More

    ಚಿತ್ತಾಪುರ: ಭಾಲ್ಕಿ ವಕೀಲೆ ಧನಲಕ್ಷ್ಮೀ ಬಂಧನಕ್ಕೆ ಆಕ್ರೋಶ

    ಚಿತ್ತಾಪುರ: ಬೀದರ್ ಜಿಲ್ಲೆ ಭಾಲ್ಕಿಯ ವಕೀಲೆ ಧನಲಕ್ಷಿö್ಮÃ ಬಳತೆ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿರುವುದನ್ನು ಖಂಡಿಸಿ ತಹಸಿಲ್ ಕಚೇರಿ ಎದುರು ನ್ಯಾಯಾವಾದಿಗಳ ಸಂಘದಿAದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ಧನಲಕ್ಷಿö್ಮÃ ವಕೀಲರ ಸಂಘದ ಸದಸ್ಯೆಯಾಗಿದ್ದು, ಸುಳ್ಳು ಆರೋಪ ಹೊರಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಅಪರಾಧವೆಸಗಿದ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ನ್ಯಾಯಾವಾದಿ ಧನಲಕ್ಷಿö್ಮÃ ಬಳತೆ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ವಕೀಲರ ಸಂರಕ್ಷಣಾ ಕಾಯ್ದೆಯನ್ನು ಶೀಘ್ರ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

    ತಾಲೂಕು ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ನಾಗರಾಜ ಕಡಬೂರ ನೇತೃತ್ವದಲ್ಲಿ ಶಿರಸ್ತೆದಾರ ಅಶ್ವತ್ಥ ನಾರಾಯಣ ಕುಲಕರ್ಣಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

    ಚಂದ್ರಶೇಖರ ಅಂಗಡಿ, ಚಂದ್ರಶೇಖರ ಅವಂಟಿ, ಗಂಗಾಧರ ಸಾಲಿಮಠ, ಎಸ್.ಎನ್.ಜೋಷಿ, ಎಸ್.ಎಂ. ಹೋಳಿ, ಬಿ.ಎಸ್.ಬೆಣ್ಣೂರ, ಶರಣಗೌಡ ಪಾಟೀಲ್ ಆಲೂರ, ಈಶ್ವರ ಅಳ್ಳೋಳ್ಳಿ, ಸೋಮಶೇಖರ ಕರದಳ್ಳಿ, ಎಲ್.ಎ.ಪಾಟೀಲ್, ಸವಿತಾ ಪಾಟೀಲ್, ಶೇಖ್ ಹುಸೇನಿ, ಬಿ.ಎಲ್.ವಾಡಿ, ಪರಶುರಾಮ ಗಾಯಕವಾಡ, ಬಸವರಾಜ ಸಿಂಪಿ, ದೂಳಪ್ಪ, ಡಿ.ಸಿ. ಕುಲಕಂದಿಕರ್, ಪಿ.ಎಸ್.ಕೂಲಿ, ಶಫಿ ಎಂ., ಧನರಾಜ ದೇಶಪಾಂಡೆ, ಎಸ್.ಎಸ್.ನಂದೂರಕರ್, ಶಿವರುದ್ರಪ್ಪ ಉಪ್ಪಿನ್, ಬಿ.ಬಿ.ದೊಡ್ಮನಿ, ಎಂ.ಟಿ.ಅರಣಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts