More

    ಕಠಿಣ ಶ್ರಮ ತರಲಿದೆ ಯಶಸ್ಸು

    ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯವ್ಯಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಕಾಯ್ದಿರಿಸಿವೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

    ನಗರದ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ಬಿಎಸ್ಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಉಚಿತವಾಗಿ ವಿತರಿಸಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಜಯ ಸಾಧಿಸಲು ಕಠಿಣ ಪರಿಶ್ರಮ ಅಗತ್ಯ ಎಂದರು.

    ವಿದ್ಯಾರ್ಜನೆ ವೇಳೆ ಅನ್ಯ ಹವ್ಯಾಸಗಳೆಡೆ ಸೆಳೆತಕ್ಕೆ ಒಳಗಾಗದೆ ಗುರಿ ಸಾಧಿಸಬೇಕು. ಸೂಕ್ತ ಪ್ರೋತ್ಸಾಹ ದೊರಕಿದರೆ ಪ್ರತಿಭಾವಂಥ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

    ವಿಜ್ಞಾನ ಮತ್ತು ಕಲಾ ಕಾಲೇಜಿಗಳಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕಾಗಿ ತಲಾ 3.50 ಕೋಟಿ ರೂ. ಅನುದಾನ, ಸಿ.ಸಿ.ರಸ್ತೆ ನಿರ್ಮಾಣವಾಗಲಿದೆ ಎಂದು ಅವರು, ಕಾಲೇಜು ಆವರಣ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳುವಂತೆ ಪ್ರಾಂಶುಪಾಲ ಪ್ರೊ.ಕೆ.ಆರ್.ರಂಗಸ್ವಾಮಿ ಸೂಚಿಸಿದರು.

    ಉಪ ಪ್ರಾಂಶುಪಾಲ ಡಾ.ಎಚ್.ಗೋಪಾಲಪ್ಪ, ಡಾ.ರಮೇಶ್ ಎಚ್.ರಟಿಗೇರಿ, ಪ್ರೊ.ಚನ್ನಕೇಶವ ಮತ್ತಿತರರು ಇದ್ದರು.

    ಪ್ರೊ.ಶೋಭಾ ದಳವಾಯಿ ಪ್ರಾರ್ಥಿಸಿದರು. ಡಾ.ಅರುಣ್ ಸ್ವಾಗತಿಸಿದರು. ಪ್ರೊ.ನಟೇಶ್ ವಂದಿಸಿದರು. ನಾಗರಾಜ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts