More

    ಹಳ್ಳಿಗಳಲ್ಲಿ ಕರೊನಾ ತಡೆಗೆ ಪಿಡಿಒ ನೇತೃತ್ವದ ತಂಡ

    ಚಿತ್ರದುರ್ಗ: ಗ್ರಾಮೀಣ ಪ್ರದೇಶದಲ್ಲಿ ಕರೊನಾ ಸೋಂಕು ಹರಡದಂತೆ ನಿಗಾ ವಹಿಸಲು ಗ್ರಾಮ ಮಟ್ಟದಲ್ಲಿ ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕತೆರ್ಯರನ್ನೊಳಗೊಂಡ ತಂಡವನ್ನು ರಚಿಸಲಾಗಿದೆ ಎಂದು ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಹೇಳಿದರು.

    ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಟಾಸ್ಕ್ ಪೋರ್ಸ್ ಸಭೆಯ ಲ್ಲಿ ಮಾತನಾಡಿ, ಸಂಬಂಧಿಸಿದ ಇಲಾಖೆಗಳು ಈ ನಿಟ್ಟಿನಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತು ಪ್ರತಿ ದಿನ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದರು.

    ಗ್ರಾಮೀಣರಲ್ಲಿ ಶುಚಿತ್ವದ ಅರಿವು ಮೂಡಿಸುವ ಜತೆಗೆ ಔಷಧ ಸಿಂಪಡಣೆ ಮೇಲೆ ನಿಗಾ ಇಡಬೇಕು. ವಿದೇಶದಿಂದ ಮರಳಿದವರ ಮಾಹಿತಿ ತಪ್ಪದೇ ಕೊಡ ಬೇಕು ಎಂದು ತಿಳಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ,ಕರೊನಾ ವೈರಸ್ ಕುರಿತು ಆತಂಕ ಬೇಡ. ಎಲ್ಲರೂ ಮಾಸ್ಕ್ ಧರಿಸಬೇಕಿಲ್ಲ. ನೆಗಡಿ,ಕೆಮ್ಮು, ಜ್ವರದಿಂದ ಬಳಲುತ್ತಿರುವವರು ಮಾಸ್ಕ್ ಧರಿಸಿದರೆ ಸಾಕು ಎಂದರು.

    ಕರೊನಾ ಹೆಚ್ಚು ಆತಂಕವಿಲ್ಲದ ಸೋಂಕು. ಆದರೂ ಮುಂಜಾಗ್ರತಾ ಕ್ರಮವಾಗಿ ಪದೆ, ಪದೇ ಕೈಗಳನ್ನು ಸ್ವಚ್ಛಗೊಳಿಸಬೇಕು. ಕಣ್ಣು, ಕಿವಿ,ಮೂಗು,ಬಾಯಿ ಮುಟ್ಟಿ ಕೊಳ್ಳಬಾರದು. ಸೀನುವಾಗ, ಕೆಮ್ಮುವಾಗ ಕರವಸ್ತ್ರ ಬಳಸಬೇಕು, ಕಂಡಕಂಡಲ್ಲಿ ಉಗುಳಬಾರದು.

    ರಾಜ್ಯದಲ್ಲಿ ಬೆಂಗಳೂರು,ಶಿವಮೊಗ್ಗ, ಹಾಸನ,ಮೈಸೂರು ಸೇರಿ ಐದು ಭಾಗ ಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ ಎಂದು ಮಾಹಿತಿ ನೀಡಿದರು.

    ಸಂಪನ್ಮೂಲ ವ್ಯಕ್ತಿ ಡಾ.ಭಾಗ್ಯಶ್ರೀ ಮತನಾಡಿ, ಸೋಂಕಿನ ಬಗ್ಗೆ ಭಯ ಬೇಡ. ವೈಯಕ್ತಿಕ ಸ್ವಚ್ಚತೆ ಮುಖ್ಯ. ಉಷ್ಣಾಂಶ ಹೆಚ್ಚಿರುವ ಪ್ರದೇಶವೆಂದು ಮುನ್ನೆಚ್ಚರಿಕೆ ಕ್ರಮಗಳಲ್ಲಿ ನಿರ್ಲಕ್ಷ ಬೇಡ ಎಂದರು.

    ತಾಪಂ ಇಒ ಎಚ್.ಕೃಷ್ಣನಾಯ್ಕ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸುವಾಗ 5 ಕ್ಕಿಂತ ಹೆಚ್ಚು ಜನರನ್ನು ಗುಂಪಾಗಿ ನಿಲ್ಲಸದಂತೆ ಎಚ್ಚರವಹಿಸಬೇಕು ಎಂದರು.

    ನಗರಸಭೆ ಪೌರಯುಕ್ತ ಜೆ.ಟಿ.ಹನುಮಂತರಾಜ್ ಮಾತನಾಡಿ,ಬೀದಿ ಬದಿ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿದ್ದಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್ ಮಂಜುನಾಥ್, ಬಸವೇಶ್ವರ ವೈದ್ಯಕೀಯ ಕಾಲೇಜು, ಸಮುದಾಯ ಔಷಧ ವಿಭಾಗದ ಸಿಬ್ಬಂದಿ, ಗ್ರಾಪಂಗಳ ಪಿಡಿಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts