More

    ಪ್ರಶಸ್ತಿ ಪಡೆದವರಷ್ಟೇ ಮೇದಾವಿಗಳಲ್ಲ

    ಚಿತ್ರದುರ್ಗ: ಕಾಲಮಾನದ ದೌರ್ಜನ್ಯಗಳಿಗೆ ಲೇಖಕರು ಕನ್ನಡಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜಸ್ಯಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದರು.

    ಅಂಬೇಡ್ಕರ್ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಐಎಂಎ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್.ಆರ್.ಗುರುನಾಥ್ ಸಾಹಿತ್ಯ ಮತ್ತು ಸಂಶೋಧನೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನಮ್ಮ ದೇಶದಲ್ಲಿ ಪ್ರತಿ 90 ನಿಮಿಷಕ್ಕೊಮ್ಮೆ ಹೆಣ್ಣಿನ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಸರ್ಕಾರಗಳು ಹೇಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು. ಬರ್ಬರ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನುವುದಕ್ಕೆ ಉದಾಹಣೆಯಾಗಿ ಹಥ್ರಾಸ್ ಪ್ರಕರಣ ನಮ್ಮ ಮುಂದಿದೆ ಎಂದು ತೀವ್ರ ಆತಂಕ, ಆಕ್ರೋಶ ವ್ಯಕ್ತಪಡಿಸಿದರು.

    ಒಳ್ಳೆಯದನ್ನು ಮೆಚ್ಚುವ, ಕೆಟ್ಟದ್ದನ್ನು ನಿಷ್ಠುರವಾಗಿ ಖಂಡಿಸುವ ಕೆಲಸಗಳನ್ನು ಅನೇಕ ಸಾಹಿತಿಗಳು ಈಗಲೂ ಮಾಡುತ್ತಿದ್ದಾರೆ. ಅದರಲ್ಲಿ ಎಸ್.ಆರ್.ಗುರುನಾಥ್ ಒಬ್ಬರಾಗಿದ್ದರು ಎಂದರು.

    ಟೀಕೆ, ಮೆಚ್ಚುಗೆ ಸ್ವೀಕರಿಸುವವರು ಆದರ್ಶ ವ್ಯಕ್ತಿಗಳಾಗುತ್ತಾರೆ. ಗುರುನಾಥ್ ಅವರಲ್ಲಿ ಅಂಥ ಸಮಚಿತ್ತವಿತ್ತು. ಒಳಗೆ ಸಾಕಷ್ಟು ನೋವಿದ್ದರು, ಎಲ್ಲೂ ಆಕ್ರೋಶವನ್ನು ಹೊರ ಹಾಕುತ್ತಿರಲಿಲ್ಲ. ಚಿತ್ರದುರ್ಗದಲ್ಲಿರುವ ಅನೇಕ ಲೇಖಕರು ಪ್ರಶಸ್ತಿ, ಪುರಸ್ಕಾರಗಳನ್ನು ಬಯಸದೇ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

    ಬೆಂಗಳೂರಿನಲ್ಲಿ ಪ್ರಶಸ್ತಿ ಪಡೆಯುವವರು ದೊಡ್ಡ ಮೇದಾವಿಗಳೆಂದು ಭಾವಿಸುವುದು ತಪ್ಪು. ಜಿಲ್ಲಾ ಮಟ್ಟದಲ್ಲಿರುವ ಲೇಖಕರು, ಹೋರಾಟಗಾರರು ಬೆಳಕಿಗೆ ಬರುವುದಿಲ್ಲ. ಅವಿವೇಕಿ ಸಮಾಜವನ್ನು ವಿವೇಕಿ ಸಮಾಜವನ್ನಾಗಿ ತಿದ್ದುವ ಕೆಲಸವಾದಾಗ ಗುರುನಾಥ್ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ ಎಂದರು.

    ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಾಂತೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಉಪನ್ಯಾಸಕ ಡಾ.ಎಂ.ಚಿತ್ರಲಿಂಗಸ್ವಾಮಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದಾಸೇಗೌಡ, ಸಮತಾ ಸಾಹಿತ್ಯ ವೇದಿಕೆ ಅಧ್ಯಕ್ಷ ಪರಶುರಾಮ್ ಗೊರಪ್ಪ ಮಾತನಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ.ಬಿ.ಎಂ.ಗುರುನಾಥ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts