More

  ಚಿತ್ತಾಪುರ; ವೈದ್ಯಾಧಿಕಾರಿ ವಿರುದ್ಧ ಕೇಸ್ ದಾಖಲಿಸಿಕೊಳ್ಳಿ

  ಚಿತ್ತಾಪುರ: ಜಾತಿ ನಿಂದನೆ ಮಾಡಿದ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಮಹಿಯೋದ್ದಿನ್ ಮುಬಾಶೀರ್ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

  ಬಿಜೆಪಿ ಮುಖಂಡ ರಾಜು ಮುಕ್ಕಣ್ಣ ಎಂಬುವವರಿಗೆ ಬುಧವಾರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಮಣಿಕಂಠ ರಾಠೋಡ್, ನಿತೇಶ್ ರಾಠೋಡ್ ಸೇರಿ ಇತರರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಯಾರೊಬ್ಬರೂ ಸ್ಪಂದಿಸಿಲ್ಲ. ಚಿಕಿತ್ಸೆ ನೀಡಬೇಕಿದ್ದ ವೈದ್ಯಾಧಿಕಾರಿ ಮಹಿಯೋದ್ದಿನ್ ಅವರು, ನಿತೇಶ್ ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಠಾಣೆಗೆ ಹೋಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸೇರಿ ಹಲವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ನಾವು ಠಾಣೆಗೆ ಹೋಗಿ ಜಾತಿ ನಿಂದನೆ ಕೇಸ್ ಕೊಡಲು ಮುಂದಾದರೆ ಪೊಲೀಸರು ತೆಗೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

  ಈಗಾಗಲೇ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿz್ದೆÃವೆ. ಆದರೂ ಸ್ಪಂದಿಸಿಲ್ಲ. ಹೀಗಾಗಿ ಮತ್ತೆ ಹೋರಾಟಕ್ಕೆ ಇಳಿದಿz್ದÉÃವೆ. ನಮ್ಮ ಮನವಿಗೆ ಸ್ಪಂದಿಸುವವರೆಗೂ ಹೋರಾಟ ಕೈಬಿಡಲ್ಲ ಎಂದು ಪಟ್ಟುಹಿಡಿದರು. ಬೆಳಗ್ಗೆ ೧೧ ಗಂಟೆಗೆ ಆರಂಭವಾದ ಪ್ರತಿಭಟನೆ ಮಧ್ಯಾಹ್ನ ೩ ಗಂಟೆವರೆಗೂ ನಡೆಯಿತು.
  ಡಿವೈಎಸ್‌ಪಿ ಉಮೇಶ ಚಿಕ್ಕಮಠ ಸ್ಥಳಕ್ಕಾಗಮಿಸಿ, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿz್ದÉÃನೆ. ನೀವು ದೂರು ಕೊಡಿ ಸ್ವೀಕರಿಸುತ್ತೇವೆ. ವಿಚಾರಣೆಯ ಬಳಿಕವೇ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಬಳಿಕ ನಿತೇಶ ರಾಠೋಡ್ ಪಿಎಸ್‌ಐ ಶ್ರೀಶೈಲ್ ಅಂಬಾಟಿ ಅವರಿಗೆ ದೂರು ನೀಡಿದರು. ಪೊಲೀಸ್ ಅಧಿಕಾರಿಗಳ ಭರವಸೆಯಿಂದ ಹೋರಾಟ ಕೈಬಿಡಲಾಯಿತು.

  ತಾಲೂಕು ಕಾರ್ಯದರ್ಶಿ ನಾಗರಾಜ ಹೂಗಾರ, ಪ್ರಮುಖರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ನಾಗರಾಜ ಭಂಕಲಗಿ, ಶರಣಗೌಡ ಭೀಮನಹಳ್ಳಿ, ತಮ್ಮಣ ಡಿಗ್ಗಿ, ರವಿ ಕಾರಬಾರಿ, ಶ್ರೀಧರ, ಮಲ್ಲಿಕಾರ್ಜುನ ಪೂಜಾರಿ, ಆನಂದ ನರಬೋಳಿ, ಅಶ್ವತ್ಥರಾಮ ರಾಠೋಡ್, ಗೋಪಾಲ ರಾಠೋಡ್, ರವಿ ಪಡ್ಲ, ಅಯ್ಯಪ್ಪ ಪವಾರ್, ಮಹೇಶ ಬಾಳಿ ಇತರರಿದ್ದರು. ಸಿಪಿಐ ಚಂದ್ರಶೇಖರ ತಿಗಡಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts