಲ್ಟ್ ಅವರ 34ನೇ ಜನ್ಮದಿನದ ಪಾರ್ಟಿಲ್ಲಿ ಹಲವು ಗಣ್ಯರ ಜತೆಗೆ 40 ವರ್ಷದ ಗೇಲ್ ಕೂಡ ಭಾಗವಹಿಸಿದ್ದರು. ಅದರ ಮರುದಿನ ಅಂದರೆ ಭಾನುವಾರ ಬೋಲ್ಟ್ ಕರೊನಾ ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಇದರಿಂದಾಗಿ ಬೋಲ್ಟ್ ಸದ್ಯ ಸ್ವಯಂ-ಐಸೋಲೇಷನ್‌ನಲ್ಲಿದ್ದಾರೆ.

    ಯುಎಇಗೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಕಿಂಗ್‌ಸ್ಟನ್‌ನಲ್ಲಿ ನಡೆಸಲಾದ ಕರೊನಾ ಪರೀಕ್ಷೆಯ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಗೇಲ್, ನೆಗೆಟಿವ್ ವರದಿ ಬಂದಿರುವುದನ್ನೂ ತಿಳಿಸಿದ್ದಾರೆ. ಇನ್ನು ಯುಎಇಗೆ ಬಂದ ಬಳಿಕ ವಿಮಾನ ನಿಲ್ದಾಣದಲ್ಲೇ ಮತ್ತೆ ಪರೀಕ್ಷೆಗೆ ಒಳಗಾಗಲಿರುವ ಅವರು, ಬಳಿಕ 6 ದಿನ ಕ್ವಾರಂಟೈನ್‌ನಲ್ಲಿರಲಿದ್ದಾರೆ. ಈ ವೇಳೆ 1, 3, 5ನೇ ದಿನ ಪರೀಕ್ಷೆ ನಡೆಯಲಿದ್ದು, ಮೂರೂ ವರದಿ ನೆಗೆಟಿವ್ ಬಂದರೆ ಟೂರ್ನಿಯ ಬಯೋ-ಬಬಲ್ ಪ್ರವೇಶಿಸಲಿದ್ದಾರೆ.

    ಇದನ್ನೂ ಓದಿ: ಉಸೇನ್​ ಬೋಲ್ಟ್ ಜತೆ ಪಾರ್ಟಿ ಮಾಡಿದ್ದ ಕ್ರಿಸ್ ಗೇಲ್‌ಗೂ ಕರೊನಾತಂಕ! ಐಪಿಎಲ್‌ಗೆ ಪ್ರಯಾಣ ವಿಳಂಬ?

    ವೆಸ್ಟ್ ಇಂಡೀಸ್‌ನಲ್ಲಿ ಪ್ರಸಕ್ತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಿಂದ ಗೇಲ್ ಹೊರಗುಳಿದಿದ್ದಾರೆ. ಈ ವರ್ಷ ಜನವರಿಯಲ್ಲಿ ಕೊನೆಯದಾಗಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಅವರು ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯ ಆಡಿದ್ದರು.

    ವಿಶ್ವದ ವೇಗದ ಓಟಗಾರ ಉಸೇನ್​ ಬೋಲ್ಟ್‌ಗೆ ಕರೊನಾ ಪಾಸಿಟಿವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts