More

    ಲಾಕ್‌ಡೌನ್ ಅನುಷ್ಠಾನದಲ್ಲಿ ಗೊಂದಲ ಸಲ್ಲ

    ಚಿತ್ರದುರ್ಗ: ಲಾಕ್‌ಡೌನ್ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಗೊಂದಲದ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಬೇಸರಿಸಿದರು.

    ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರೊನಾ ಸೋಂಕು ತಡೆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಟೀಕಿಸುವ ಸಮಯ ಇದಲ್ಲ ಎಂದರು.

    ಏ.20ರಿಂದ ಲಾಕ್‌ಡೌನ್ ವಿಚಾರದಲ್ಲಿ ರಾಜ್ಯ ಸರ್ಕಾರ ಬೆಳಗ್ಗೆ ಒಂದು, ರಾತ್ರಿ ಮತ್ತೊಂದು ಆದೇಶ ಹೊರಡಿಸಿದ್ದು ಸರಿಯಲ್ಲ. ಯಾವುದೇ ಗೊಂದಲಗಳಿಲ್ಲದಂತೆ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಿಗಿ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

    ಸಂಘಟಿತವಾಗಿ ಈ ಮಹಾಮಾರಿಯನ್ನು ಹೊಡೆದೊಡಿಸ ಬೇಕಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯರ ಮುಂದಾಳತ್ವದಲ್ಲಿ ಪಕ್ಷದ ಕಾರ್ಯಕರ್ತರು ನೊಂದವರಿಗೆ ನೆರವಾಗುತ್ತಿದ್ದಾರೆ. ಆದರೆ, ಕೆಲವೆಡೆ ನಮ್ಮ ಕಾರ್ಯಕರ್ತರನ್ನು ಅಡ್ಡಿಪಡಿಸಲಾಗುತ್ತಿರುವುದು ಅಮಾನವೀಯ ವರ್ತನೆ ಎಂದರು.

    ಜ.30ರಂದೇ ಸೋಂಕು ದೇಶದಲ್ಲಿ ಪತ್ತೆಯಾದರೂ ಕೇಂದ್ರ ಗಂಭೀರವಾಗಿ ಪರಿಗಣಿಸಲಿಲ್ಲ. ಸೋಂಕು ನಿವಾರಣೆಗೆ ಶ್ರಮಿಸುತ್ತಿರುವ ವೈದ್ಯರು, ಪೊಲೀಸರು, ಪೌರಕಾರ್ಮಿಕರು, ಮಾಧ್ಯಮ ಮತ್ತಿತರ ಸೇವೆ ಗಮನಾರ್ಹ ಎಂದು ತಿಳಿಸಿದರು.

    ಸಿದ್ದರಾಮಯ್ಯ ಜಾರಿಗೊಳಿಸಿದ ಅನೇಕ ಭಾಗ್ಯಗಳಿಂದ ಸಂಕಷ್ಟದ ಕಾಲದಲ್ಲಿ ಜನರ ಹಸಿವು ಹಿಂಗಿಸುವ ಕೆಲಸ ಮಾಡುತ್ತಿವೆ. ಲಾಕ್‌ಡೌನ್, ಸೋಂಕಿನ ಅರ್ಭಟ ಯಾವತ್ತೂ ಮುಗಿಯುತ್ತದೆ ಯೋರಿಗೂ ಗೊತ್ತಿಲ್ಲ. ಆದ್ದರಿಂದ ಜನ ಒಪ್ಪತ್ತು ಉಂಡರೂ ಪರವಾಗಿಲ್ಲ, ಮನೆಯಲ್ಲೇ ಇರಬೇಕು ಎಂದು ಮನವಿ ಮಾಡಿದರು.

    ಬೇಸಿಗೆ ಬೇಗೆ ಹೆಚ್ಚುತ್ತಿರುವ ಈ ಸಮಯದಲ್ಲಿ ಜಿಲ್ಲಾಡಳಿತ ಕುಡಿವ ನೀರಿನ ಸಮಸ್ಯೆ ನಿವಾರಣೆ ಕಡೆಯೂ ಗಮನಹರಿಸಬೇಕು ಎಂದು ಒತ್ತಾಯಿಸಿದರು.

    ಸೋಂಕಿಗೆ ರಾಜಕೀಯ, ಧರ್ಮ, ಜಾತಿ ಗೊತ್ತಿರುವುದಿಲ್ಲ. ಇದನ್ನು ಎಲ್ಲ ಪಕ್ಷ, ಧರ್ಮದ ನೇತಾರರು ಅರಿತುಕೊಳ್ಳಬೇಕು. ಕರೊನಾ ವಿರುದ್ಧ ಹೋರಾಡುತ್ತಿರುವವರ ಮೇಲೆ ಯಾರೇ ಹಲ್ಲೆ ಮಾಡಿದರೂ ಅದು ತಪ್ಪೇ. ಅಂತಹವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಎನ್.ಡಿ.ಕುಮಾರ್, ಡಿ.ಎನ್.ಮೈಲಾರಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts