More

    ಪರೀಕ್ಷೆ ಧಾವಂತ, ಪರಸ್ಪರ ಅಂತರ ಕಣ್ಮರೆ

    ಚಿತ್ರದುರ್ಗ: ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಗುರುವಾರ ಜಿಲ್ಲೆಯ 20 ಕೇಂದ್ರಗಳಲ್ಲಿ ಜರುಗಿತು.

    ಪರೀಕ್ಷೆಗೆ ನೋಂದಣಿಯಾಗಿದ್ದ 15,385ರಲ್ಲಿ 14,345 ಪರೀಕ್ಷೆಗೆ ಹಾಜರಾಗಿದ್ದು, 1040 ವಿದ್ಯಾರ್ಥಿಗಳು ಗೈರಾಗಿದ್ದರು.

    ಜಿಲ್ಲೆಯ 13532 ಹಾಗೂ ಹೊರ ಜಿಲ್ಲೆಯ 813 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜಿಲ್ಲೆಯ 1031 ಹಾಗೂ 9 ವಿದ್ಯಾರ್ಥಿಗಳು ಹೊರ ಜಿಲ್ಲೆಯ ವಿದ್ಯಾರ್ಥಿಗಳು ಗೈರಾಗಿದ್ದರು.

    ಈ ವಿಷಯದೊಂದಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2020 ಮುಕ್ತಾಯಗೊಂಡಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಶೋಭಾ ತಿಳಿಸಿದ್ದಾರೆ.

    ಬೆಳಗ್ಗೆ 10.15ಕ್ಕೆ ಪರೀಕ್ಷಾ ಸಮಯ ನಿಗದಿ ಆಗಿದ್ದರೂ, ವಿದ್ಯಾರ್ಥಿಗಳಿಗೆ 8.30ಕ್ಕೆ ಹಾಜರಿರುವಂತೆ ತಿಳಿಸಲಾಗಿತ್ತು. ಬಹುತೇಕ ಎಲ್ಲ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳೆದುರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದಾಗಿ ಹಲವೆಡೆ ಪರಸ್ಪರ ಅಂತರವೇ ಸಂಪೂರ್ಣ ಮಾಯವಾಗಿತ್ತು.

    ಆನಂತರದಲ್ಲಿ ಹಲವು ಕೇಂದ್ರಗಳಲ್ಲಿ ಎಚ್ಚೆತ್ತ ಸಿಬ್ಬಂದಿ, ವಿದ್ಯಾರ್ಥಿಗಳನ್ನು ಸರತಿಯಲ್ಲಿ ನಿಲ್ಲಿಸಿ ಕೇಂದ್ರಕ್ಕೆ ಪ್ರವೇಶವಾಕಾಶ ಕಲ್ಪಿಸಿದರು. ಅದಕ್ಕೂ ಮೊದಲು ಮಾಸ್ಕ್ ಧರಿಸಿದ್ದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಬಳಸಲು ಸೂಚಿಸಲಾಗುತ್ತಿತ್ತು.

    ಒಂದು ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 24ಕ್ಕೆ ಸೀಮಿತಗೊಳಿಸಲಾಗಿತ್ತು. ಆದ್ದರಿಂದ ಜಿಲ್ಲಾದ್ಯಂತ 682 ಕೊಠಡಿಗಳಲ್ಲಿ ಪರೀಕ್ಷೆ ನಡೆಯಿತು. ಚಿತ್ರದುರ್ಗ ಬಾಲಕಿಯರ ಸರ್ಕಾರಿ ಕಾಲೇಜು ಕೇಂದ್ರದಲ್ಲಿ 1020 ವಿದ್ಯಾರ್ಥಿಗಳಿಗಾಗಿ ಕೋಟೆ ಶಾಲೆ ಮತ್ತು ಕಂಪಳ ರಂಗ ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು ಪಡೆಯಲಾಗಿತ್ತು.

    ಕಂಪಳರಂಗ ಕಾಲೇಜು ಕೊಠಡಿಯೊಂದರಲ್ಲಿ ಬೆಳಕು ಸಾಲದೆಂಬ ಕಾರಣಕ್ಕೆ ಕೂಡಲೇ ಟ್ಯೂಬ್‌ಲೈಟ್ ವ್ಯವಸ್ಥೆ ಕಲ್ಪಿಸಲಾಯಿತು. ಹಲವೆಡೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲುಪಲು ಸಾರಿಗೆ ಸಮಸ್ಯೆ ಆಯಿತು. ಇದರಿಂದಾಗಿ ದ್ವಿಚಕ್ರಗಳಲ್ಲಿ ಇಬ್ಬರು-ಮೂವರಂತೆ ಹಾಗೂ ಮತ್ತಿತರರ ವಾಹನಗಳಲ್ಲಿ ವಿದ್ಯಾರ್ಥಿಗಳು ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts