More

  ಚಿಂಚೋಳಿ: ರಸ್ತೆ ಬದಿ ಅಂಗಡಿಗಳಿಗೆ ಶಾಕ್ ನೀಡಿದ ನ್ಯಾಯಾಧೀಶರು

  ಚಿಂಚೋಳಿ: ರಸ್ತೆ ಮೇಲೆ ವ್ಯಾಪಾರ ಮಾಡುತ್ತಿರುವ ಗುಡಂಗಡಿಗಳಿಗೆ ಪ್ರಧಾನ ಸಿವಿಲ್ ನ್ಯಾಯಾಧೀಶ ರವಿಕುಮಾರ, ಹೆಚ್ಚುವರಿ ಸಿವಿಲ್ ನ್ಯಾಯಧೀಶ ದತ್ತು ಕುಮಾರ್ ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ್ದಾರೆ.

  ಬೆಳಗ್ಗೆ 6 ಗಂಟೆಗೆ ಸಿಟಿ ಸಂಚಾರ ಆರಂಭಿಸಿದ ನ್ಯಾಯಧೀಶರು, ಪಟ್ಟಣದ ವನ್ಮಾರಪಳ್ಳಿ ರಾಜ್ಯ ಹೆದ್ದಾರಿಯ ಅಕ್ಕ ಪಕ್ಕದ ಹಣ್ಣು, ತರಕಾರಿ, ಹೂವಿನ ಅಂಗಡಿ ಇತರೆ ತಳ್ಳುವ ಬಂಡಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ರಸ್ತೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಬಾರದು ರಂದು ಎಂದು ಸೂಚನೆ ನೀಡಿದರು.

  ಸಂಚಾರಕ್ಕೆ ತೊಂದರೆ ಉಂಟಾಗದತ್ತೆ. ಕ್ರಮಕ್ಕೆ ಮುಂದಾಗಬೇಕು. ಇದೆ 25 ವರೆಗೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ತಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ್ ಧನ್ನಿ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.

  ತಾಲೂಕು ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಪ್ರಮುಖರಾದ ನಂದಿಕುಮಾರ ಪಾಟೀಲ್, ಸೂರ್ಯಕಾಂತ ಚಿಂಚೋಳಿಕರ, ಶಂಕರ ರಾಠೋಡ, ಮಲ್ಲಿಕಾರ್ಜುನ ರಾಮತಿರ್ಥ, ಜಗನ್ನಾಥ ಗಂಜಗೇರಾ, ರಾಮಲಿಂಗಾ ಹೊಡೆಬೀರನಳ್ಳಿ, ರಾಜೇಂದ್ರ ವರ್ಮಾ, ವಿಜಯಕುಮಾರ ರಾಠೋಡ,ಚಂದ್ರಶೇಟ್ಟಿ ಜಾಧವ್ ಸೇರಿದಂತೆ ಅನೇಕರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts