More

    ಅವ್ಯವಹಾರ ಆರೋಪ ತನಿಖೆಗೆ ಭೇಟಿ

    ಚಿತ್ರದುರ್ಗ: ತಾಲೂಕಿನ ಎಲ್ಲ 38 ಗ್ರಾಪಂ ಕಚೇರಿಗಳಿಗೂ ಶೀಘ್ರದಲ್ಲೇ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುವುದಾಗಿ ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು ಹೇಳಿದರು.

    ಬುಧವಾರ ತಾಪಂ ಸಾಮಾನ್ಯ ಸಭೆಯಲ್ಲಿ ವೇಣುಗೋಪಾಲ್ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಹಿರೇಗುಂಟನೂರು ಗ್ರಾಪಂನಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇಒ ಜತೆ ಜೂ.22ರಂದು ಅಲ್ಲಿಗೆ ಭೇಟಿ ನೀಡಿ ತನಿಖೆ ನಡೆಸಲಾಗುವುದು ಎಂದರು.

    ಎಲ್ಲ ಸದಸ್ಯರ ಕ್ಷೇತ್ರಗಳಿಗೂ ಅನುದಾನ ಸಮಾನ ಹಂಚಿಕೆ ಮಾಡಲಾಗುತ್ತಿದೆ, ಎಲ್ಲೂ ತಾರತಮ್ಯ ಮಾಡುವುದಿಲ್ಲ. ತಾಪಂ ಆಸ್ತಿ ದಾಖಲೆಗಳನ್ನು ಪತ್ತೆಯಾಗಿವೆ ಎಂದು ತಿಳಿಸಿದರು.

    ಹಿರೇಗುಂಟನೂರು ಪಂಚಾಯಿತಿಯಲ್ಲಿ ಸಾಕಷ್ಟು ಹಗರಣಗಳಾಗಿವೆ. 4 ವರ್ಷಗಳಿಂದ ತನಿಖೆಗೆ ಒತ್ತಾಯಿಸುತ್ತಿರುವುದಾಗಿ ಎಂದು ಸುರೇಶ್ ಹೇಳಿದರು.

    ಅವ್ಯವಹಾರಗಳಿಂದಾಗಿ ಈ ಪಂಚಾಯಿತಿಗೆ ಪಿಡಿಒಗಳು ಬರಲು ಇಷ್ಟಪಡುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಎಲ್ಲದ್ದಕ್ಕೂ ಕಮಿಷನ್ ಕೇಳುತ್ತಾರೆಂದು ಸದಸ್ಯ ಪರಮೇಶ್ವರಪ್ಪ ದೂರಿದರು.

    ಕರಿಯಣ್ಣ ಮತ್ತಿತರ ಸದಸ್ಯರು ಚರ್ಚೆಯಲ್ಲಿದ್ದರು. ಉಪಾಧ್ಯಕ್ಷೆ ಶಾಂತಮ್ಮ ರೇವಣಸಿದ್ದಪ್ಪ, ಜೀವ ವೈವಿಧ್ಯ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ, ಇಒ ಎಚ್.ಕೃಷ್ಣಾನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts