More

    ವಿಜ್ಞಾನದ ಮುಂದೆ ಎಲ್ಲರೂ ಚಿಕ್ಕವರು

    ಚಿತ್ರದುರ್ಗ: ವಿಜ್ಞಾನದ ಮುಂದೆ ಎಲ್ಲರೂ ಚಿಕ್ಕವರೆಂದು ದೇವರಾಜ ಅರಸು ಶಿಕ್ಷಣ ಸಂಸ್ಥೆ ಸಿಇಒ ಎಂ.ಸಿ.ರಘುಚಂದನ್ ಹೇಳಿದರು.

    ಜಿಪಂ, ಶಿಕ್ಷಣ ಇಲಾಖೆ ಹಾಗೂ ಡಯಟ್ ಆಶ್ರಯದಲ್ಲಿ ಜಿಲ್ಲೆ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಗರದ ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಇನ್‌ಸ್ಪೈರ್ ಆವಾರ್ಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಪಾತ್ರ ಹಿರಿದು. ಶಿಕ್ಷಕರು ವಿಜ್ಞಾನ ಅಧ್ಯಯನ, ವೈಜ್ಞಾನಿಕ ಮನೋಭಾವ ರೂಢಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದರು.

    ಸಿಟಿಇ ಪ್ರವಾಚಕ ಎಸ್.ಕೆ.ಬಿ.ಪ್ರಸಾದ್ ಮಾತನಾಡಿ, ಈ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಉತ್ತ ಮ ಸ್ವರೂಪವನ್ನು ಪಡೆದು ಕೊಳ್ಳುತ್ತಿದೆ. ಜಗತ್ತಿನಲ್ಲಿ ಭಾರತೀಯ ವಿಜ್ಞಾನಿಗಳ ಸಾಧನೆ ಗಣನೀಯವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಚಿಕ್ಕನಿಂದಲೇ ಮಕ್ಕಳನ್ನು ಪ್ರೆರೇಪಿಸಿದರೆ ಭವಿಷ್ಯದಲ್ಲಿ ಅವರು ವಿಜ್ಞಾನಿಗಳ ಆಗಬಹುದು ಎಂದು ಹೇಳಿದರು.

    ಶಿವಮೊಗ್ಗ ಡಿಡಿಪಿಐ ಎನ್.ಎಂ.ರಮೇಶ್ ಮಾತನಾಡಿ, ಇಡೀ ಜಗತ್ತು ವಿಜ್ಞಾನ, ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಯಾವ ದೇಶ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತದೆಯೋ ಅಂತಹ ದೇಶ ಪ್ರಗತಿ ಸಾಧಿಸಲಿದೆ ಎಂದರು.

    ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು ಮಾತನಾಡಿ, ಶಿಕ್ಷಣ ಇಲಾಖೆಯ 10 ವರ್ಷಗಳ ಶ್ರಮದಿಂದ ಕಾರ್ಯಕ್ರಮ ಲಪ್ರದವಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮ ನೋಡಲ್ ಅಧಿಕಾರಿ ಭರಮಪ್ಪ ಮೈಸೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

    ತಾಪಂ ಉಪಾಧ್ಯಕ್ಷೆ ಶಾಂತಮ್ಮ ರೇವಣಸಿದ್ದಪ್ಪ, ಡಯಟ್ ಉಪನಿರ್ದೇಶಕ ಕೆ.ಕೋದಂಡರಾಮ, ಶಿಕ್ಷಕರ ಸರಕಾರಿ ಶಿಕ್ಷಣ ಮಹಾ ವಿದ್ಯಾಲಯದ ಜಿ.ರುದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ್, ಕಾರ್ಯದರ್ಶಿ ಮಹಂತೇಶ್, ತಾಲೂಕು ಅಧ್ಯಕ್ಷ ಚಿದಾನಂದಪ್ಪ, ಬಿಇಒ ಬಿ.ಸಿದ್ದಪ್ಪ, ತೀರ್ಪುಗಾರ್ತಿ ಗುಜರಾತ್ ಡಾ.ದೀಕ್ಷಾಕುಂದರ್, ಸರಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.

    ವಿವಿಧ ಮಾದರಿಗಳ ಅನಾವರಣ: ಶಿಕ್ಷಕರ ಮಾರ್ಗದರ್ಶನದಲ್ಲಿ ಒಡಮೂಡಿದ ನಾನಾ ವಿಜ್ಞಾನ ಮಾದರಿಗಳು ಪ್ರದರ್ಶಿಸಲಾಗಿತ್ತು. ವನ್ಯಜೀವಿ-ಮಾನವ ಸಂಘರ್ಷ, ಆಟೊಮ್ಯಾಟಿಕ್ ರೈಲ್ವೆ ಗೇಟ್, ವಾಟರ್ ಅಲರಾಂ, ಖಗೋಳ ವೀಕ್ಷಣಾಲಯ ಇತ್ಯಾದಿ ಜಿಲ್ಲೆಯ 350 ಶಾಲೆಗಳ ವಿದ್ಯಾರ್ಥಿಗಳು 475ಕ್ಕೂ ಹೆಚ್ಚು ಮಾದರಿಗಳನ್ನು ಸಿದ್ಧಪಡಿಸಿದ್ದರು. ಇವುಗಳಲ್ಲಿ ಅತ್ಯುತ್ತಮ 50 ಮಾದರಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts