More

    ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯದ ಅರಿವು ಅಗತ್ಯ

    ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ಸಂವಿಧಾನದ ಮೂಲ ಆಶಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.

    ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಹಾಗೂ ಮೈಸೂರು ರಂಗಾ ಯಣ ಆಯೋಜಿಸಿದ್ದ ಸಂವಿಧಾನ ಕುರಿತ ಸೂತ್ರಧಾರ ನಾಟಕೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಲ್ಲ. ಸರ್ವರ ಶ್ರೇಯೋಭಿವೃದ್ಧಿಗಾಗಿ ಅವರು ರಚಿಸಿದ ಸಂವಿಧಾನ ಜಗತ್ತು ಇರುವವರೆಗೂ ಶಾಶ್ವತವಾಗಿರುತ್ತದೆ. ಅವರ ಮಾದರಿ ಜೀವನ ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದರು.

    ಪರಿಷತ್ ಜಿಲ್ಲಾ ಸಂಚಾಲಕ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಮೀಸಲಾತಿ ಎಂದರೆ ನ್ಯಾಯದಾನ. ಎಲ್ಲ ಜಾತಿಗೂ ಪ್ರಾತಿನಿಧ್ಯ ನೀಡುವುದು ಎಂದರ್ಥ. ಎಸ್‌ಸಿ, ಎಸ್‌ಟಿ ಅಲ್ಲದೇ, ಭಾರತದ ಪ್ರತಿ ಜಾತಿಯೂ ಮೀಸಲು ಸೌಲಭ್ಯ ಅನುಭವಿಸುತ್ತಿವೆ. 2019ರಿಂದ ಮೇಲು ಜಾತಿಯ ಬಡವರಿಗೂ ಶೇ.10 ಮೀಸಲಾತಿ ಸೌಲಭ್ಯ ಲಭ್ಯವಾಗಿದೆ ಎಂದು ಹೇಳಿದರು.

    ಉಪನ್ಯಾಸಕ ಡಾ.ಮೋಹನ್ ಪ್ರಾಸ್ತಾವಿಕ ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲೇಶ್, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ನಿವೃತ್ತ ಪ್ರಾಂಶುಪಾಲ ಪ್ರೊ.ಜೆ.ಯಾದವರೆಡ್ಡಿ, ನಿವೃತ್ತ ಅಧಿಕಾರಿಗಳಾದ ಎಂ.ಮಲ್ಲಯ್ಯ, ಸಿದ್ದಪ್ಪ, ಬಿ.ಪಿ.ಪ್ರೇಮನಾಥ್, ತುರುವನೂರು ಜಗನ್ನಾಥ್, ಪ್ರಾಚಾರ್ಯೆ ಸಿದ್ದಗಂಗಮ್ಮ, ರಾಷ್ಟ್ರೀಯ ಪ್ರಬುದ್ಧ ಸೇನೆ ರಾಜ್ಯಾಧ್ಯಕ್ಷ ಅವಿನಾಶ್, ಉಪನ್ಯಾಸಕ ಚನ್ನಬಸಪ್ಪ, ಯಶೋಧ, ಪುಷ್ಪಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts