More

    ಧರ್ಮ,ದೇವರು,ಗುರು ಭಾರತೀಯರ ಜೀವಾಳ

    ಚಿತ್ರದುರ್ಗ: ಧರ್ಮ, ದೇವರು, ಮಠ, ಮಂದಿರಗಳು, ಗುರು ಹಿರಿಯರು ಭಾರತೀಯ ಪರಂಪರೆಯ ಜೀವಾಳ ಎಂದು ಶ್ರೀಮದ್ ಉಜ್ಜಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾ ಭಗವತ್ಪಾದರು ಹೇಳಿದರು.

    ತಾಲೂಕಿನ ಜೆ.ಎನ್.ಕೋಟೆ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ದೇವಾಲಯ ಕಳಶ ಪ್ರತಿ ಷ್ಠಾನ ಅಂಗವಾಗಿ ಬುಧವಾರ ರಾತ್ರಿ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಮಠ-ಮಂದಿರ,ಗುರುಗಳಿಲ್ಲದ ಭಾರತವನ್ನು ಊಹಿಸಲಾಗದು. ದೇಶದ ಮಣ್ಣಿನ ಕಣ, ಕಣದಲ್ಲೂ ದೈವತ್ವವಿದೆ, ದೇವಾಲಯಗಳಿಲ್ಲದ ಒಂದು ಹಳ್ಳಿಯನ್ನು ಕಾಣಲು ಸಾಧ್ಯವಿಲ್ಲ ಎಂದರು.

    ದೇವರು, ಧರ್ಮ, ಆರಾಧನೆ, ತಂದೆ-ತಾಯಿ, ಅತಿಥಿಗಳನ್ನು ಗೌರವಿಸುವ ಪರಿಪಾಠ ನಮ್ಮ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದು ತಿಳಿಸಿದರು.

    ಮಠ, ಮಂದಿರಗಳಿಂದ ಅಪರಾಧಕ್ಕೆ ಕಡಿವಾಣ: ಉಪವಾಸ,ಉರುಳು ಸೇವೆ, ವ್ರತ, ಜಾತ್ರೆ, ಮಹೋತ್ಸವ ಇತ್ಯಾದಿ ಆಚರಣೆಗಳನ್ನು ಭಾರತೀಯರು ಕೈಬಿಟ್ಟಿಲ್ಲ. ಅಧ್ಯಾತ್ಮವೇ ಭಾರತದ ನಿಜವಾದ ಸಂಪತ್ತು ಎಂದರು.

    ಅಧ್ಯಾತ್ಮದ ಶಕ್ತಿ ಕೇಂದ್ರಗಳಾದ ಮಠ,ಮಂದಿರಗಳಿಂದ ಅಪರಾಧಿ ಮನೋಭಾವಕ್ಕೆ ಸಾಕಷ್ಟು ಕಡಿವಾಣ ಬೀಳುತ್ತಿದೆ. ನ್ಯಾಯಾಲಯಗಳಿಲ್ಲದ ಕಾಲದಲ್ಲಿ ದೇವಾಲಯಗಳೇ ಕೋರ್ಟ್‌ಗಳಾಗಿದ್ದವು. ವಚನವೇ ದೇವರೆನ್ನುವ ನಾವು ಕೊಟ್ಟ ಮಾತಿನಿಂದ ತಪ್ಪಿಸಿಕೊಳ್ಳಲು ಹಿಂದೇಟು ಹಾಕುತ್ತೇವೆ ಎಂದು ತಿಳಿಸಿದರು.

    ಕಿಂಚಿತ್ತೂ ಧಕ್ಕೆ ಆಗಿಲ್ಲ: ಭಾರತೀಯ ಸನಾತನ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ಭಾರತದ ಮೇಲೆ ಹತ್ತಾರು ವಿದೇಶಿ ದಾಳಿಗಳಾದರೂ ಪರಂಪರೆಗೆ ಕಿಂಚಿತ್ತೂ ಧಕ್ಕೆ ಬಂದಿಲ್ಲ. ದೇಶ, ಭೂಮಿ, ನೀರು, ಆಹಾರವನ್ನು ಮಾತೆ ಎಂದು ಗೌರವಿಸಿಕೊಂಡುಬಂದಿರುವ ನಾವಿಂದು, ಪರಂಪರೆ,ಸಂಸ್ಕೃತಿ,ಧರ್ಮ ಆಚರಣೆಗಳನ್ನು ಮುಂದುವರಿಸಬೇಕಿದೆ ಎಂದರು.

    ಉಪನ್ಯಾಸ ನೀಡಿದ ಅಧ್ಯಾಪಕ ನಿರಂಜನ ದೇವರಮನೆ, ಜಾತಿ,ಮತ ಪಂಥಗಳನ್ನು ಮೀರಿ ಜಗತ್ತಿನ ಸಕಲ ಜೀವಾತ್ಮರಿಗೂ ಪಂಚಪೀಠಗಳು ಲೇಸು ಬಯಸತ್ತ ಬಂದಿವೆ ಎಂದರು.

    ಆಧುನಿಕತೆಯ ಈ ಹೊತ್ತಿನಲ್ಲಿ ಧಾರ್ಮಿಕ ಆಚರಣೆಗಳ ಮೂಲಕ ಯುವ ಜನ ತಪ್ಪು ಹಾದಿ ತುಳಿಯದಂತೆ ಎಚ್ಚರಿಸ ಬೇಕಿದೆ ಎಂದು ತಿಳಿಸಿದರು.

    ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿ ಮುಂದಿನ ಪೀಳಿಗೆಗೆ ನಮ್ಮ ಪರಂಪರೆ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ತಾಪಂ ಸದಸ್ಯೆ ಸಿದ್ದಮ್ಮ,ಗ್ರಾಪಂ ಅಧ್ಯಕ್ಷೆ ಪಾಪಮ್ಮ,ಮಾಜಿ ಅಧ್ಯಕ್ಷ ಗುರುಸಿದ್ದಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts